ತವರಿನ ಕನವರಿಕೆ : ಗರ್ಭಿಣಿ ಆತ್ಮಹತ್ಯೆಗೆ ಶರಣು

Kannadaprabha News   | Asianet News
Published : Jun 12, 2021, 03:42 PM IST
ತವರಿನ ಕನವರಿಕೆ :  ಗರ್ಭಿಣಿ ಆತ್ಮಹತ್ಯೆಗೆ ಶರಣು

ಸಾರಾಂಶ

ತವರಿನ ಕನವರಿಕೆ - ಗರ್ಭಿಣಿ ಆತ್ಮಹತ್ಯೆಗೆ ಶರಣು ಶಿವಮೊಗ್ಗ ಜಿಲ್ಲೆ ಹೊಳಲೂರು ಗ್ರಾಮದಲ್ಲಿ ಘಟನೆ ಲಾಕ್‌ಡೌನ್‌ ಹಿನ್ನೆಲೆ ದೂರದ ಬೆಳಗಾವಿಗೆ ತೆರಳಲಾಗದೆ ನೊಂದು ಆತ್ಮಹತ್ಯೆ

ಶಿವಮೊಗ್ಗ (ಜೂ.12): ಲಾಕ್‌ಡೌನ್‌ನಿಂದಾಗಿ ತವರು ಮನೆಗೆ ಹೋಗಲು ಸಾಧ್ಯವಾಗದೆ ಮನನೊಂದ ಗೃಹಿಣಿಯೊಬ್ಬರು  ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ  ಶರಣಾಗಿದ್ದಾಳೆ. 

ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ. 

ಭೀಮವ್ವ (22) ಮೃತ ಮಹಿಳೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಭೀಮವ್ವ ಮತ್ತು ಗೋಕಾಕ್‌ನಲ್ಲಿ ಕೆಲಸ ಮಾಡುತ್ತಿದ್ದ  ಹೊಳಲೂರಿನ ಪವನ ಪರಸ್ಪರ ಪ್ರೀತಿಸಿ 10 ತಿಂಗಳ ಹಿಂದೆ ಮದುವೆಯಾಗಿದ್ದರು. 

ಹಾಸನ: ಕೊರೋನಾ ಬಂದಿದ್ದಕ್ಕೆ ನದಿಗೆ ಹಾರಿ ಆತ್ಮಹತ್ಯೆ ..

ಮದುವೆಯಾಗಿ ಇಲ್ಲಿಗೆ ಬಂದ ಬಳಿಕ ತವರಿಗೆ ಹೋಗಲಾಗಿರಲಿಲ್ಲ. ಭೀಮವ್ವ 4 ತಿಂಗಳ ಗರ್ಭಿಣಿಯಾಗಿದ್ದರು. ತವರಿಗೆ  ಹೋಗಬೇಕೆಂದು ಆಕೆ ಪದೇ ಪದೇ ಕನವರಿಸುತ್ತಿದ್ದಳು.

ಆದರೆ ಲಾಕ್‌ಡೌನ್‌ ಕಾರಣದಿಂದಾಗಿ ಬಸ್  ಸಂಚಾರ ಇಲ್ಲದೆ ಸಾಧ್ಯವಾಗಿರಲಿಲ್ಲ. ಭೀಮವ್ವ ಹಠ ಹಿಡಿದಿದ್ದರಿಂದ ಪವನ್ ಮನ ಒಲಿಸಿದರೂ ಕೇಳದೆ ಬಸ್ ಇದ್ದದಿದ್ದರೆ ಬೈಕ್‌ನಲ್ಲಿಯೇ ಕರೆದೊಯ್ಯುವಂತೆ ಒತ್ತಾಯಿಸಿದ್ದರು. 

ಈ ವಿಷಯವಾಗಿ  ಚಿಕ್ಕದಾಗಿ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗಿದೆ. ಆದರೆ ಶುಕ್ರವಾರ ಭೀಮವ್ವ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. 

PREV
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