ಕಲಬುರಗಿ: ಇಳಿಯದ ಪ್ರವಾಹ, ಮೂರು ಗಂಟೆ ಕಾಯ್ದ ಗರ್ಭಿಣಿ

Kannadaprabha News   | Asianet News
Published : Sep 22, 2021, 03:32 PM IST
ಕಲಬುರಗಿ: ಇಳಿಯದ ಪ್ರವಾಹ, ಮೂರು ಗಂಟೆ ಕಾಯ್ದ ಗರ್ಭಿಣಿ

ಸಾರಾಂಶ

*  ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ನಡೆದ ಘಟನೆ *  ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿದ ಆ್ಯಂಬುಲೆನ್ಸ್‌ ಚಾಲಕ *  ಕಲಬುರಗಿಯಲ್ಲಿ ಮಳೆಯಂದಾಗಿ ವಿದ್ಯುತ್‌ ಕಡಿತ   

ಕಲಬುರಗಿ(ಸೆ.22): ತಾಲೂಕಿನ ಪಟ್ಟಣ ಹೊರ ವಲಯದಲ್ಲಿನ ಹಳ್ಳಕ್ಕೆ ಭಾರೀ ಪ್ರವಾಹ(Flood) ಬಂದಿದ್ದರಿಂದ ಗ್ರಾಮದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಹೋಗಲು ಮೂರು ಗಂಟೆ ಹಳ್ಳದ ದಂಡೆಯಲ್ಲೇ ಕಾಯ್ದ ಪ್ರಸಂಗ ನಡೆದಿದೆ.

ಸೋಮವಾರ ರಾತ್ರಿ ಜೋರಾಗಿ ಮಳೆ ಸುರಿದಿದೆ. ಇದರಿಂದ ಹಳ್ಳ ಕೊಳ್ಳ ತುಂಬಿ ಹರಿದಿವೆ. ಈ ವೇಳೆ ಪಟ್ಟಣ ಗ್ರಾಮದ ಗರ್ಭಿಣಿ(Pregnant) ರಸಿಕ ಪಾಟೀಲ್‌ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆ್ಯಂಬುಲೆನ್ಸ್‌ನಲ್ಲಿ ಅವರನ್ನು ತಕ್ಷಣ ಸಾವಾಳಾಗಿ ಆರೋಗ್ಯ ಕೇಂದ್ರಕ್ಕೆ ಕರೆದೋಯುವ ವ್ಯವಸ್ಥೆ ಮಾಡಲಾಗಿತ್ತು.

ಕೃಷ್ಣ ಪ್ರವಾಹ ಆತಂಕ : ಸೇತುವೆ ಮುಳುಗಡೆ

ಆದರೆ ಪಟ್ಟಣ ಹಾಗೂ ಕಲಬುರಗಿ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ನಡುವೆ ಇರುವ ಹಳ್ಳಕ್ಕೆ ಪ್ರವಾಹ ಬಂದಿದ್ದರಿಂದ ಆ್ಯಂಬುಲೆನ್ಸ್‌ (Ambulance) ಇಲ್ಲಿ 3 ಗಂಟೆ ನಿಲ್ಲಬೇಕಾಯ್ತು. ಆದರೆ ಪ್ರವಾಹ ಇಳಿಯದಿರುವುದರಿಂದ ಚಾಲಕ ಧೈರ್ಯವಾಗಿ ನೀರಲ್ಲೇ ಆ್ಯಂಬುಲೆನ್ಸ್‌ ಚಲಾಯಿಸಿ ಆಸ್ಪತ್ರೆಗೆ ಗರ್ಭಿಣಿಯನ್ನು ತಲುಪಿಸಿದ್ದಾರೆ. ಮಂಗಳವಾರ ರಾತ್ರಿಯು ಜಿಲ್ಲೆಯಲ್ಲಿ ಬಿರುಸಿನ ಮಳೆ 2 ಗಂಟೆ ಕಾಲ ಸುರಿದಿದೆ. ಆಫಜಲ್ಪುರ, ಗ್ರಾಮೀಣ ಕಲಬುರಗಿ, ಕಲಬುರಗಿ ನಗರ, ಸೇಡಂ, ಚಿಂಚೋಳಿ ಮಳೆ ಸುರಿದಿದೆ. ಕಲಬುರಗಿಯಲ್ಲಿ ಮಳೆಯಂದಾಗಿ ವಿದ್ಯುತ್‌ ಕಡಿತಗೊಂಡಿತ್ತು.

PREV
click me!

Recommended Stories

ಡ್ರೈವರ್‌ಲೆಸ್ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಒಂದೂವರೆ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತ ಬಹುತೇಕ ಖಚಿತ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಪರ್ವ ಆರಂಭ: ಸಚಿವ ಶಿವರಾಜ ತಂಗಡಗಿ