ಉತ್ತರ ಕರ್ನಾಟಕ ಭಾಗದ ಸಂಸದರು ಶಾಸಕರು ಮಹದಾಯಿ ಪರವಾಗಿ ಮಾತನಾಡುತ್ತಿಲ್ಲ| ಮಹದಾಯಿ, ಕಳಸಾ ಬಂಡೂರಿ ಹೋರಾಟ ತಣ್ಣಗಾಯಿತು ಎಂಬ ಭಾವನೆಯಲ್ಲಿ ಸರ್ಕಾರವಿದ್ದರೇ ಅವರ ಮೂರ್ಖತನ| 15 ದಿನಗಳಲ್ಲಿ ಮಹದಾಯಿ ವಿಚಾರ ಕೈಗೆತ್ತಿಕೊಳ್ಳುದಿದ್ದಲ್ಲಿ ಪ್ರತ್ಯೇಕ ರಾಜ್ಯದ
ಬ್ಯಾಡಗಿ(ಜ.08): ಮಹದಾಯಿ ವಿಚಾರದಲ್ಲಿ ಮುಖ್ಯಮಂತ್ರಿ ಆದಿಯಾಗಿ ಎಲ್ಲ ಶಾಸಕರು, ಸಂಸದರು ಮೌನವಹಿಸುತ್ತಿರುವುದು ಸರಿಯಲ್ಲ, ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದಲ್ಲಿ ಉತ್ತರ ಕರ್ನಾಟಕ ರೈತರ ಹಿತಾಸಕ್ತಿಗೋಸ್ಕರ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಹೋರಾಡಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಎಚ್ಚರಿಸಿದ್ದಾರೆ.
ಸೊಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಸಂಸದರು ಶಾಸಕರು ಮಹದಾಯಿ ಪರವಾಗಿ ಮಾತನಾಡುತ್ತಿಲ್ಲ, ದೇವರ ಕೃಪೆಯಿಂದ ಪ್ರಸಕ್ತ ವರ್ಷ ಅಣೆಕಟ್ಟು ಸೇರಿದಂತೆ ಕೆರೆ ಕಟ್ಟೆಗಳು ತುಂಬಿ ಹೋಗಿವೆ, ಆದರೆ ಹೋರಾಟ ತಣ್ಣಗಾಯಿತು ಎಂಬ ಭಾವನೆಯಲ್ಲಿ ಸರ್ಕಾರವಿದ್ದರೇ ಅವರ ಮೂರ್ಖತನವಿಷ್ಟೇ 15 ದಿನಗಳಲ್ಲಿ ಮಹದಾಯಿ ವಿಚಾರ ಕೈಗೆತ್ತಿಕೊಳ್ಳುದಿದ್ದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟ ನಿಶ್ಚಿತ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಅತೀ ವೃಷ್ಟಿಯಿಂದ ಹಾಳಾದ ಮನೆಗಳಿಗೆ ಪರಿಹಾರ ಕೊಡಿಸುವ ವಿಚಾರದಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗಿದೆ, 5 ಸಾವಿರಕ್ಕೂ ಹೆಚ್ಚು ಮನೆಗಳು ನೆಲ ಕಚ್ಚಿದರೂ ಕೇವಲ 369 ಮನೆಗಳು ಬಿದ್ದಿರುವ ಬಗ್ಗೆ ಮಾಹಿತಿ ಜಿಲ್ಲಾಧಿಕಾರಿಗಳ ಬಳಿಯಿದೆ, ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ನಿರ್ದೇಶನವಿದ್ದರೂ ಕಚೇರಿಯಿಂದ ಹೊರ ಬಾರದ ಜಿಲ್ಲಾಧಿಕಾರಿಗಳು ಮಾತ್ರ ಏಜೆಂಟರ್ ಸೂಚನೆ ಮೇರೆಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರ ಮರು ವಸತಿಗೆ ಬಿಡುಗಡೆ ಮಾಡಲಾಗಿದ್ದ ಅಷ್ಟಿಷ್ಟು ಹಣವನ್ನು ಕೊಡದಿರುವ ಬ್ಯಾಂಕ್ ಅಧಿಕಾರಿಗಳು ಸಂತ್ರಸ್ತರ ಇನ್ನಿತರ ಸಾಲಗಳಿಗೆ ಜಮಾ ಮಾಡಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? ಕೂಡಲೇ ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸುವ ಮೂಲಕ ಪರಿಹಾರದ ಯಾವುದೇ ಹಣವನ್ನು ಜಮಾ ಮಾಡಿಸಿಕೊಳ್ಳದಂತೆ ಎಚ್ಚರಿಕೆ ನೀಡಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೊನ್ನಪ್ಪ ಬಾರ್ಕಿ, ಎಸ್.ಆರ್. ಕುಲಕರ್ಣಿ, ಹನುಮಂತ ಉಪಸ್ಥಿತರಿದ್ದರು.