ಕಲಬುರಗಿ: ರೈಲು ಡಿಕ್ಕಿ ಹೊಡೆದು ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾವು

By Kannadaprabha News  |  First Published Sep 19, 2023, 11:30 PM IST

ಧ್ವನಿ ವರ್ಧಕದ ಸದ್ದಿನಲ್ಲಿ ರೈಲು ಸಂಚಾರದ ಸದ್ದು ಕೇಳಿಸಿಲ್ಲ. ಮೊಬೈಲ್ ವೀಕ್ಷಿಸುತ್ತಿರುವುದರಿಂದ ರೈಲಿನ ಬೆಳಕು ಕಂಡುಬಂದಿಲ್ಲ. ಹೀಗಾಗಿ ಅಪಘಾತ ಸಂಭವಿಸಿರುವ ಸಾಧ್ಯೆತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ ರೈಲ್ವೆ ಪೊಲೀಸರು 


ಕಲಬುರಗಿ(ಸೆ.19):  ರೈಲು ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡ ಘಟನೆ ಕಮಲಾಪುರ ಬಳಿಯ ರಾಜನಾಳ ರೈಲು ಸೇತುವೆ ಬಳಿ ಶನಿವಾರ ರಾತ್ರಿ ನಡೆದಿದೆ.

ಕಮಲಾಪುರ ಶ್ರೀಸಾಯಿ ಕೃಪಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪ ಚಂದ್ರಶೇಖರ ಗೋಣಿ (46) ಮೃತವ್ಯಕ್ತಿ. ಬೆಳಕೋಟಾ ಪುನರ್ವಸತಿ ಕೇಂದ್ರದ ನಿವಾಸಿ ವೀರಭದ್ರ ರಾಜು ಸ್ವಾಮಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Tap to resize

Latest Videos

undefined

ಕಲಬುರಗಿ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಆಸ್ಪತ್ರೆ ಆವರಣದಲ್ಲೇ ಮಹಿಳೆ ಸಾವು

ರಾಜನಾಳ ರೈಲು ಸೇತುವೆ ಬಳಿಯ ಪ್ರತಿಭಾ ಇಂಟರ್ನ್ಯಾಶನಲ್ ಶಾಲೆಯಲ್ಲಿ ಶನಿವಾರ ಸಂಜೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿತ್ತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅತಿ ಹೆಚ್ಚು ಸಾಮರ್ಥ್ಯದ ಧ್ವನಿ ವರ್ಧಕ ಬಳಸಲಾಗಿತ್ತು. ಗುಂಡಪ್ಪ ಹಾಗೂ ವೀರಭದ್ರ ಎತ್ತರ ಪ್ರದೇಶದಲ್ಲಿದ್ದ ರೈಲು ಹಳಿಯ ಮೇಲೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಜೊತೆಗೆ ಮೊಬೈಲ್ ನೋಡುತ್ತ ಮಗ್ನರಾಗಿದ್ದರು.

ಧ್ವನಿ ವರ್ಧಕದ ಸದ್ದಿನಲ್ಲಿ ರೈಲು ಸಂಚಾರದ ಸದ್ದು ಕೇಳಿಸಿಲ್ಲ. ಮೊಬೈಲ್ ವೀಕ್ಷಿಸುತ್ತಿರುವುದರಿಂದ ರೈಲಿನ ಬೆಳಕು ಕಂಡುಬಂದಿಲ್ಲ. ಹೀಗಾಗಿ ಅಪಘಾತ ಸಂಭವಿಸಿರುವ ಸಾಧ್ಯೆತೆ ಇದೆ ಎಂದು ರೈಲ್ವೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಎಎಸ್ಐ ಅನಿತಾ ಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

click me!