Davanagere: ಬೀರಲಿಂಗೇಶ್ವರ ದೇವಾಲಯದ ಅರ್ಚಕ ವೃತ್ತಿ ಮಾಡಲು ಅಡ್ಡಿ, ಆರೋಪ

By Suvarna NewsFirst Published Feb 11, 2023, 6:30 PM IST
Highlights

ದಾವಣಗೆರೆ ಹೈಸ್ಕೂಲ್ ಮೈದಾನದ ಬಳಿಯಿರುವ  ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕನಾಗಿ ಕಾರ್ಯನಿರ್ವಹಿಸಲು ಅಡ್ಡಿ ಪಡಿಸಿದ್ದು  ಅರ್ಚಕರ ಕೆಲಸದಿಂದ ವಜಾ ಮಾಡಿದ್ದಾರೆ. ಧಾರ್ಮಿಕದತ್ತಿ ಇಲಾಖೆಯ ಆಯುಕ್ತರು  ಪತ್ರಮುಖೇನ ಆದೇಶ ನೀಡಿದ್ದರೂ ಕೂಡ ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ದೇವಾಲಯದ ಅರ್ಚಕರಾದ ಬಿ.ಜಿ ಶಿವಯೋಗಿ ಆರೋಪಿಸಿದ್ದಾರೆ.

ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಫೆ:11): ನಗರದ ಹೈಸ್ಕೂಲ್ ಮೈದಾನದ ಬಳಿಯಿರುವ  ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕನಾಗಿ ಕಾರ್ಯನಿರ್ವಹಿಸಲು ಅಡ್ಡಿ ಪಡಿಸಿದ್ದು ದೇವಾಲಯದ ಅರ್ಚಕರ ಕೆಲಸದಿಂದ ವಜಾ ಮಾಡಿದ್ದಾರೆ. ಧಾರ್ಮಿಕದತ್ತಿ ಇಲಾಖೆಯ ಆಯುಕ್ತರು  ಪತ್ರಮುಖೇನ ಆದೇಶ ನೀಡಿದ್ದರೂ ಕೂಡ ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ದೇವಾಲಯದ ಅರ್ಚಕರಾದ ಬಿ.ಜಿ ಶಿವಯೋಗಿ ಆರೋಪಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಪೂರ್ವಜರ ಕಾಲದಿಂದಲೂ ಬೀರಲಿಂಗೇಶ್ವರ ದೇವರ ಪೂಜಾ ಕೈಂಕರ್ಯಗಳನ್ನು ಸತತವಾಗಿ ನಡೆಸಿಕೊಂಡು ಬಂದಿರುವ ಪೂಜಾರರ ವಂಶಸ್ಥರಾಗಿದ್ದೇವೆ ಹಾಗೂ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿಯೇ ವಾಸವಾಗಿರುತ್ತೇವೆ. ಆದರೆ  ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬೀರಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಅನಧಿಕೃತವಾಗಿ ಮಳಿಗೆ ಮಾಡಿ ಆದಾಯ ಮಾಡಿಕೊಳ್ಳುತ್ತಿದ್ದಾರೆ.

Latest Videos

ಕುಮಾರಸ್ವಾಮಿ ಬ್ರಾಹ್ಮಣ ಮಾತಿಗೆ ಆಕ್ರೋಶ, ಅರ್ಚಕರ ಕೋಪಕ್ಕೆ ಹೆಚ್‌ಡಿಕೆ ಸ್ಪಷ್ಟನೆ!

ಬೀರಲಿಂಗೇಶ್ವರ ದೇವಸ್ಥಾನದ ಜಾಗದ ಅಭಿವೃದ್ಧಿ ಕಮಿಟಿಯವರು ಸೇರಿ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯ ಒತ್ತಡಗಳನ್ನು ತಂದು ನನ್ನನ್ನು ಅರ್ಚಕರ ಕೆಲಸದಿಂದ  ಜಿಲ್ಲಾಧಿಕಾರಿಗಳವರಿಂದ ವಜಾ ಮಾಡಿಸಲು ಯಶಸ್ವಿಯಾಗಿದ್ದಾರೆ.  ಈ ಬಗ್ಗೆ  ಉಚ್ಛನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು ಎರಡು ಬಾರಿ ಹೈಕೋರ್ಟ್‌ನಿಂದ ಸ್ಟೇ ಆಗಿದ್ದು, ನಂತರ ಹೈಕೋರ್ಟ್‌ನಿಂದ ಮುಜರಾಯಿ ಇಲಾಖೆಯಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ತಿಳಿಸಿದ್ದರಿಂದ  ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿಗಳ ಇಲಾಖೆ ಇವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳೆಂದು ಸಾಬೀತಾದ್ದರಿಂದ ನನಗೆ ಪುನಃ ಅರ್ಚಕ ಹುದ್ದೆಗೆ ನೇಮಿಸಿಕೊಳ್ಳಲು  ಆಯುಕ್ತರು  ಆದೇಶವನ್ನು ನೀಡಿ  ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.

HD Kumaraswamy: ದಳಪತಿಗೆ ಬ್ರಾಹ್ಮಣ ವಿರೋಧಿ ಹಣೆಪಟ್ಟಿ: ಕುಮಾರಸ್ವಾಮಿ ವಿರುದ್ಧ ಅರ್ಚಕರು ಕಿಡಿ

ಆದೇಶ ಪತ್ರ ಬಂದ ಕೂಡಲೇ ನಾವು ಜಿಲ್ಲಾಧಿಕಾರಿಗಳವರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಈ ಬಗ್ಗೆ ವಿಚಾರಿಸಿದರೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಬಳಿ ಹೋಗಲು ಹೇಳುತ್ತಾರೆ ಎಂದು ಅಳಲು ತೋಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಅರ್ಚಕ ಬಿ.ಜಿ ಲಿಂಗೇಶ್, ಶಂಕರಪ್ಪ, ಸವಿತಾ ಟಿ.ಇ, ಸುನೀತಾ, ಸವಿತಾ, ವಿರೇಶ್, ಹನುಮಂತಪ್ಪ ಇದ್ದರು.

click me!