ದೇವತೆಗಳನ್ನು ಪೂಜಿಸುವ ಅರ್ಚಕರು ಮಹಾನ್‌ ಶಕ್ತಿವಂತರು: ಸಚಿವ ಬಿ.ಸಿ.ಪಾಟೀಲ

By Kannadaprabha News  |  First Published Feb 13, 2023, 10:14 AM IST

ದೇವಾನುದೇವತೆಗಳನ್ನು ಪೂಜಿಸುವ ಅರ್ಚಕರು ಮಹಾನ್‌ ಶಕ್ತಿವಂತರು. ಅವರು ಪಡೆದ ದೈವ ಶಕ್ತಿಯನ್ನು ನಮಗೂ ಸಿಗಲೆಂದು ಭಕ್ತರಾದ ನಾವು ಅವರ ಪಾದ ಮುಟ್ಟಿನಮಸ್ಕರಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.


ಹಿರೇಕೆರೂರ (ಫೆ.13) : ದೇವಾನುದೇವತೆಗಳನ್ನು ಪೂಜಿಸುವ ಅರ್ಚಕರು ಮಹಾನ್‌ ಶಕ್ತಿವಂತರು. ಅವರು ಪಡೆದ ದೈವ ಶಕ್ತಿಯನ್ನು ನಮಗೂ ಸಿಗಲೆಂದು ಭಕ್ತರಾದ ನಾವು ಅವರ ಪಾದ ಮುಟ್ಟಿನಮಸ್ಕರಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಅರ್ಚಕರ ಸಮಾವೇಶದಲ್ಲಿ ಮಾತನಾಡಿದರು. ದೇವರನ್ನು ತಮ್ಮ ಧ್ಯಾನ, ಅರ್ಚನೆ ಮಂತ್ರ ಶಕ್ತಿಯಿಂದ ಪೂಜಿಸಿ ಅವರ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ತಾವು ಪಡೆದ ದೈವಶಕ್ತಿಯನ್ನು ಹರಿಸುವ ಮೂಲಕ ಧರ್ಮದ ಪ್ರಭಾವವನ್ನು ಹೆಚ್ಚು ಮಾಡುತ್ತಾರೆ. ಕಲಿಯುಗದಲ್ಲಿ ದೇವರನ್ನು ಕಾಣಲು ಯಾರಿಂದಲೂ ಸಾಧ್ಯವಾಗಿಲ್ಲ. ಯಾವುದೆ ಆಸೆಗಳಿಗೆ ಬಲಿಯಾಗದ ಅರ್ಚಕರು ಸಮಾಜಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಪರಮಾತ್ಮನನ್ನು ಮುಟ್ಟಿಪೂಜಿಸುವ ಅವಕಾಶ ದೊರೆತಿರುವ ಅರ್ಚಕರು ಬಡವರಲ್ಲ ಅವರು ಶ್ರೀಮಂತರು. ಅರ್ಚಕರಿಗೆ ದೇವರ ಅನುಗ್ರಹವಾದರೆ ಅರ್ಚಕರ ಮೂಲಕ ಭಕ್ತರಿಗೂ ಅನುಗ್ರಹವಾಗುತ್ತದೆ. ನಮಗೆ ಏನೇ ಕಷ್ಟಪರಿಹಾರವಾಗುತ್ತಿದೆ ಅಲ್ಲದೇ ದೇವಾಲಯಗಳ ಅಭಿವೃದ್ಧಿಯು ಅಲ್ಲಿನ ಅರ್ಚಕರು ಭಕ್ತಾಧಿಗಳಿಗೆ ಸಲ್ಲಿಸುವ ಸೇವೆಯ ಮೇಲೆ ನಿರ್ಧಾರವಾಗುತ್ತದೆ. ಭಕ್ತರ ಸಂಖ್ಯೆಯನ್ನು ಹೆಚ್ಚಿಸುವುದು ಅರ್ಚಕರ ಜವಾಬ್ದಾರಿ ಮಹತ್ವದ್ದಾಗಿದೆ. ಮುಜರಾಯಿ ಇಲಾಖೆಯ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿ. ಅಲ್ಲಿಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ನೀಡಿ ಉತ್ತಮ ಹೆಸರನ್ನು ತಂದು ಪ್ರವಾಸಿ ಸ್ಥಳಗಳನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ಅರ್ಚಕರ ಮೇಲಿದೆ. ಇದರಿಂದ ದೇವಾಲಯಕ್ಕೂ ಆರ್ಥಿಕವಾಗಿ ಸಹಾಯವಾಗುತ್ತದೆ. ಜತೆಗೆ ಅರ್ಚಕರ ಜೀವನವೂ ಸುಧಾರಿಸುತ್ತದೆ. ಭಕ್ತರ ಇಚ್ಛೆಗೆ ಅನುಗುಣವಾಗಿ ಹಾಗೂ ಮುಜರಾಯಿ ಇಲಾಖೆಯ ನಿಯಮಗಳಿಗನುಸಾರವಾಗಿ ಪೂಜಾ ಕೈಂಕರ್ಯಗಳನ್ನು ಮಾಡುವ ಮೂಲಕ ದೇವರನ್ನು ಆರಾಧಿಸಿ ಅರ್ಚಕ ವೃತ್ತಿಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಲೋಕ ಕಲ್ಯಾಣಕ್ಕಾಗಿ ಸಮರ್ಪಣೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅರ್ಚಕರ ಸಮಿತಿ ಸದಸ್ಯರು ಹಾಗೂ ಅರ್ಚಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Tap to resize

