ಸಾವಿರಾರು ಮರಾಠಿಗರ ಹೆಣ ನೋಡ್ಬೇಕಾಗುತ್ತೆ ಹುಷಾರ್ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮಟ್ಟದ ಬೃಹತ್ ಸಭೆ ಬಳ್ಳಾರಿ ಸಭೆಯಲ್ಲಿ ಪ್ರವೀಣ್ ಶೆಟ್ಟಿ ಮಾತು/ ಕರ್ನಾಟಕ ದಲ್ಲಿ ರಕ್ತಪಾತ ಆಗುತ್ತೆ ಎಚ್ಚರಿಕೆ/ ನಮ್ಮ ನೆಲದ ಒಂದೇ ಒಂದು ಇಂಚು ಭೂಮಿ ಬಿಡಲ್ಲ
ಬಳ್ಳಾರಿ(ಜ. 17) ಸಾವಿರಾರು ಮರಾಠಿಗರ ಹೆಣ ನೋಡ್ಬೇಕಾಗುತ್ತೆ ಹುಷಾರ್.. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮಟ್ಟದ ಬೃಹತ್ ಸಭೆಯಲ್ಲಿ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ದಲ್ಲಿ ರಕ್ತಪಾತ ಆಗುತ್ತೆ ಎಚ್ಚರಿಕೆ.. ನಮ್ಮ ನೆಲದ ಒಂದೇ ಒಂದು ಇಂಚು ಭೂಮಿ ಬಿಡಲ್ಲ. ಮಹಾರಾಷ್ಟ್ರ ಸಿಎಂಗೆ ಪ್ರವೀಣ್ ಶೆಟ್ಟಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧಟತನದ ಹೇಳಿಕೆ
ಗಡಿ ಹೋರಾಟದಲ್ಲಿ ಮರಾಠಿಗರ ಸಾವಿನ ನಂತರದ ಶ್ರದ್ಧಾಂಜಲಿ ರೂಪದಲ್ಲಿ ಕರ್ನಾಟಕದ 3 ಜಿಲ್ಲೆಗಳನ್ನು ಪಡೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದ ಉದ್ಧವ್ ಠಾಕ್ರೆಗೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಯಾವ ಜಿಲ್ಲೆಯನ್ನೂ ವಶ ಪಡೆಯಲು ಸಾಧ್ಯವಿಲ್ಲ. ಈ ಕನಸು ಕಾಣೋದನ್ನು ಬಿಡಿ. ನೀವು ವಶಕ್ಕೆ ಪಡೆದರೆ ನಾವೇನು ಕೈ ಕಟ್ಟಿ ಕೂರಲ್ಲ ಶ್ರದ್ಧಾಂಜಲಿ ಬದಲಿಗೆ ಸಾವಿರಾರು ಹೆಣ ಉರುಳಿಸುತ್ತೇವೆ ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ.