ಬೆಂಗಳೂರು ಆಟೋ ಚಾಲಕನ ಕಿರಿಕ್; ಪ್ರಶ್ನೆ ಮಾಡಿದ ಕಾರು ಚಾಲಕನ ಮುಖಕ್ಕೆ ಉಗಿದು ಹೋದ ಕಿರಾತಕ

By Sathish Kumar KH  |  First Published Aug 7, 2024, 7:03 PM IST

ಬೆಂಗಳೂರಿನ ಮಾರತಹಳ್ಳಿ ಬಳಿ ಕಿರಿಕ್ ಮಾಡುತ್ತಾ ಬಂದ ಆಟೋ ಚಾಲಕ ಪ್ರಶ್ನೆ ಮಾಡಿದ ಕಾರು ಚಾಲಕನ ಮುಖಕ್ಕೆ ಉಗಿದು ಹೋಗಿದ್ದಾನೆ.


ಬೆಂಗಳೂರು (ಆ.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನಪಾಡಿಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಚಾಲಕನಿಗೆ ಕಿರಿಕ್ ಮಾಡಿದ ಆಟೋ ಚಾಲಕನನ್ನು ಪ್ರಶ್ನೆ ಮಾಡಿದ್ದಕ್ಕೆ ಕಾರಿನ ಚಾಲಕನ ಮುಖಕ್ಕೆ ಉಗಿದು ಗುಂಡಾ ವರ್ತನೆ ತೋರಿಸಿದ್ದಾನೆ.

ಬೆಂಗಳೂರಿನಲ್ಲಿ ಆಟೋ ಚಾಲಕನನಿಂದ ಗುಂಡಾವರ್ತನೆ ತೋರಿದ್ದಲ್ಲದೇ ಅದನ್ನು ಪ್ರಶ್ನೆ ಮಾಡಿ, ವಿಡಿಯೋ ಮಾಡುತ್ತಿದ್ದ ಕಾರು ಚಾಲಕ ಮುಖಕ್ಕೆ ಉಗಿದು ಹೋಗಿದ್ದಾನೆ. ಈ ಘಟನೆ ಬೆಂಗಳೂರಿನ ಹೊರ ವಲಯ ಮಾರತಹಳ್ಳಿಯ ಯಮಲೂರು ಸಿಗ್ನಲ್ (Yamaluru traffic Signal) ಬಳಿ ಆ.5ರ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಹೋಗುವಾಗ ಹಾರ್ನ್‌ ಹಾಕಿದ್ದಕ್ಕೆ ಇಬ್ಬರ ನಡುವೆ ಕಿರಿಕ್ ಆರಂಭವಾಗಿದೆ. ಇದರಿಂದ ಕಾರು ಚಾಲಕನಿಗೆ ತೊಂದರೆ ಕೊಡುತ್ತಲೇ ಬಂದ ಆಟೋ ಚಾಲಕ ಕಾರು ಚಾಲಕನ ವಿರುದ್ಧ ಕಿಡಿಕಾರುತ್ತಾ ಬೈಯುತ್ತಾ ಬಂದಿದ್ದಾನೆ.

Tap to resize

Latest Videos

ಉಡುಪಿಯಲ್ಲಿ ನಿಂತಲ್ಲೇ ಅಲ್ಲಾಡುತ್ತಿದ್ದ ಕಾರು; ಜನರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ರತಿಕ್ರೀಡಾ ಜೋಡಿ!

ನಂತರ ಟ್ರಾಫಿಕ್ ಸಿಗ್ನಲ್ ಬಳಿ ಕಾರನ್ನು ನಿಲ್ಲಿಸಿದಾಗ ಪಕ್ಕದಲ್ಲಿಯೇ ಬಂದ ಆಟೋ ಚಾಲಕ ಪುನಃ ಕಾರು ಚಾಲಕನ ಮೇಲೆ ವಾಗ್ದಾಳಿ ಮಾಡಿದ್ದಾನೆ. ಈ ವೇಳೆ ವಿಡಿಯೋ ಮಾಡಲು ಆರಂಭಿಸಿದ್ದರಿಂದ ಕಾರಿನ ಮಿರರ್‌ಗೆ ಗುದ್ದಿ ಮರಿದು ಹಾಕಿದ್ದಾನೆ. ನಂತರ, ವಿಡಿಯೋ ರೆಕಾರ್ಡ್ ಮಾಡ್ತಿರೋದನ್ನ ನೋಡಿ ಆಟೋ ನಿಲ್ಲಿಸಿ ಇಳಿದು ಬಂದ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾರು ಚಾಲಕ ಮುಖಕ್ಕೆ ಉಗಿದಿದ್ದಾನೆ. ಇನ್ನು ಆಟೋದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಮಡು ಹೋಗುತ್ತಿದ್ದಾಗಲೇ ಆಟೋ ಚಾಲಕ ಅನುಚಿತ ವರ್ತನೆ ತೋರಿದ್ದು, ಮಕ್ಕಳು ಹೆದರಿಕೊಂಡಿದ್ದಾರೆ.

ನಮ್ಮ ಮೆಟ್ರೋ 12 ವರ್ಷದ ಬಳಿಕ ದಾಖಲೆಯ ರೈಡರ್‌ಶಿಪ್; ಒಂದೇ ದಿನ 8.26 ಲಕ್ಷ ಪ್ರಯಾಣಿಕರ ಸಂಚಾರ

ಈ ಘಟನೆ ಕುರಿತು ಕಾರಿನ ಚಾಲಕ ವಿಡಿಯೋ ಸಮೇತ ಹೆಚ್.ಎಲ್.ಎಲ್ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾರೆ. ಕಾರಿನ ಚಾಲಕ ಅಲೆಕ್ಸ್ ಬೋಬಿ ವೆಂಪಲ ಎಂಬಾತನ ಮೇಲೆ ಪೊಲೀಸರು ಗೂಂಡಾ ವರ್ತನೆ ತೋರಿದ ಹಿನ್ನೆಲೆಯಲ್ಲಿ ಎಫ್.ಐ.ಆರ್. ದಾಖಲು ಮಾಡಲಾಗಿದೆ. ಬಿ.ಎನ್.ಎಸ್ ಸೆಕ್ಷನ್ 126(2), 324(4), 351(2), 352 ಅಡಿ ಎಫ್.ಐ.ಆರ್ ದಾಖಲು ಆಗಿದ್ದು, ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಿದ್ದಾರೆ.

click me!