ಈರುಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಆದರೆ ಕೊರತೆ ನೀಗಿಸಲು ಇದೀಗ ವಿದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ.
ಬೆಳಗಾವಿ [ಡಿ.07] : ಈರುಳ್ಳಿ ಕೊರತೆ ನೀಗಿಸಲು ಟರ್ಕಿಯಿಂದ ಮಂಗಳೂರಿಗೆ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದ್ದು ಮಂಗಳೂರಿನಿಂದ ಬೆಳಗಾವಿಗೂ ಇದೀಗ ಎರಡು ಲಾರಿ ಟರ್ಕಿ ಈರುಳ್ಳಿ ಆಗಮಿಸಿದೆ.
undefined
ಟರ್ಕಿ ಈರುಳ್ಳಿ ಆಮದಿನಿಂದಾಗಿ ರಾಜ್ಯದ ರೈತರು ಆತಂಕಗೊಂಡಿದ್ದಾರೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಈರುಳ್ಳಿ ದರ 130 ರೂಪಾಯಿಯಿಂದ 170ರವರೆಗೆ ಮಾರಾಟ ಆಗುತ್ತಿದೆ.
ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಆಗಮಿಸಿರುವ ಈರುಳ್ಳಿ ಬೆಳೆದ ರೈತರು ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಜಿಪ್ಟ್ ದೇಶದಿಂದ ಬಂತು ಈರುಳ್ಳಿ : ಇಳಿಯುತ್ತಾ ಬೆಲೆ ?...
ಟರ್ಕಿಯಿಂದ ಬಂದ ಈರುಳ್ಳಿ ದರ ಪ್ರತಿ ಕೆಜಿಗೆ 130 ರೂಪಾಯಿಗೆ ಮಾರಾಟ ಆಗುತ್ತಿದೆ. ಇದರಿಂದ ರಾಜ್ಯದಲ್ಲಿ ಈರುಳ್ಳಿ ಬೆಳೆದ ರೈತರಿಗೆ ನಷ್ಟ ಆಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ 'ಈ ಹಿಂದೆ ನಾವು ಒಂದು ರೂಪಾಯಿಗೆ ಈರುಳ್ಳಿ ಮಾರಾಟ ಮಾಡಿದ್ದೇವೆ. ಈಗ ಒಳ್ಳೆಯ ದರ ಬಂದಾಗ ರೈತರ ಹೊಟ್ಟೆ ಮೇಲೆ ಏಕೆ ಹೊಡೀತಿರಿ? ಅತಿವೃಷ್ಟಿಯಿಂದ ಈರುಳ್ಳಿ ಇಳುವರಿಯೂ ಕಡಿಮೆಯಾಗಿದೆ. ನಾವು ಖರ್ಚು ಮಾಡಿದಷ್ಟು ಹಣ ನಮ್ಮ ಕೈ ಎಟಕುತ್ತಿಲ್ಲ' ಎಂದು ರೈತರ ಅಳಲು ತೋಡಿಕೊಳ್ಳುತ್ತಿದ್ದಾರೆ.
ವಿದೇಶದಿಂದ ಈರುಳ್ಳಿ ಆಮದಿಗೆ ಕೇಂದ್ರ ಸರ್ಕಾರದ ನಿರ್ಧಾರ ಸರಿಯಲ್ಲ ಟರ್ಕಿಯಿಂದ ಆಮದು ಮಾಡಿಕೊಂಡ ಈರುಳ್ಳಿ ಗುಣಮಟ್ಟ ಸರಿ ಇಲ್ಲ.ಕೊಳೆತ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ನಾವು ಬೆಳೆದ ಒಳ್ಳೆಯ ಗುಣಮಟ್ಟದ ಈರುಳ್ಳಿಗೆ ಸರಿಯಾದ ದರ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