* ಕೋಲಾರ ಜಿಲ್ಲಾಡಳಿತ ಹಾಗೂ ಸಂಸದ ಮುನಿಸ್ವಾಮಿ ಉಪಸ್ಥಿತಿಯಲ್ಲಿ ಸಿದ್ಧತೆ
* ಬೃಹತ್ ಬೆಟ್ಟದ ಸಾಲುಗಳ ನಡುವೆ ಪ್ರಕೃತಿ ಮಡಿಲಲ್ಲಿ ಯೋಗ ದಿನ ಆಚರಣೆ
* ಮೈಸೂರಿನ ಬಳಿಕ ಕೋಲಾರದಲ್ಲೂ ಯೋಗ ಇತಿಹಾಸ ಬರೆಯಲಿದೆ
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಜೂ.19): ವಿಶ್ವಯೋಗ ದಿನಾಚರಣೆಯಂದು ವಿಶ್ವದ ಗಮನ ಸೆಳೆಯಲು ವಿಭಿನ್ನ ಹಾಗೂ ವಿಶಿಷ್ಟ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ. ಬೃಹತ್ ಬೆಟ್ಟದ ಸಾಲುಗಳ ನಡುವೆ ಪ್ರಕೃತಿ ಮಡಿಲಲ್ಲಿ ಯೋಗ ದಿನ ಆಚರಣೆಗೆ ಕೋಲಾರ ಜಿಲ್ಲಾಡಳಿತ ಹಾಗೂ ಸಂಸದ ಮುನಿಸ್ವಾಮಿ ಉಪಸ್ಥಿತಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಬಳಿಕ ಕೋಲಾರದಲ್ಲೂ ಯೋಗ ಇತಿಹಾಸ ಬರೆಯಲಿದೆ.
undefined
ಸುತ್ತಲೂ ಬೆಟ್ಟ ಮಧ್ಯದಲ್ಲಿ ದ್ವೀಪದಂತೆ ಕಾಣುವ ವಿಶಾಲವಾದ ಪ್ರದೇಶ. ಮನಸೂರೆಗೊಳ್ಳುವಂತ ಪ್ರಕೃತಿ ಸೌಂದರ್ಯದ ನಡುವೆ ಜೆಸಿಬಿಗಳಿಂದ ಕ್ಲೀನ್ ಮಾಡುವ ಕೆಲಸ. ಅಧಿಕಾರಿಗಳೊಂದಿಗೆ ಕಾಮಗಾರಿ ಪರಿಶೀಲನೆ ನಡೆಸುತ್ತಿರುವ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಅಧಿಕಾರಿಗಳು ತಂಡ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದ ಶತಶೃಂಗ ಪರ್ವತದ ತೇರಹಳ್ಳಿ ಬೆಟ್ಟದ ಮೇಲೆ. ಹೌದು ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ದೇಶದೆಲ್ಲೆಡೆ ಹಾಗೂ ವಿಶ್ವದ ಹಲವೆಡೆ ಆಚರಣೆ ಮಾಡಲಾಗುತ್ತಿದೆ.
ಆಟ ಆಡೋ ವಯಸ್ಸಲ್ಲಿ ತಂದೆಯ ಸೇವೆ ಮಾಡ್ತಿರುವ ಮಗ: ಸುಲ್ತಾನ್ ಕಾರ್ಯಕ್ಕೆ ಸಲಾಂ ಎಂದ ಜನತೆ..!
ಈ ನಿಟ್ಟಿನಲ್ಲಿ ಕೋಲಾರದಲ್ಲಿ ವಿಶ್ವಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ವಿಶೇಷವಾಗಿ ಆಚರಣೆ ಮಾಡಬೇಕು ಎನ್ನುವ ಸಲುವಾಗಿ ಪ್ರಕೃತಿ ಮಡಿಲಲ್ಲಿ ಅಂದರೆ ಕೋಲಾರದ ಶತಶೃಗಂಗ ಪರ್ವತಗಳ ಮಧ್ಯೆ ಯೋಗ ದಿನದಂದು ಸಾಮೂಹಿಕ ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆಯಲು ಮಾಸ್ಟರ್ ಪ್ಲಾನ್ ನಡೆಯುತ್ತಿದೆ. ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಶತಶೃಂಗ ಪರ್ವತದ ನಡುವಿನ ವಿಶಾಲವಾದ ಜಾಗದಲ್ಲಿ ಸುಮಾರು 15 ರಿಂದ 20 ಸಾವಿರ ಜನರು ಒಮ್ಮೆಲೆ ಯೋಗ ಮಾಡಲು ಬೇಕಾದ ವೇದಿಕೆ ಹಾಗೂ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಹಲವು ಇಲಾಖೆಗಳ ಅಧಿಕಾರಿಗಳು, ಪೊಲೀಸರು ಹಾಗೂ ಯೋಗ ಗುರುಗಳೊಂದಿಗೆ ಪರಿಶೀಲನೆ ಸಹ ನಡೆಸಿದ್ದಾರೆ.ಬೆಟ್ಟಗಳ ಸಾಲಿನ ಮಧ್ಯೆ ಈ ಬಾರಿ ಯೋಗ ಮಾಡಿದ್ರೆ ಮುಂದಿನ ವರ್ಷ 1 ಲಕ್ಷ ಜನರನ್ನು ಸೇರಿಸಿ ಕೆಜಿಎಫ್ ನ ಚಿನ್ನದ ಗಣಿ ಪ್ರದೇಶದಲ್ಲಿ ಯೋಗ ಮಾಡುವ ಯೋಜನೆ ಸಹ ಇದೆ, ಕೇಂದ್ರ ಸಚಿವರು ಸಹ ಭಾಗಿಯಾಗುವ ಸಾಧ್ಯತೆ ಇದೆ ಅನ್ನೋದು ಸಂಸದ ಮುನಿಸ್ವಾಮಿ ಮಾತು.
