Vijayapura: ಸಿಎಂ ಆಗಲೆಂದು ಹರಸಿ ಸಿದ್ದರಾಮಯ್ಯಗೆ ಕೂಡಿಟ್ಟ 5,000 ರೂ ದೇಣಿಗೆ ನೀಡಿದ ಬಾಲಕಿ!

By Gowthami K  |  First Published Feb 11, 2023, 5:03 PM IST

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶದಲ್ಲಿ ಬಾಲಕಿಯೊಬ್ಬಳು ಸಿದ್ದರಾಮಯ್ಯಗೆ 5,000 ರೂಪಾಯಿಗಳನ್ನ ದೇಣಿಗೆಯಾಗಿ ನೀಡಿರುವ ಘಟನೆ ನಡೆದಿದೆ.


ವಿಜಯಪುರ (ಫೆ.11): ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶದಲ್ಲಿ ಬಾಲಕಿಯೊಬ್ಬಳು ಸಿದ್ದರಾಮಯ್ಯಗೆ 5,000 ರೂಪಾಯಿಗಳನ್ನ ದೇಣಿಗೆಯಾಗಿ ನೀಡಿರುವ ಘಟನೆ ನಡೆದಿದೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಜಿಯಾ ರಫೀಕ್ ಮನೂರ ಎಂಬ  ಹನ್ನೊಂದು  ವರ್ಷದ ಬಾಲಕಿ ತಾನು ಕೂಡಿಟ್ಟ  5,000 ರೂಪಾಯಿಗಳನ್ನು ಸಿದ್ಧರಾಮಯ್ಯಗೆ  ದೇಣಿಗೆಯಾಗಿ ನೀಡಿದ್ದಾಳೆ. ಬಾಲಕಿ‌ ನೀಡಿದ ಹಣವನ್ನು ಸ್ವೀಕರಿಸಿದ ಸಿದ್ದರಾಮಯ್ಯ ಬಳಿಕ ಅದೇ ಬಾಲಕಿಗೆ  ವಾಪಸ್ ನೀಡಿ ನಿನ್ನ ವಿದ್ಯಾಭ್ಯಾಸಕ್ಕೆ ಹಣವನ್ನು ಉಪಯೋಗಿಸಿಕೋ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿರೋದು ಧಮ್ಮು, ತಾಕತ್ತು ಇಲ್ಲದ ನಿತ್ರಾಣ ಬಿಜೆಪಿ ಸರ್ಕಾರ, ಇದು ನಮ್ಮೆಲ್ಲರ ದೌರ್ಭಾಗ್ಯ- ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಕಲಬುರಗಿ: ರಾಜ್ಯದಲ್ಲಿರುವ ದಮ್ಮು ಹಾಗೂ ತಾಕತ್ತು ಎರಡನ್ನೂ ಕಳೆದುಕೊಂಡಿರುವ, ಜನವಿರೋಧಿ ಧೋರಣೆಯ ಹಾಗೂ ವಚನಭ್ರಷ್ಠ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜನತೆಗೆ ಕರೆ ನೀಡಿದ್ದಾರೆ.

