ರಾಮನ ಬಗ್ಗೆ ಅವಹೇಳನ: ತಲೆಹಿಡುಕ ಭಗವಾನ್‌ರನ್ನ ಬಂಧಿಸಿ, ಇಲ್ಲಂದ್ರೆ ನಾವೇ ಮನೆಗೆ ನುಗ್ಗಿ ಹೊಡ್ತೇವೆ: ಮುತಾಲಿಕ್ ವಾರ್ನ್!

Published : Jun 12, 2026, 01:58 PM IST
Pramod Muthalik Press Meet Fire on Bhagavans Rama Row & Dharmasthala Case Belagavi rav

ಸಾರಾಂಶ

ಬೆಳಗಾವಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಧರ್ಮಸ್ಥಳದ ವಿರುದ್ಧ 200 ಕೋಟಿ ರೂ. ವ್ಯವಹಾರದ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಸಂಚಿನಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದು, ಎಲ್ಲರನ್ನೂ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. 

ಬೆಳಗಾವಿ (ಜೂ.12): ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವ ಬಗ್ಗೆ ಒಂದೊಂದಾಗಿ ಬಯಲಿಗೆ ಬರುತ್ತಿವೆ ಎಂದು ಬೆಳಗಾವಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಇದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುತಾಲಿಕ್ ಅವರು, ಧರ್ಮಸ್ಥಳಕ್ಕೆ ಸಂಬಂಧಪಟ್ಟ ಹಾಗೆ ಇಡೀ ಜಗತ್ತಿನಲ್ಲಿ ಒಂದು ದೊಡ್ಡಮಟ್ಟದ ಚರ್ಚೆ ಆಯ್ತು. ಸಾವಿರಾರು ಹೆಣ್ಣುಮಕ್ಕಳನ್ನು ರೇಪ್ ಮಾಡಿ, ಕಿಡ್ನಾಪ್ ಮಾಡಿ ಸಮಾಧಿ ಮಾಡಿದ್ದಾರೆಂದು ನೇರವಾಗಿ ಧರ್ಮಸ್ಥಳ ಹೆಗಡೆ ಅವರ ಮೇಲೆ ಆರೋಪ ಮಾಡಿದ್ರು. ಆದ್ರೀಗ ಬುರುಡೆ ಚಿನ್ನಯ್ಯ ಅನ್ನೋನು ಎಸ್‌ಐಟಿಗೆ ಅರ್ಜಿ ಹಾಕಿದ್ದಾನೆ. ಇದರಲ್ಲಿ ಎರಡು ನೂರು ಕೋಟಿ ವ್ಯವಹಾರ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದಾನೆ. ತಿಮರೋಡಿ ಎಂಬುವವನು ಹಣದ ಆಸೆ ತೋರಿಸಿದ್ದಾನೆಂದು ಬಾಯಿಬಿಟ್ಟಿದ್ದಾನೆ. ಇಷ್ಟಾದರೂ ಬಂಧಿಸದ ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದರು.

ದರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ನಟ ಪ್ರಕಾಶ್ ರಾಜ್ ಹೆಸರು ಇದೆ. ಬಹುಭಾಷಾ ನಟ ಪ್ರಕಾಶ್ ರಾಜ್ ನಟನೆ ಬಗ್ಗೆ ನಾನು ಮೆಚ್ಚುತ್ತೇನೆ. ಆದರೆ ಈ ರೀತಿ ಧಾರ್ಮಿಕ ನಂಬಿಕೆ ಹಾಳು ಮಾಡೋದಕ್ಕೆ ನಿಮಗೆ ಯಾರು ಹಕ್ಕು ಕೊಟ್ರು? ನಿಮಗೆ ನಾಚಿಕೆ, ಮಾನ-ಮಾರ್ಯದೆ ಅನ್ನೋದೇ ಇಲ್ವ? ಎಂದು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದರು.

ಧರ್ಮಸ್ಥಳದ ವಿರುದ್ಧ ಸಂಚು ನಡೆಸಿದ ಎಲ್ಲ ತಿಮರೋಡಿ, ಸಮೀರ್, ಮಟ್ಟಣ್ಣ, ಪ್ರಕಾಶ್ ರಾಜ್, ಸುಜಾತ್ ಸೇರಿದಂತೆ ಎಲ್ಲ ಸಂಚುಕೋರರನ್ನ ಬಂಧಿಸಬೇಕು ಎಂದು ಆಗ್ರಹಿಸಿದ ಮುತಾಲಿಕ್ ಅವರು, ಈ ಪ್ರಕರಣದಲ್ಲಿ ಪ್ರಕಾಶ್ ರೈ ಅವರೇ ಸುಜಾತ ಅನ್ನೋ ಪಾತ್ರ ಸೃಷ್ಟಿಸಿದ್ದು. ಪ್ರಕಾಶ್ ರಾಜ್ ನಟ ಅಷ್ಟೇ ಅಲ್ಲ, ಒಳ್ಳೆ ಡೈರೆಕ್ಟರ್ ಇದ್ದೀರಿ ಅನ್ನೋದು ಗೊತ್ತಾಗುತ್ತೆ. ಇಂಥವೆಲ್ಲ ಪರದೇ ಮೇಲೆ ಇಟ್ಕೊಳ್ಳಿ. ಹಿಂದೂ ಧಾರ್ಮಿಕ ವಿಚಾರಗಳಿಗೆ ಧಕ್ಕೆ ತಂದರೆ ಸಹಿಸೋಲ್ಲ ಎಂದು ಎಚ್ಚರಿಸಿದರು.

