ತಿಥಿಗೆ ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು !

Published : Sep 05, 2019, 11:02 AM IST
ತಿಥಿಗೆ  ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು !

ಸಾರಾಂಶ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೀಗ ಮತ್ತೆ ಭಾರೀ ಮಳೆ ಆರಂಭವಾಗಿದೆ. ಮತ್ತೆ ಅವಾಂತರ ಸೃಷ್ಟಿ ಮಾಡಿದೆ.  ಉತ್ತರ ಕನ್ನಡದ ಯಲ್ಲಾಪುರದಲ್ಲಿಯೂ ಹಳ್ಳ ದಾಟಲಾಗದ ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು. 

ಕಾರವಾರ [ಸೆ.05] : ತುಂಬಿ ಹರಿಯುತ್ತಿರುವ ಹಳ್ಳ ದಾಟಲಾರದೆ ತಿಥಿ ನಡೆಸಲು ಪುರೋಹಿತರು ಬಾರದಿದ್ದಾಗ ಬೇರೆ ದಾರಿಯೆ ಇಲ್ಲದೆ ಪುರೋ ಹಿತರನ್ನು ಬೆತ್ತದ ಬುಟ್ಟಿ ಯಲ್ಲಿ ಹೊತ್ತು ತಂದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ. 

ಯಲ್ಲಾಪುರದ ದಬ್ಬೇಸಾಲದ ದೊಡ್ಮನೆಯಲ್ಲಿ ಬುಧವಾರ ತಿಥಿ ಇತ್ತು. ಪುರೋಹಿತರಾದ ಭಾವಯ್ಯ ಭಟ್ಟರು ಅರ್ಧ ದಾರಿಗೆ ಬಂದರೆ ಹಳ್ಳ ತುಂಬಿ ಹರಿಯುತ್ತಿತ್ತು. ಅಡಕೆ ಮರದ ದಿಮ್ಮಿ ಬಳಸಿ ಹಳ್ಳಕ್ಕೆ ಹಾಕಲಾಗಿದ್ದ ಕಾಲು ಸಂಕ ದಾಟಲು ಸಾಧ್ಯವಾಗದಿದ್ದಾಗ ಆಗ ಮನೆಯವರು ಬೆತ್ತದ ಬುಟ್ಟಿಯಲ್ಲಿ ಪುರೋಹಿತರನ್ನು ಕುಳ್ಳಿರಿಸಿ ಸಂಕ ದಾಟಿಸಿದರು. ಅಂತೂ ತಿಥಿ ನೆರವೇರಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತ್ತ ಕರಾವಳಿಯಲ್ಲಿ ಅಲರ್ಟ್ ನೀಡಲಾಗಿದೆ. 

PREV
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್