ಸವದತ್ತಿ ರೇಣುಕಾದೇವಿ ದೇಗುಲ: ಮೂಢನಂಬಿಕೆ ವಿರೋಧಿಸುವ ಸಚಿವ ಜಾರಕಿಹೊಳಿಗೆ ನಿಂಬೆ ಹಣ್ಣು ನೀಡಿದ ಅರ್ಚಕ!

By Girish Goudar  |  First Published Oct 13, 2024, 2:09 PM IST

ಅರ್ಚಕರು ಕೊಟ್ಟ ಲಿಂಬೆ ಹಣ್ಣು ಇದು, ಅದಕ್ಕೆ ಕೈಯಲ್ಲಿ ಇಟ್ಟುಕೊಂಡಿರುವೆ ಎಂದು ಆಪ್ತ ಶಾಸಕರ ಎದುರು ಈ ಮಾಹಿತಿಯನ್ನ ಹಂಚಿಕೊಂಡ ಸತೀಶ ಜಾರಕಿಹೊಳಿ 


ಬೆಳಗಾವಿ(ಅ.13):  ಸವದತ್ತಿ ರೇಣುಕಾದೇವಿ ದೇಗುಲಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು(ಭಾನುವಾರ) ಆಗಮಿಸಿದ್ದಾರೆ. ಸತೀಶ ಜಾರಕಿಹೊಳಿ ಅವರಿಗೆ ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಹೂಗುಚ್ಚ‌ ನೀಡಿ ಸ್ವಾಗತಿಸಿದ್ದಾರೆ. 

ಈ ವೇಳೆ ಸಚಿವ ಸತೀಶ ಜಾರಕಿಹೊಳಿಗೆ ದೇಗುಲದ ಅರ್ಚಕ ಲಿಂಬೆ ಹಣ್ಣು ನೀಡಿದ್ದಾರೆ. ಸವದತ್ತಿ ರೇಣುಕಾದೇವಿ ದೇಗುಲದ ಅರ್ಚಕರಿಂದ ಸತೀಶಗೆ ಲಿಂಬೆ ಹಣ್ಣು ವಿತರಣೆ ಮಾಡಿದ್ದಾರೆ.  ಕೈಯಲ್ಲೇ ಲಿಂಬೆ ಹಣ್ಣು ಹಿಡಿದುಕೊಂಡು ಸಿಎಂ ಸಿದ್ದರಾಮಯ್ಯ ಬರುವಿಕೆಗೆ ಸತೀಶ ಜಾರಕಿಹೊಳಿ ಅವರು ಕಾದು ಕುಳಿತಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಮೂಢನಂಬಿಕೆ  ವಿರೋಧಿಸುತ್ತಾರೆ. 

Tap to resize

Latest Videos

undefined

2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ: ಸಚಿವ ಸತೀಶ್‌ ಜಾರಕಿಹೊಳಿ

ಅರ್ಚಕರು ಕೊಟ್ಟ ಲಿಂಬೆ ಹಣ್ಣು ಇದು, ಅದಕ್ಕೆ ಕೈಯಲ್ಲಿ ಇಟ್ಟುಕೊಂಡಿರುವೆ ಎಂದು ಆಪ್ತ ಶಾಸಕರ ಎದುರು ಈ ಮಾಹಿತಿಯನ್ನ ಸತೀಶ ಜಾರಕಿಹೊಳಿ ಅವರು ಹಂಚಿಕೊಂಡಿದ್ದಾರೆ. 

click me!