ನರೇಂದ್ರ ಮೋದಿ ದೂರದರ್ಶತ್ವ, ಪರಿಪಕ್ವ ನಡೆಯಿಂದಾಗಿ ದೇಶದಲ್ಲಿ ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿದೆ| ತಮ್ಮ ನೈಪುಣ್ಯತೆಯಿಂದಲೇ ಇಂದು ಕೊರೊನಾ ನಿರ್ವಹಣೆ ಮಾಡಿದ ಪ್ರಪಂಚದ ನಂ. 1 ಪ್ರಧಾನಿ ಎಂಬ ಹೆಗ್ಗಳಿಕೆಗೆ ಸಹ ಪಾತ್ರರಾಗಿದ್ದಾರೆ: ಕೆ.ಸಿ. ಲೋಕೇಶ್|
ಟಿ. ನರಸೀಪುರ(ಜೂ.08): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2ನೇ ಅವಧಿಯಲ್ಲಿ ಮೊದಲನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು ಜನಪರ ಕಲ್ಯಾಣ ಕಾರ್ಯಕ್ರಮಗಳಿಂದ ಅವರು ರಾಷ್ಟ್ರ ಮಟ್ಟದ ನಂಬರ್ ಒನ್ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆ.ಸಿ. ಲೋಕೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಆರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'ವಿಶ್ವೇಶ್ವರಯ್ಯ ಒಬ್ಬ ಎಂಜಿನಿಯರ್ ಅಷ್ಟೇ, ಪ್ರತಿಮೆ ಸ್ಥಾಪಿಸಿದ್ರೆ ಒಡೀತೇವೆ': ಮಾಜಿ ಮೇಯರ್ ವಾರ್ನಿಂಗ್
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀ ಅವರ ದೂರದರ್ಶತ್ವ, ಪರಿಪಕ್ವ ನಡೆಯಿಂದಾಗಿ ದೇಶದಲ್ಲಿ ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿದೆ. ತಮ್ಮ ನೈಪುಣ್ಯತೆಯಿಂದಲೇ ಇಂದು ಕೊರೊನಾ ನಿರ್ವಹಣೆ ಮಾಡಿದ ಪ್ರಪಂಚದ ನಂ. 1 ಪ್ರಧಾನಿ ಎಂಬ ಹೆಗ್ಗಳಿಕೆಗೆ ಸಹ ಪಾತ್ರರಾಗಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ದಾಸಯ್ಯ, ಕಾರ್ಯದರ್ಶಿ ಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಬಸವರಾಜು, ಪ.ಜಾತಿ.ಮೋರ್ಚಾ ಅಧ್ಯಕ್ಷ ಸಿದ್ದರಾಜು, ಕೆ. ನಂಜುಂಡಸ್ವಾಮಿ, ಸಿದ್ದೇಶ್, ಶಿವಕುಮಾರ್, ಪುರಸಭಾ ಸದಸ್ಯ ಎಸ್.ಕೆ. ಕಿರಣ್, ಯುವ ಮೋರ್ಚಾ ಅಧ್ಯಕ್ಷ ಕೆ.ವಿ. ಶಿವಶಂಕರ್,ಮಹಿಳಾ ಮೋರ್ಚಾ ಅಧ್ಯಕ್ಷೆ ಹೊನ್ನಮ್ಮ, ಪ್ರಧಾನ ಕಾರ್ಯದರ್ಶಿ ಸುಜಾತ ಇದ್ದರು.