ಬೆಂಗಳೂರು; ಬೇರೆಯಾಗಿದ್ದ ಮಗುವನ್ನು ಕುಟುಂಬಕ್ಕೆ ಸೇರಿಸಿದ ಆಟೋ ಚಾಲಕ ಬೇಗ್

By Suvarna News  |  First Published Jan 17, 2021, 6:25 PM IST

ಮಾನವೀಯತೆ ಮೆರೆದ ಆಟೋ ಚಾಲಕ/ ಕುಟುಂಬದದಿಂದ ಬೇರೆಯಾಗಿದ್ದ ಮಗುವನ್ನು ಕುಟುಂಬಕ್ಕೆ ತಲುಪಿಸಿದ/ ಪೊಲೀಸರ ನೆರವು ಪಡೆದುಕೊಳ್ಳಲಾಯಿತು/ ಬೆಂಗಳೂರಿನಲ್ಲೊಂದು ಆದರ್ಶ ಪ್ರಕರಣ


ಬೆಂಗಳೂರು(ಜ. 16)  ಅದು ಶನಿವಾರ ರಾತ್ರಿ  12.30 ರ ಸಮಯ. ಕೋರಮಂಗಲದ ನ್ಯಾಶನಲ್ ಗೇಮ್ಸ್ ವಿಲೇಜ್ ಬಳಿ ಮಜೀದ್ ಬೇಗ್ ತಮ್ಮ ಆಟೋ ತೆಗೆದುಕೊಂಡು ಹೋಗುತ್ತಿದ್ದರು.    ಹತ್ತಿರಲ್ಲಿ ಅಮ್ಮಾ ಅಮ್ಮಾ ಎಂದು ಕೂಗುತ್ತ ಕೈಯಲ್ಲಿ ಐಸ್ ಕ್ರೀಂ ಕಪ್ ಒಂದನ್ನು ಹಿಡಿದುಕೊಂಡು ದಿಕ್ಕು ತೋಚದಂತೆ ನಡೆಯುತ್ತಿದ್ದ ಮಗುವೊಂದು ಕಣ್ಣಿಗೆ ಬಿಳುತ್ತದೆ.

ಮಾನವೀಯ ಮೌಲ್ಯಕ್ಕೆ ಬೆಲೆ ಕೊಡುವ ಬೇಗ್ ಗೆ ಮಗುವಿನ ಸ್ಥಿತಿ ಅರ್ಥವಾಗುತ್ತದೆ. ತಾಯಿಯಿಂದ ಮಗು ಬೇರ್ಪಟ್ಟಿದೆ  ಎಂಬುದು ತಿಳಿಯುತ್ತದೆ.  ಮೊದಲು ನಾನು ಕನ್ನಡದಲ್ಲಿ ಮಾತನಾಡುವ ಕೆಲಸ ಮಾಡಿದೆ.. ಆದರೆ ಆಕೆಗೆ ಹಿಂದಿ ಮಾತ್ರ ಬರುತ್ತಿತ್ತು.  ಹದಿನೈದು ನಿಮಿಷಗಳ ಕಾಲ ಆಕೆಯೊಂದಿಗೆ ಮಾತನಾಡಿದ ನಂತರ ವಿವೇಕನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದೆ ಎಂದು ಅಂದಿನ ಘಟನೆ ವಿವರಿಸುತ್ತಾರೆ.

Tap to resize

Latest Videos

ಪೋಲಿಯೋ ಮೆಟ್ಟಿದ ಬಳೆ ಮಾರುವ ಹುಡುಗ ಐಎಎಸ್ ಆದ ಕತೆ

ಪೊಲೀಸರು ಸಹ ಬಾಲಕಿಯ ಕುಟುಂಬ ಪತ್ತೆ ಮಾಡುವ ಯತ್ನ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಪ್ರಕರಣ ಕೋರಮಂಗಲ ಠಾಣೆಗೆ ವರ್ಗಾವಣೆಯಾಯಿತು.

ಪೊಲೀಸರು ವಾಟ್ಸ ಅಪ್ ಗ್ರೂಪ್ ಮೂಲಕ ಬಾಲಕಿಯ ಚಿತ್ರವನ್ನು ಎಲ್ಲ ಕಡೆ ಕಳುಹಿಸಿಕೊಟ್ಟರು. ಆಕೆ ಸಿಕ್ಕ ಜಾಗಕ್ಕೆ ಹೊಯ್ಸಳದ ಮೂಲಕ ತೆರಳಿ ಮಾಹಿತಿ ಕಲೆ ಹಾಕಲಾಯಿತು.

ಉತ್ತರ ಪ್ರದೇಶದಿಂದ  ಬಂದ ಕುಟುಂಬದ ಮಗು. ದಿನಗೂಲಿ ನೌಕರರಾಗಿದ್ದವರ ಮಗು ತಪ್ಪಿಸಿಕೊಂಡಿತ್ತು. ಅಂಬೇಡ್ಕರ್ ನಗರದಲ್ಲಿ ಕುಟುಂಬ ವಾಸವಿತ್ತು.   ಕುಟುಂಬಕ್ಕೆ ಮಾಹಿತಿ ಹೋಗಿ ಮಗು ತಂದೆ ತಾಯಿ ಜತೆ ಸೇರಿಕೊಂಡಿತು.

ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಆಟೋ ಚಾಲಕ ಬೇಗ್ ರಾಜೇಂದ್ರನಗರ ನಿವಾಸಿ.  ಬೇಗ್ ಮಾಡಿರುವ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

 

click me!