ವಿದ್ಯುತ್ ತಂತಿ ತಗುಲಿ ಮೇವು ಸಮೇತ ಲಾರಿ ಭಸ್ಮ|ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಬಳಿ ನಡೆದ ಘಟನೆ|ಗಣೇಶವಾಡಿಯಿಂದ ವಿಜಯಪುರಕ್ಕೆ ಹೋಗುತಿದ್ದ ಲಾರಿಗೆ ಹೊತ್ತಿಕೊಂಡ ಬೆಂಕಿ| ಲಕ್ಷಾಂತರ ರು. ನಷ್ಟ|
ಕಾಗವಾಡ[ಮಾ.02]: ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ನಿಂದ ಒಣ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಬಳಿ ಭಾನುವಾರ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಗಣೇಶವಾಡಿಯಿಂದ ವಿಜಯಪುರಕ್ಕೆ ಹೋಗುತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಕ್ಷಣಮಾತ್ರದಲ್ಲಿ ಹೊತ್ತಿ ಉರಿದು, ಅಪಾರ ಪ್ರಮಾಣದ ಮೇವು ಬೆಂಕಿಗಾಹುತಿಯಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶಾರ್ಟ್ ಸರ್ಕ್ಯೂಟ್ ನಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬರುವುದರೊಳಗೆ ಲಾರಿ ಸುಟ್ಟು ಭಸ್ಮವಾಗಿತ್ತು. ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.