ನೆರೆ ಪರಿಹಾರ ಕೇಳಿದ್ರೆ ಮೋದಿ ಸರ್ಕಾರ ಬೇಕೆಂದು ಓಟು ಹಾಕಿದ್ದೀರಿ, ಸ್ವಲ್ಪ ಕಾಯಿರಿ ಎಂದ ಬಿಜೆಪಿ MP

By Web Desk  |  First Published Oct 2, 2019, 3:36 PM IST

ಕರ್ನಾಟಕದಲ್ಲಿ ಪ್ರವಾಹವಾಗಿ ಜನರು ಸರ್ಕಾರದ ಪರಿಹಾರಕ್ಕಾಗಿ ಕಾದು ಕುಳಿತ್ತಿದ್ದಾರೆ. ಆದ್ರೆ, ಈವರೆಗೂ ಕೇಂದ್ರ ಸರ್ಕಾರ ನಯಾ ಪೈಸೆ ಕೂಡು ಬಿಡುಗಡೆ ಮಾಡಿಲ್ಲ. ಇದನ್ನು ಸಂಸದರಿಗೆ ಕೇಳಿದರೆ ಮೋದಿ ಸರ್ಕಾರ ಬೇಕೆಂದು ಓಟು ಹಾಕಿದ್ದೀರಿ, ಸ್ವಲ್ಪ ಸಮಾಧಾನದಿಂದ ಕಾಯಿರಿ ಸಬೂಬು ಹೇಳಿದ್ದಾರೆ.
 


ವಿಜಯಪುರ, [ಅ.02]: ಮೋದಿ ಸರ್ಕಾರ ಬೇಕು ಎಂದು ಓಟು ಹಾಕಿದ್ದೀರಿ, ಸ್ವಲ್ಪ ಸಮಾಧಾನದಿಂದ ಕಾಯಿರಿ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ್  ಜಿಗಜಿಣಗಿ ಸಬೂಬು ಹೇಳಿದ್ದಾರೆ.

ಕೇಂದ್ರ ಸರ್ಕಾರ ಇದುವರೆಗೂ ಕರ್ನಾಟಕಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡದಿರುವುದಕ್ಕೆ ಇಂದು [ಬುಧವಾರ] ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ  ರಮೇಶ ಜಿಗಜಿಣಗಿ, ಕೇಂದ್ರದಿಂದ ಪರಿಹಾರ ಕೊಡೋದಿಲ್ಲ ಎಂದು ಹೇಳಿಲ್ಲ. ಸರ್ಕಾರ ನಮ್ಮದೇ ಇದೆ. ನಾವು ಬಹಿರಂಗವಾಗಿ ಎಲ್ಲವನ್ನೂ ಹೇಳೋಕಾಗಲ್ಲ ಎಂದರು.

Tap to resize

Latest Videos

undefined

ಈಗಾಗಲೇ ಸಂಸದರೆಲ್ಲ ಸೇರಿ ಪ್ರಧಾನಿಗಳಿಗೆ ಹೇಳಿದ್ದೇವೆ. ಕೆಲವರು ಇದೇ ವಿಚಾರವನ್ನು ಅಪಪ್ರಚಾರ ಮಾಡಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅದು ಸರಿಯಲ್ಲ. ನೀವು ಮುಖಂಡತ್ವ ವಹಿಸಿ ಎಂದು ನಿನ್ನೆ ರಾತ್ರಿಯೇ ಫೋನ್ ಮಾಡಿ ಪ್ರಹ್ಲಾದ್ ಜೋಷಿ ಅವರಿಗೆ ಹೇಳಿದ್ದೇನೆ.  ನೀವೇನು ಹತ್ತು ರುಪಾಯಿ ಕೊಡೋದು ಬೇಕಿಲ್ಲ. ನಾವೇ ಬಸ್ ಖರ್ಚು ಹಾಕೊಂಡು ಬರ್ತೇವೆ. ಮತ್ತೊಂದು ಬಾರಿ ಒತ್ತಾಯಿಸೋಣ ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಕೇಂದ್ರ ಪರಿಹಾರ ಕೊಡೊದಿಲ್ಲ ಎಂದು ಹೇಳಿಲ್ಲ. ಸ್ವಲ್ಪ ವಿಳಂಬ ಆಗಿರಬಹುದು. ಪರಿಹಾರ ಖಂಡಿತ ತರುತ್ತೇವೆ. ದೇಶದಲ್ಲಿ ಬಹಳ‌ ಕಡೆ ಪ್ರವಾಹ ಬಂದಿದೆ. ಅಲ್ಲೆಲ್ಲೂ ಪರಿಹಾರ ಬಂದಿಲ್ಲ. ಸ್ವಲ್ಪ ಕಾಯಿರಿ, ಪರಿಹಾರ ಬಂದೇ ಬರುತ್ತೆ ಎಂದು ಸಮಜಾಯಿಸಿ ನೀಡಿದರು.

ನಮಗೇನು ದನಗಳು ಓಟು ಹಾಕಿಲ್ಲ, ಜನಗಳೇ ಓಟು ಹಾಕಿದ್ದಲ್ವಾ? ಕೇಂದ್ರದ ಪರ ಮಾತಾಡಲು ಹೋಗಿ ಜನರಿಗೆ(ಮತದಾರರಿಗೆ) ದನ(ಜಾನುವಾರು) ಓಟು ಹಾಕಿಲ್ಲ, ನೀವೆ(ಜನ) ಓಟು ಹಾಕಿದ್ದೀರಿ ಎಂದು ಹೇಳಿದರು. 

ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ: ಪ್ರತಾಪ್ ಸಿಂಹ ಗುಡುಗು

ರಾಜ್ಯದಲ್ಲಿ ನೆರೆ ಪ್ರವಾಹ ಬಂದು ಎರಡು ತಿಂಗಳುಗಳು ಕಳೆದಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಪರಿಸ್ಥಿತಿಯನ್ನು ಅವಲೋಕಿಸಿಕೊಮಡು ಹೋಗಿದ್ದಾರೆ. ಆದ್ರೆ, ಇದುವರೆಗೂ ಒಂದು ಪೈಸೆ ಕೂಡ ಹಣ ಬಿಡುಗಡೆ ಮಾಡಿಲ್ಲ.

ಇದ್ರಿಂದ ಸರ್ವಾಜನಿಕರು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆರಾಜ್ಯದ ಸಂಸದರು ಕೂಡ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವಲ್ಲಿ ಮಾತ್ರ ಬ್ಯುಸಿಯಾಗಿದ್ದಾರೆ.

click me!