ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ; ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಕಳವಳ

By Ravi Janekal  |  First Published Jan 21, 2023, 2:47 PM IST

"ಭೇಟಿ ಪಡಾವೋ ಭೇಟಿ ಬಚಾವೋ" ಎಂದು ಕೇಂದ್ರ ಸರಕಾರ ಆಂದೋಲನ ಆರಂಭಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕಾದರೆ ನಾವು "ಭೇಟೋಂಕೋ ಪಡಾವೋ(ಗಂಡು ಮಕ್ಕಳಿಗೆ ಕಲಿಸಿ)" ಅಂದರೆ ಗಂಡುಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಅಗತ್ಯವಿದೆ ಎಂದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಪ್ರತಿಪಾದಿಸಿದರು


ಬೆಳಗಾವಿ (ಜ.21): "ಭೇಟಿ ಪಡಾವೋ ಭೇಟಿ ಬಚಾವೋ" ಎಂದು ಕೇಂದ್ರ ಸರಕಾರ ಆಂದೋಲನ ಆರಂಭಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕಾದರೆ ನಾವು "ಭೇಟೋಂಕೋ ಪಡಾವೋ(ಗಂಡು ಮಕ್ಕಳಿಗೆ ಕಲಿಸಿ)" ಅಂದರೆ ನಮ್ಮ ಮನೆಯ ಗಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಪ್ರತಿಪಾದಿಸಿದರು.

Woman Harassment : ಠಾಣೆಯಲ್ಲಿಯೆ ಕಾರ್ಮಿಕ ಮಹಿಳೆ ಮೇಲೆ ಪಿಎಸ್‌ಐ ದೌರ್ಜನ್ಯ

Tap to resize

Latest Videos

ಬೆಳಗಾವಿ(Belgum)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆಚ್ಚುವರಿ ನ್ಯಾಯಾಲಯ ಕಟ್ಟಡದ(ನೆಲಮಹಡಿ) ಉದ್ಘಾಟನಾ ಸಮಾರಂಭ ಹಾಗೂ ವಕೀಲರ ಭವನದ ಎರಡನೇ ಅಂತಸ್ತಿನ ಶಂಕುಸ್ಥಾಪನೆ ಹಾಗೂ ಖಾನಾಪುರ ನ್ಯಾಯಾಧೀಶರ ವಸತಿಗೃಹಗಳ ಅಡಿಗಲ್ಲು ಮತ್ತು ರಾಮದುರ್ಗ ನ್ಯಾಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ನಗರದ ನೂತನ ನ್ಯಾಯಾಲಯ ಆವರಣದಲ್ಲಿ ಶನಿವಾರ ನೆರವೇರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ(women) ಮೇಲೆ ಅತ್ಯಾಚಾರ(Rape), ಆ್ಯಸಿಡ್ ದಾಳಿ(Acid attack)ಯಂತಹ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ಸಂದರ್ಭದಲ್ಲಿ ಮಹಿಳೆಯರ ಜತೆ ಘನತೆಯಿಂದ ನಡೆದುಕೊಳ್ಳುವುದನ್ನು ನಮ್ಮ ಹುಡುಗರಿಗೆ ನಾವು ತಿಳಿಸಿಕೊಡುವ ಕಾಲ ಬಂದಿದೆ.‌ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ನಮ್ಮ ಮಕ್ಕಳಿಗೆ ಕಲಿಸಿದಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಹೆಣ್ಣಿಗೆ ದೌರ್ಜನ್ಯರಹಿತ ಭವಿಷ್ಯದ ಅಗತ್ಯವೇನಿದೆ?

click me!