ಬೈ ಎಲೆಕ್ಷನ್: ಕಾರು, ಬೈಕ್, ಕುರಿ, ಕೋಳಿ ಸೇರಿ ಲಕ್ಷ ಲಕ್ಷ ಬೆಟ್ಟಿಂಗ್..!

By Suvarna NewsFirst Published Dec 7, 2019, 2:45 PM IST
Highlights

ಬೆಟ್ಟಿಂಗ್ ನಡೆಸುವುದು ಅಪರಾಧ ಎಂದು ಗೊತ್ತಿದ್ದರೂ ಕೆ. ಆರ್. ಪೇಟೆಯಲ್ಲಿ ಅಬ್ಬರದ ಬೆಟ್ಟಿಂಗ್ ನಡೆಯುತ್ತಿದೆ. ಉಪಚುನಾವಣೆಯ ಫಲಿತಾಂಶ ಡಿಸೆಂಬರ್ 09ರಂದು ಹೊರ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಕುರಿ, ಕೋಳಿ, ಚಿನ್ನ, ಕಾರು, ಬೈಕ್ ಸೇರಿ ಲಕ್ಷ ಲಕ್ಷ ರೂಪಾಯಿ ಬೆಟ್ಟಿಂಗ್ ನಡೆಸಲಾಗುತ್ತಿದೆ.

ಮಂಡ್ಯ(ಡಿ.07): ಉಪಚುನಾವಣೆ ಮುಗಿದಿದ್ದು, ಇದೀಗ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಕೆ. ಆರ್. ಪೇಟೆ ಉಪಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳ ಬೆಂಬಲಿಗರು ಪರಸ್ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

"

ಮತದಾನ ಮುಗಿದು ಎಲ್ಲರ ಚಿತ್ತ ಫಲಿತಾಂಶದ ಕಡೆಗಿದ್ದು, ಡಿ.9ರಂದು ಹೊರಬೀಳುವ ಫಲಿತಾಂಶಕ್ಕೂ ಮುನ್ನ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಬೆಂಬಲಿಗರು ಕಾರ್ಯಕರ್ತರು ಬೆಟ್ಟಿಂಗ್ ಭರಾಟೆ ಆರಂಭಿಸಿದ್ದಾರೆ. ಬೆಟ್ಟಿಂಗ್ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಡೊಂಟ್ ಕೇರ್ ಎನ್ನುತ್ತಿರುವ ಜನ ಗುಪ್ತವಾಗಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ.

ಮಹಾರಾಷ್ಟ್ರದ ಶಿರಡಿಯಲ್ಲಿ ಹಳ್ಳಿಹಕ್ಕಿ, ಗೆಲುವಿಗಾಗಿ ಸಾಯಿಬಾಬನ ಮೊರೆ

ಹಳ್ಳಿ-ಹಳ್ಳಿಗಳಲ್ಲಿ ಗುಪ್ತವಾಗಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಮಾತುಗಳು ಕೆಳಿ ಬಂದಿದೆ. ತಮ್ಮ-ತಮ್ಮ ಅಭ್ಯರ್ಥಿ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿರೋ ಬೆಂಬಲಿಗರು ಹಾಗೂ ಕಾರ್ಯಕರ್ತರು ತಮ್ಮಿಂದಾಗುವಂತಹ ವಸ್ತುಗಳನ್ನು ಉಪಯೋಗಿಸಿಕೊಂಡ ಬೆಟ್ ಮಾಡುತ್ತಿದ್ದಾರೆ.

ಇನ್ನೋವಾ ಕಾರು, ಮೋಟಾರ್ ಬೈಕ್, ಜಮೀನು, ಚಿನ್ನ, ಕುರಿ, ಕೋಳಿ ಸೇರಿದಂತೆ ಇನ್ನಿತರೆ ವಸ್ತುಗಳು ಪಣಕ್ಕೆ ಬಂದಿದ್ದು, ಬೆಟ್ಟಿಂಗ್ ಭರದಲ್ಲಿ ಸಾಗಿದೆ. ಗೆಲ್ಲುವ ಹಾಟ್ ಫೇವರೇಟ್ ಅಭ್ಯರ್ಥಿ ಬೆಂಬಲಿಗರಿಂದ ಲೆಕ್ಕಾಚಾರದಲ್ಲಿ ಬೆಟ್ಟಿಂಗ್‌ಗೆ ಆಹ್ವಾನ ಮಾಡಲಾಗಿದೆ. ಕೆ. ಆರ್. ಪೇಟೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್. ದೇವರಾಜು ಗೆಲುವ ಹಾಟ್ ಫೇವರೇಟ್ ಎನ್ನುವ ಮಾತು ಕೇಳಿ ಬಂದಿದೆ.