ಇನ್ನು ಬೆಟ್ಟಗುಡ್ಡಗಳ ನಡುವಿನ ಸುಂದರ ಪ್ರದೇಶ ಇಂತಹ ಸ್ಥಳ ಎಲ್ಲೂ ಸಿಗೋದಿಲ್ಲ, ಕೋಲಾರದಲ್ಲಿ ಹುಟ್ಟಿ ಬೆಳೆದಿರುವವರೇ ಇಂತಹ ಸುಂದರ ಪ್ರದೇಶವನ್ನು ನೋಡಿಲ್ಲ ಹಾಗಾಗಿ ಈ ಪ್ರದೇಶವನ್ನು ಜನರಿಗೆ ಪರಿಚಯ ಮಾಡಿಕೊಡಲು ಇದೊಂದು ಒಳ್ಳೆಯ ಸಮಯ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಸೂಚನೆಯಂತೆ ಐತಿಹಾಸಿಕ ಸ್ಥಳಗಳಲ್ಲಿ ಯೋಗ ಮಾಡಬೇಕು ಎಂದು ಈಗಾಗಲೇ ಕರೆ ಕೊಟ್ಟಿದ್ದಾರೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸುಂದರ ಪ್ರಕೃತಿ ಮಡಿಲಲ್ಲಿ ಮಾಡಬೇಕು ನಿಗದಿ ಮಾಡಲಾಗಿದೆ. ಇನ್ನು ಕಳೆದ ಹತ್ತು ದಿನಗಳಿಂದ ಇಡೀ ಪ್ರದೇಶದಲ್ಲಿದ್ದ ಗಿಡಗಂಟೆ ಹಾಗೂ ಕಲ್ಲು ಬಂಡಗಳನ್ನು ಸರಿಸಿ ಸಮತ್ತಟ್ಟಾದ ಜಾಗವನ್ನು ಮಾಡಲಾಗುತ್ತಿದೆ. ಸುಮಾರು ಐದಕ್ಕೂ ಹೆಚ್ಚು ಜೆಸಿಬಿ ಹಾಗೂ ನೂರಾರು ಜನ ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ.ಇನ್ನು ಯೋಗ ದಿನದಂದು ಈ ಸ್ಥಳವನ್ನು ತ್ರಿವರ್ಣ ದ್ವಜ ಹಾಗೂ ಯೋಗ ದಿನದ ಬ್ಯಾನರ್‌ಗಳಿಂದ ಸಿಂಗಾರಗೊಳಿಸಿ ನೋಡಲು ಮನಮೋಹಕವಾಗುವಂತೆ ಮಾಡಲಾಗುತ್ತದೆ. ಇನ್ನು ಈ ಸುಂದರ ಸ್ಥಳವನ್ನು ನೋಡಲು ಈಗಗಾಲೇ ನೂರಾರು ಸಂಖ್ಯೆಯಲ್ಲಿ ಜನರು ಬಂದು ನೋಡಿಕೊಂಡು ವಾಪಸ್ಸಾಗುತ್ತಿದ್ದು, ಈ ಸ್ಥಳದಲ್ಲಿ ಯೋಗ ಮಾಡಿ ಯೋಗದಿನ ಆಚರಣೆ ಮಾಡಲು ಉತ್ಸುಕರಾಗಿದ್ದಾರೆ. ಜೂ. 21 ರಂದು ಬೆಳಿಗ್ಗೆ 5 ಗಂಟೆ ಸರಿಯಾಗಿ ಬಸ್ ಗಳ ಮೂಲಕ ಯೋಗ ನಡೆಯುವ ಸ್ಥಳಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಯೋಗ ಆಸಕ್ತರು ಆಗಮಿಸುತ್ತಾರೆ,ಬಳಿಕ 6 ಗಂಟೆ ಸರಿಯಾಗಿ ಯೋಗ ಆರಂಭಿಸಲು ತೀರ್ಮಾನವಾಗಿದೆ.ಅದರಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಕಷ್ಟು ಮುಖಂಡರು ಸಹ ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದಾರೆ.
ಒಟ್ನಲ್ಲಿ ಯೋಗ ಅಂದರೆ ನಿಜಕ್ಕೂ ಅದೊಂದು ಆರೋಗ್ಯ ಎನ್ನುವಂತಾಗಿದ್ದು ಅದರಲ್ಲೂ ಇಂತಹ ಅದ್ಭುತವಾದ ಪ್ರದೇಶದಲ್ಲಿ ಯೋಗ ಮಾಡೋದೆ ಒಂದು ವಿಶೇಷ. ಹಾಗಾಗಿ ಯೋಗ ದಿನದಂದು ಕೋಲಾರದಲ್ಲಿ ನಡೆಯುವ ಯೋಗ ದಿನಾಚರಣೆ ನಿಜಕ್ಕೂ ವಿಶ್ವದ ಗಮನ ಸೆಳೆಯೋದರಲ್ಲಿ ಯಾವುದೇ ಅನುಮಾನವಿಲ್ಲ.