ಮಹಿಷಾ ದಸರಕ್ಕೆ ಅಡ್ಡಿಪಡಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಗಡಿಪಾರು ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ಸಂಸದ ಪ್ರತಾಪ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಚಾಮರಾಜನಗರ(ಅ.02): ಮೈಸೂರಿನಲ್ಲಿ ಮಹಿಷ ದಸರಾಕ್ಕೆ ಅಡ್ಡಿಪಡಿಸಿ, ಗೂಂಡಾ ವರ್ತನೆ ತೋರಿದ ಸಂಸದ ಪ್ರತಾಪ್ ಸಿಂಹ ಅವರನ್ನು ಗಡಿಪಾರು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ಸಂಸದ ಪ್ರತಾಪ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸಂಘಸೇನಾ, ಸೆ. 27ರಂದು ಮೈಸೂರಿನಲ್ಲಿ ನಡೆಯಬೇಕಿದ್ದ ಮಹಿಷ ದಸರಾವನ್ನು ಮೈಸೂರಿನ ಸಂಸದ ಪ್ರತಾಪ ಸಿಂಹ ಗೂಂಡಾ ವರ್ತನೆ ತೋರಿ ಮಹಿಷ ದಸರಾ ನಡೆ ಯದಂತೆ ಆಡ್ಡಿಪಡಿಸಿ, 144 ಸೆಕ್ಷನ್ ಜಾರಿ ಮಾಡಿಸಿ ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದರು.
ಮೂಲ ನಿವಾಸಿಗಳಿಗೆ ಅವಮಾನ:
ಸಂಸದ ಎಂಬುದನ್ನು ಮರೆತು ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಷ ದಸರಾವನ್ನು ಆಚರಿಸಿಕೊಳ್ಳುವವರನ್ನು ಬೈದಿದ್ದಾರೆ. ಅವರು ಮನೆಯಲ್ಲಿ ಹಿತ್ತಲಲ್ಲಿ ಗಲ್ಲಿಗಳಲ್ಲಿ ಆಚರಿಸಿಕೊಳ್ಳಲಿ ಎಂದು ಹೇಳಿ ಮೈಸೂರು ಮೂಲ ನಿವಾಸಿಗಳಿಗೆ ಅವಮಾನ ಮಾಡಿದ್ದಾರೆ ಎಂದರು. ಮುಂದೆಯೂ ಮಹಿಷ ದಸರಾ: ಮಹಿಷ ದಸರಾ ವನ್ನು ಆಚರಿಸುವವರು ಮಹಿಷಾಸುರನಿಗೆ ಹುಟ್ಟಿ ದ್ದಾರೆ ಎಂದು ಕೇಳಿದ ಸಂಸದ ಪ್ರತಾಪ್ ಸಿಂಹ ಹುಣಸೂರಿನಲ್ಲಿ ಹನುಮ ಜಯಂತಿಯಲ್ಲಿ ಗಲಭೆ ಸೃಷ್ಠಿ ಮಾಡಿದ್ದರು. ಮೂಲನಿವಾಸಿಗಳ ಬಗ್ಗೆ ಕೀಳಾಗಿ ಮಾತನಾಡಿರುವ ಅವರು ಹನುಮಂತನಿಗೆ ಹುಟ್ಟಿ ದ್ದಾನೆಯೇ ಎಂಬುದನ್ನು ಹೇಳಬೇಕು.
ಪೊಲೀಸರು ಕೂಡಲೇ ಪ್ರತಾಪ್ ಸಿಂಹನ ಮೇಲೆ ಗೂಂಡಾ ಹಾಗೂ ಎಸ್ಸಿ, ಎಸ್ಟಿ ಕಾಯಿದೆ ಅಡಿ ಬಂಧಿಸಿ ರಾಜ್ಯ ದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಿ ದಸರಾ ಕಾರ್ಯಕ್ರಮವನ್ನು ಬಹಿಷ್ಕರಿಸಿ ಮುಂದಿನ ವರ್ಷ ದಿಂದ ಮಹಿಷ ದಸರಾ ಆಚರಿಸುತ್ತೇವೆ ಎಂದರು. ಚಾಮುಂಡಿ ದೇವರಾಗಿದ್ದರೆ ಪಾಕಿಸ್ತಾನದ ಉಗ್ರ ಗಾಮಿಗಳನ್ನು ನಾಶ ಮಾಡಬಹುದಿತ್ತು. ದೇವರು ಎಂಬುದು ಮನುವಾದಿಗಳು ಅಮಾಯಕರ ಮೇಲೆ ದಾಳಿ ಮಾಡಲು ಸೃಷ್ಠಿ ಮಾಡಿಕೊಂಡಿರುವ ಒಂದು ಅಸ್ತ್ರ. ಆದ್ದರಿಂದ ಚಾಮುಂಡಿ ಬೆಟ್ಟ ಎಂಬ ಹೆಸರನ್ನು ತೆಗೆದು ಮಹಿಷ ಗುಡ್ಡ ಎಂದು ಕರೆಯಬೇಕು ಎಂದು ಅಗ್ರಹಿಸಿದ್ದಾರೆ.
ಬಸ್ ಜಿಲ್ಲಾಡಳಿತದ್ದು, ಟಿಕೆಟ್ ಮಾತ್ರ ಮಕ್ಕಳದ್ದು!
ಒಕ್ಕೂಟದ ಜಿಲ್ಲಾ ಸಂಚಾಲಕ ಸಿ. ರಾಜಣ್ಣ, ಎಂ. ದೊರೆಸ್ವಾಮಿ, ಸುಭಾಷ್ ಮಾಡ್ರ ಹಳ್ಳಿ, ಸಿ.ಎಂ.ಕೃಷ್ಣಮೂರ್ತಿ, ಅಬ್ರಹಾರ್, ಸಿದ್ದ ರಾಜು, ಗಾಳಿಪುರ ಮಹೇಶ್, ಸೈಯದ್ ಆರೀಪ್, ಗಾಳಿಪುರ ಮಹೇಶ್, ಬ್ಯಾಡಮೂಡ್ಲು ಬಸವಣ್ಣ, ಕೃಷ್ಣಮೂರ್ತಿ, ಶಿವಣ್ಣ, ರಾಮಸಮುದ್ರ ಸುರೇಶ್, ಮಹೇಶ್, ಅಂಬರೀಷ್ ಇತರರು ಇದ್ದರು.
ಅ.02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: