ಡಿ. ಕೆ. ಶಿವಕುಮಾರ್ ಬಂಧನವನ್ನು ವಿರೋಧಿಸಿ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಮೌನವ್ರತ ತಾಳಿದ್ದು, ಯಾರೊಂದಿಗೆ ಮಾತನಾಡಿಲ್ಲ. ಗೌರಿಹಬ್ಬದ ದಿನ ಮಗ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ರಾಮನಗರ(ಸೆ.05) : ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಮೌನವ್ರತ ತಾಳಿದ್ದು, ಯಾರೊಂದಿಗೆ ಮಾತನಾಡಿಲ್ಲ. ಗೌರಿಹಬ್ಬದ ದಿನ ಮಗ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೌರಮ್ಮ ಅವರು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.
ಡಿಕೆಶಿ ಅರೆಸ್ಟ್: ಗುರುವಾರ ರಾಮನಗರ ಬಂದ್, ಶಾಲಾ-ಕಾಲೇಜುಗಳ ರಜೆ ಮುಂದುವರಿಕೆ
ಡಿಕೆಶಿ ಕ್ಷೇಮವಾಗಿರಲಿ ಎಂದು ಕನಕಪುರದ ಶಕ್ತಿ ದೇವತೆಯಾದ ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಡಿಕೆಶಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಅಣಕು ಶವಯಾತ್ರೆ:
ಡಿ.ಕೆ.ಶಿವಕುಮಾರ್ ಅವರ ಸ್ವ ಗ್ರಾಮ ದೊಡ್ಡಾಲಹಳ್ಳಿಯಲ್ಲಿ ಮೋದಿ ಹಾಗು ಅಮಿತ್ ಶಾ ಅವರ ಅಣಕು ಶವಯಾತ್ರೆ ಮಾಡಿ ಕಾರ‍್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರೆ, ಇದೇ ಗ್ರಾಮದಲ್ಲಿ ಡಿಕೆಶಿ ಅವರ ಇಬ್ಬರು ಅಭಿಮಾನಿಗಳು ಕೇಶ ಮುಂಡನ ಮಾಡಿಸಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.