'ಕಾಂಗ್ರೆಸ್‌ ಯೋಜನೆಗಳನ್ನೇ ಬಿಜೆಪಿ ತನ್ನ ಯೋಜನೆಗಳಂತೆ ಬಿಂಬಿಸುತ್ತಿದೆ'

By Kannadaprabha NewsFirst Published Mar 10, 2021, 10:44 AM IST
Highlights

ಬಿಜೆಪಿಯ ಆಡಳಿತ ವೈಫಲ್ಯ ಜನತೆ ಅನುಭವಿಸಿದ್ದಾರೆ| ಬೇಸರಗೊಂಡ ಜನ ಬಿಜೆಪಿಗೆ ಬುದ್ಧಿ ಕಲಿಸಿ ಮನೆಗೆ ಕಳುಹಿಸಲಿದ್ದಾರೆ| ಕಾಂಗ್ರೆಸ್‌ ಪಕ್ಷಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇತಿಹಾಸವಿದೆ| ಕಾರ್ಯಕರ್ತರೆ ಪಕ್ಷದ ದೊಡ್ಡ ಆಸ್ತಿ. ಅವರಿಂದ ನಾವು ಅವರನ್ನು ಪ್ರೀತಿಯಿಂದ ನೋಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ಪ್ರಶಾಂತರಾವ್‌ ದೇಶಪಾಂಡೆ| 

ಶಿರಸಿ(ಮಾ.10): ಬಡವರು, ರೈತರು, ಕಾರ್ಮಿಕರ ಸಲುವಾಗಿ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನೇ ಬಿಜೆಪಿ ತನ್ನ ಯೋಜನೆ ಎಂಬಂತೆ ಬಿಂಬಿಸುತ್ತಿದೆ. ಈ ಸ್ಥಿತಿ ನೋಡಿದರೆ ಬಿಜೆಪಿ ಅಧೋಗತಿಗೆ ಇಳಿದಿದೆ ಎನ್ನುವುದು ತಿಳಿಯುತ್ತದೆ ಎಂದು ಕಾಂಗ್ರೆಸ್‌ ಯುವ ನೇತಾರ ಪ್ರಶಾಂತರಾವ್‌ ದೇಶಪಾಂಡೆ ಹೇಳಿದ್ದಾರೆ. 

ತಾಲೂಕಿನ ಸುಗಾವಿ ಗ್ರಾಮ ಪಂಚಾಯಿತಿ ಗಡಗೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯ ಆಡಳಿತ ವೈಫಲ್ಯವನ್ನು ಜನತೆ ಅನುಭವಿಸಿದ್ದಾರೆ. ಬೇಸರಗೊಂಡ ಜನ ಇವರಿಗೆ ಬುದ್ಧಿ ಕಲಿಸಿ ಮನೆಗೆ ಕಳುಹಿಸಲಿದ್ದಾರೆ ಎಂದರು. ಪಕ್ಷದ ಪ್ರತಿಯೊಂದು ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸುವ ಮೂಲಕ ಭದ್ರಗೊಳ್ಳಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಸ್ವಾತಂತ್ರ್ಯ ತಂದುಕೊಟ್ಟಇತಿಹಾಸವಿದೆ. ಕಾರ್ಯಕರ್ತರೆ ಪಕ್ಷದ ದೊಡ್ಡ ಆಸ್ತಿ. ಅವರಿಂದ ನಾವು ಅವರನ್ನು ಪ್ರೀತಿಯಿಂದ ನೋಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಶಿರಸಿ: ಹಿಂಸಾತ್ಮಕವಾಗಿ ಜಾನುವಾರು ಸಾಗಾಟ, ಮೂವರ ಬಂಧನ

ಬಳಿಕ ಗುಡ್ನಾಪುರದಲ್ಲಿ ಹಾಗೂ ಭಾಶಿಯಲ್ಲಿ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಯಿತು. ಬನವಾಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಎಫ್‌. ನಾಯ್ಕ, ಜಿಲ್ಲಾ ಪಂಚಾಯತ್‌ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ, ತಾಲೂಕು ಪಂಚಾಯತ್‌ ಅಧ್ಯಕ್ಷೆ ಶ್ರೀಲತಾ ಕಾಳೇರಮನಿ, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯರಾದ ಚಂದ್ರಪ್ಪ ಚನ್ನಯ್ಯ, ಘಟಕಾಧ್ಯಕ್ಷ ರಾಘು ನಾಯ್ಕ, ಸಿ.ಬಿ. ಗೌಡ, ಪುಟ್ಟಪ್ಪ ನಾಯ್ಕ, ಭಾಶಿ ಪಂಚಾಯತ್‌ ಉಪಾಧ್ಯಕ್ಷ ಕಲ್ಲಪ್ಪ ರಾಮ ನಾಯ್ಕ, ಬಿ. ಶಿವಾಜಿ, ಆಶೀಶ್‌ ಬನವಾಸಿ, ಕಿರಣ್‌ ನಾಯ್ಕ ಇತರರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿಯಿಂದ ಆಗಮಿಸಿದ ಹಲವು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.
 

click me!