ಎನ್‌ಕೌಂಟರ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದ ಕಾನೂನು ಸಚಿವ

ಕೆ. ಆರ್. ಪೇಟೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಹಣಾಹಣಿ ಎಂಬ ಸಮೀಕ್ಷೆಗಳ ವರದಿ ನೋಡಿ ಜನರು ಜೆಡಿಎಸ್‌-ಬಿಜೆಪಿ ಪರವಾಗಿ ಹೆಚ್ಚಿನ ಬೆಟ್ಟಿಂಗ್ ಮಾಡುತ್ತಿದ್ದಾರೆ. ಜೆಡಿಎಸ್‌ ಪರ ಒಂದು ಲಕ್ಷ ಕಟ್ಟಿದ್ರೆ ಬಿಜೆಪಿ ಪರವಾಗಿ 50ಸಾವಿರ. ಒನ್ ಈಸ್ಟ್ ಟೂ ರೇಷ್ಯೂನಲ್ಲಿ ಬೆಟ್ಟಿಂಗ್‌‌ಗೆ ಆಹ್ವಾನ ನಡೆಯುತ್ತಿದೆ.

ಉದಾಹರಣೆಗೆ ಬಿಜೆಪಿ ಪರವಾಗಿ 50 ಸಾವಿರ ಕಟ್ಟಿ ಒಂದು ವೇಳೆ ಬಿಜೆಪಿ ಗೆದ್ದರೆ ಜೆಡಿಎಸ್‌ ಪರ ಕಟ್ಟಿದವರು 1ಲಕ್ಷ ಹಣ ನೀಡಬೇಕು. ಅದೇ ರೀತಿ ಜೆಡಿಎಸ್‌ ಅಭ್ಯರ್ಥಿ ಗೆದ್ರೆ 1ಲಕ್ಷ ಪಣಕ್ಕಿಟ್ಟವರಿಗೆ ಬಿಜೆಪಿ ಅಭ್ಯರ್ಥಿ ಪರ ಕಟ್ಟಿದವರು 50ಸಾವಿರ ಹಣ ಕೊಡಬೇಕು. ಕಾಂಗ್ರೆಸ್ ಗೆದ್ದರೆ ಡ್ರಾ ನಡೆಯುತ್ತೆ.

ಹೈದರಾಬಾದ್ ಎನ್‌ಕೌಂಟರ್: ಘಟನೆ ಸಂತೋಷವಲ್ಲ, ಸಮಾಧಾನ ತಂದಿದೆ ಎಂದ ಯದುವೀರ್

ಒಂದು ವೇಳೆ ಜೆಡಿಎಸ್ ಅಥವಾ ಬಿಜೆಪಿ ಎರಡು ಪಕ್ಷಗಳು ಗೆಲ್ಲದಿದ್ರೆ ಬೆಟ್ಟಿಂಗ್ ಡ್ರಾನಲ್ಲಿ ಅಂತ್ಯಗೊಳ್ಳುತ್ತದೆ. ಕೆ. ಆರ್. ಪೇಟೆಯಲ್ಲಿ ಈ ರೀತಿಯಾಗಿ ಬೆಟ್ಟಿಂಗ್ ನಡೆಯುತ್ತಿದೆ. ಕ್ಷೇತ್ರದಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದ್ದ ಬಿಜೆಪಿ ಈ ಬಾರಿ ಜೆಡಿಎಸ್‌ಗೆ ಟಕ್ಕರ್ ಫೈಟ್ ಕೊಡಲು ಮುಂದಾಗಿದೆ.

click me!