Latest Videos

undefined

ರೈತರು ಸಮಗ್ರ ಕೃಷಿ ಮಾಡಿ ಉದ್ಯಮಿಗಳಾಗಿ: ಕೃಷಿ ಸಚಿವ ಬಿ.ಸಿ.ಪಾಟೀಲ್

ಗುಣಮಟ್ಟದ ರಸ್ತೆಗಳಿಂದ ಮಹಾನಗರಗಳಿಗೆ ಸರಕು ಸಾಗಾಟಕ್ಕೆ ಅನುಕೂಲ

ಹಿರೇಕೆರೂರ: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಲ್ಲಿನ ಗುಣಮಟ್ಟದ ರಸ್ತೆಗಳೇ ಕಾರಣ. ಅಚ್ಚುಕಟ್ಟಾದ ರಸ್ತೆಗಳಿದ್ದರೆ ಗ್ರಾಮದಿಂದ ಮಹಾನಗರಗಳಿಗೆ ಸಂಪರ್ಕದಿಂದ ಸರಕು, ಸಾಗಾಟ, ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ(BC Patil) ಹೇಳಿದರು.

ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕಳಗೊಂಡ-ಹಿರೇಮತ್ತೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.

ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳ ರಸ್ತೆಗಳು ದುರಸ್ತಿ ಕಂಡಿದ್ದು, ಸಂಚಾರವೇ ನಿಂತು ಹೋಗಿದ್ದ ಎಷ್ಟೋ ಮಾರ್ಗಗಳು ಈಗ ಸುಗಮವಾಗಿವೆ. ಅಲ್ಲದೇ ಗುಡ್ಡದ ಮಾದಾಪುರ, ಮಡ್ಲೂರ ಏತ ನೀರಾವರಿಯಿಂದ ತಾಲೂಕಿನ ಎಲ್ಲ ಕೆರೆಗಳಿಗೆ ನದಿ ನೀರು ತರುವ ಕಾರ್ಯ ಮಾಡಿದ್ದೇವೆ. ಇದರೊಂದಿಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸವಿದೆ. ನಂತರ ಇನ್ನೂ ಅನೇಕ ಯೋಜನೆಗಳನ್ನು ಮಾಡಿ ಈ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡಿ ಯುವ ಜನತೆಗೆ ಉದ್ಯೋಗ ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು. ಈ ವೇಳೆ ಚಿನ್ನಮುಳಗುಂದ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ . 40 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ, ಅರಳಿಕಟ್ಟಿಗ್ರಾಮದಿಂದ ಬಾವಾಪುರದವರೆಗೆ ಜಿಲ್ಲಾ ಪಂಚಾಯ್ತಿ ವತಿಯಿಂದ . 1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಹಿರೇಬೂದಿಹಾಳ ಗ್ರಾಮದಿಂದ-ಆಣೂರ ವರೆಗೆ ಜಿಲ್ಲಾ ಪಂಚಾಯ್ತಿ ವತಿಯಿಂದ . 80 ಲಕ್ಷ ವೆಚ್ಚದ ರಸ್ತೆ, ಹಿರೇಬೂದಿಹಾಳ-ಗುಡ್ಡದ ಹೊಸಳ್ಳಿ ಗ್ರಾಮಗಳ ನಡುವಿನ ಸಿಡಿ ನಿರ್ಮಾಣಕ್ಕೆ . 60 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ, ನೂಲಗೇರಿ ಗ್ರಾಮದಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯ ಮನೆ ಮನೆಗೆ ನಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ, ಕೋಡ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

 

ಟಾರ್ಗೆಟ್ ಮಾಡಿದವರನ್ನೇ ಸೋಲಿಸುತ್ತೇವೆ: ಬಿ.ಸಿ.ಪಾಟೀಲ್

click me!