Latest Videos

undefined

ಕಲಬುರಗಿಯಲ್ಲಿ ಶುಕ್ರವಾರ ಜಾತ್ರಾ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಆತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 1 ಗಂಟೆಕಾಲ ಮಾತನಾಡಿದ ಅವರು ಮಾತಿನುದ್ದಕ್ಕೂ ಸಿಎಂ ಬೊಮ್ಮಾಯಿ, ಪ್ರದಾನಿ ಮೋದಿಯವರ ಹೇಳಿಕೆಗಳನ್ನೇ ತಮ್ಮದೇ ಶೈಲಿಯಲ್ಲಿ ಪ್ರಸ್ತಾಪಿಸುತ್ತ ಲೇವಡಿ ಮಾಡಿದರು. ಧಮ್ಮು, ತಾಕತ್ತು ಅಂತ ನಮ್ಮನ್ನ ಪ್ರಶ್ನಿಸುವ ಬಿಜೆಪಿಯೇ ದಮ್ಮು, ತಾಕತ್ತು ಎರಡನ್ನೂ ಕಳೆದುಕೊಂಡು ನಿತ್ರಾಣವಾಗಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಸರ್ಕಾರದಲ್ಲಿ ಕರ್ನಾಟಕ ಪ್ರಗತಿ ವಿಚಾರದಲ್ಲಿ 20 ವರ್ಷದಷ್ಟುಹಿಂದೆ ಹೋಗಿದೆ, ಶೇ.40 ಕಮೀಷನ್‌ ಸರ್ಕಾರದಲ್ಲಿ ಪ್ರಗತಿ ಪರಿಕಲ್ಪನೆ ಗಾಳಿಗೆ ತೂರಲಾಗಿದೆ ಎಂದ ಸಿದ್ದರಾಮಯ್ಯ ಬಿಜೆಪಿ ರಾಜ್ಯವನ್ನ ಲೂಟಿ ಹೊಡೀತಾ ಇದೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಮಾತು ತಾವಾಡುತ್ತಿದ್ದರೆ ಸಿದ್ರಾಮಯ್ಯ ಕಾಲದಲ್ಲೂ ಆಗಿಲ್ವಾ ಅಂತಾರೆ ಬಿಜೆಪಿಯವರು, ನನ್ನ, ಅವರ ಮೇಲಿನ ಆರೋಪಗಳನ್ನೆಲ್ಲ ಕ್ರೂಢೀಕರಿಸಿ ಬಿಜೆಪಿಯ ಈಗಿನ ಸಿಎಂ ಬೊಮ್ಮಾಯಿ ಸುಪ್ರೀಂಕೋರ್ಚ್‌ ಜಡ್ಜ್‌ ನೇತತ್ವದಲ್ಲಿ ಸಮೀತಿ ರಚಿಸಿ ತನಿಖೆಗೆ ಮುಂದಾಲಿ ನೋಡೋಣ, ಇವರು ತನಿಖೆ ಮಾಡೋದಿಲ್ಲ, ಏಕೆಂದರೆ ಇವರದ್ದೇ ಹಗರಣ ಹೊರಬರುತ್ತವಲ್ಲಾ? ಅದಕ್ಕೇ ಮಿಸ್ಟರ್‌ ಬೊಮ್ಮಾಯಿ ನಿಮ್ಮದೇ ಭಾಷೆಯಲ್ಲಿ ಹೇಳೋದಾದರೆ ನಿಮಗೆ ದಮ್ಮೂ ಇಲ್ಲ, ತಾಕತ್ತೂ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ದೇವರಾಜ್‌ ಅರಸು ನಂತರ ರಾಜ್ಯದಲ್ಲಿ 5ವರ್ಷ ಪೂರ್ಣವಾಧಿ ಸಿಎಂ ಆದವನು ಎಂಬ ಹೆಮ್ಮೆ ತಮಗಿದೆ ಎಂದ ಸಿದ್ದರಾಮಯ್ಯ ನುಡಿದಂತೆ ನಡೆಯೋದು ಕಾಂಗ್ರೆಸ್‌ ಬದ್ಧತೆ, ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ನೀಡಿದ 165 ಭರವಸೆಗಳಲ್ಲಿ 158 ಈಡೇರಿಸಿದ್ದೇವೆ. 36ಕ್ಕೂ ಹೆಚ್ಚು ಹೊಸ ಕಾರ್ಯರ್ತಮಗಳನ್ನು ನೀಡಿದ್ದೇವೆ. ಬಿಜೆಪಿ 2018ರಲ್ಲಿ ನೀಡಿದ 600 ಭರವಸೆಯಲ್ಲಿ ಈಡೇರಿದ್ದು ಬರಿ 50, ಹೀಗಾಗಿ ಬಿಜೆಪಿ ವಚನ ಭ್ರಷ್ಟಸರ್ಕಾರ ಅಂತ ವಿಧಿ ಇಲ್ಲದೆ ಹೇಳಬೇಕಾಗಿದೆ ಎಂದರು.

 

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಗ್ಯಾರಂಟಿ: ಸಿದ್ದರಾಮಯ್ಯ

ಸಂವಿಧಾನ ಕಲಂ 371 ಬೇಡಿಕೆಗೆ ಸ್ಪಂದಿಸಿದ್ದು ಕಾಂಗ್ರೆಸ್‌ ಹೊರತು ಬಿಜೆಪಿ ಅಲ್ಲ, ಅಡ್ವಾಣಿ ಇದನ್ನು ತಿರಸ್ಕರಿಸಿದ್ರು, ಆದ್ರೆ ಮನಮೋಹನ್‌ ಸಿಂಗ್‌ ಪ್ರಧಾನಿ ಇದ್ದಾಗ ಕಾಂಗ್ರೆಸ್‌ ಇದನ್ನ ಈಡೇರಿಸಿತು. ಕೆಕೆಆರ್‌ಡಿಬಿಗೆ 5 ಸಾವಿರ, 3 ಸಾವಿರ ಕೋಟಿ ಕೊಟಟಿದ್ದೇವೆಂದು ಬೊಮ್ಮಾಯಿ ಮಕ್ಮಲ್‌ ಟೋಪಿ ಹಾಕುತ್ತಿದ್ದಾರೆ. ಕೊಟ್ಟಅನುದಾನದಲ್ಲಿ ಇಂದಿಗೂ ಶೇ.7ಕ್ಕಿಂತ ಹೆಚ್ಚಿನ ವೆಚ್ಚವಾಗಿಲ್ಲ ಎಂಬುದು ದುರಂತ. ಮಂಡಳಿಯ ಅದ್ಯಕ್ಷ ಸ್ಥಾನ ಶಿಥಿಲ ಮಾಡಿ ಅಲ್ಲಿ ಶಾಸಕರನ್ನು ಕುಳ್ಳಿರಿಸಿದ್ದಾರೆ. ಅವರು ದುರ್ಬಳಕೆ ಮಾಡುತ್ತಿದ್ದಾರೆಂದು ದೂರಿದರು.

ಕರ್ನಾಟಕದಲ್ಲಿ ಅಲಿಬಾಬಾ ಸರ್ಕಾರವಿದೆ: ಸಿದ್ದರಾಮಯ್ಯ

ಕಲ್ಯಾಣ ನಾಡಿಗೆ ಬಿಜೆಪಿ ಕೊಡುಗೆ ಶೂನ. ಹೆಸರು ಬದಲಿಸಿದ್ದೇ ಬಂತು, ಅಭಿವೃದ್ಧಿ ಶೂನ್ಯ ಎಂದ ಸಿದ್ದರಾಮಯ್ಯ ಈ ಪ್ರದೇಶದ ವ್ಯಾಪ್ತಿಯಲ್ಲಿ 41 ಸ್ಥಾನ ದಲ್ಲಿ ಕಳೆದ ಬಾರಿ 21ರಲ್ಲಿ ಗೆಲವು, ಈ ಬಾರಿ ಎಲ್ಲಾ 41 ಸ್ಥಾನದಲ್ಲಿ ಗೆಲ್ಲಿಸಿಸಿರಿ, ಯುವಕರು ಹೆಚ್ಚು ಸಭೆಗೆ ಬರ್ತಿದ್ದಾರೆ, ಹೀಗಾಗಿ ಪೂರ್ವದಲ್ಲಿ ಸೂರ್ಯೋದಯ ಹೇಗೆ ಸತ್ಯವೋ ಹಾಗೆಯೇ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದು ಕೂಡಾ ಅಷ್ಟೇ ಸತ್ಯ ಎಂದರು.

click me!