ಪ್ರಕಾಶ್‌ ರಾಜ್‌ರನ್ನ ಚಿತ್ರರಂಗದಿಂದ ಬಹಿಷ್ಕರಿಸಿ

ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ, ಸಂಚು ಮಾಡುವ ಇಂಥ ನಟನನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು. ಈ ಬಗ್ಗೆ ನಾವು ದೂರು ಕೊಡ್ತೇವೆ. ಧರ್ಮಸ್ಥಳದ ವಿರುದ್ಧ ಕೇರಳದಿಂದ ಎರಡುನೂರು ಕೋಟಿ ವ್ಯವಹಾರ ನಡೆದಿದೆ. ಧರ್ಮಸ್ಥಳದ ಹೆಸರು ಕೆಡಿಸಲು ಎಂಥ ನೀಚ ಕೆಲಸ ಮಾಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಕೂಡ ಇದೆ. ಈ ಎಲ್ಲದರ ಬಗ್ಗೆ ಸಮಗ್ರವಾಗಿ ತನಿಖೆ ಮಾಡಬೇಕು. ಚನ್ನೈ ಚಿತ್ರರಂಗದವರಿಗೆ ಕೂಡ ದೂರು ಕೊಡ್ತೇವೆ. ಹಿಂದೂ ಧರ್ಮ ಹಾಳುಮಾಡುವ ಷಡ್ಯಂತ್ರ ನಾಸ್ತಿಕರು, ಮುಸ್ಲಿಮರು, ಕಮ್ಯುನಿಷ್ಟರು ಮಾಡ್ತಿದ್ದಾರೆ ಎಂದರು

ನಾನು ಸೌಜನ್ಯಗೆ ನ್ಯಾಯ ಸಿಗಬೇಕು ಅಂತಾ ಬಯಸ್ತೇನೆ:

ಸೌಜನ್ಯ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ನಾನು ಸೌಜನ್ಯ ಪರ ಇದ್ದೇನೆ. ಆಕೆಯ ಸಾವಿಗೆ ನ್ಯಾಯ ಸಿಗಬೇಕು. ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ಸಂತೋಷಗೆ ಸೌಜನ್ಯ ಕೊಲೆ ಕೇಸ್ ಗೆ ಸಂಬಂಧ ಇಲ್ಲ ಅಂತಾ ಕೋರ್ಟ್ ಹೇಳಿದೆ. ವಿನಕಾರಣ ಸೌಜನ್ಯ ಕೇಸ್ ಹೆಸರಲ್ಲಿ ಧರ್ಮಸ್ಥಳದ ಹೆಸರು ಕೆಡಿಸಲು ಸಂಚುಕೋರರು ಯತ್ನಿಸುತ್ತಿದ್ದರು ಎಂಬುದು ಈಗ ಬಯಲಾಗಿದೆ ಎಂದರು.

ತಲೆಹಿಡುಕ ಭಗವಾನ್‌ರನ್ನ ಬಂಧಿಸಿ

ರಾಮನ ಬಗ್ಗೆ ಕೀಳಾಗಿ ಮಾತನಾಡುವ ತಲೆಹಿಡುಕ ಪ್ರೊ. ಭಗವಾನ್‌ರನ್ನ ಬಂಧಿಸಿ. ಯಾವುದು ಧಾರ್ಮಿಕ ಗ್ರಂಥದ ಬಗ್ಗೆ ಅವಹೇಳನ ಮಾಡುವಂತಿಲ್ಲ ಅಂತಾ ಸಂವಿಧಾನ ಹೇಳಿದೆ. ಆದರೆ ಈ ತಲೆಹಿಡುಕ, ಮೂರಾಬಟ್ಟೆಯಾದ ಭಗವಾನ್ ಗೆ ಪರಿಜ್ಞಾನ ಇದೆಯಾ? ರಾಮನ ಬಗ್ಗೆ ಬರೆದ ವಾಲ್ಮೀಕಿ ಅವರಿಗೆ ಅಪಮಾನ ಮಾಡ್ತೀರಿ. ಇದು ರೀತಿ ನಾಲಗೆ ಹರಿಬಿಟ್ಟರೆ ಹುಷಾರ್ ನಾಲಿಗೆ ಕಿತ್ತು ಬಿಸಾಡ್ತಿವಿ ಎಂದು ಎಚ್ಚರಿಸಿದರು.

ಪೊಲೀಸ್ ಇಲಾಖೆಯವರು ಕತ್ತೆ ಕಾಯ್ತಾ ಇದ್ದೀರಾ?

ರಾಮನ ಬಗ್ಗೆ, ಹಿಂದೂಗಳ ಬಗ್ಗೆ ತಲೆಹಿಡುಕ ಭಗವಾನ್ ಬಹಿರಂಗವಾಗಿ ಅಪಮಾನ ಮಾಡ್ತಿದ್ರೂ ಬಂಧಿಸುತ್ತಿಲ್ಲ ಯಾಕೆ? ನೀವು ಬಂಧಿಸದಿದ್ರೆ ನಾವು ಅವನನ್ನು ಸುಮ್ನೆ ಬಿಡೋಲ್ಲ. ತಕ್ಷಣ ಭಗವಾನ್ ಮೇಲೆ ಸುಮೋಟೊ ಕೇಸ್ ದಾಖಲಿಸಿ ಬಂಧಿಸಬೇಕು.ಸರ್ಕಾರ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ರೆ ನಾವೇ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

PREV
Read more Articles on
click me!

Recommended Stories

ಆರು ತಿಂಗಳ ಹಿಂದೆ ಸತ್ತಿದ್ದ ಅಜ್ಜಿ ಮತ್ತೆ ಕಾಣಿಸಿಕೊಂಡಳಾ? ಚಿಕ್ಕಮಗಳೂರಿನ ನಿಗೂಢ ಘಟನೆ
ಬಳ್ಳಾರಿಯಲ್ಲಿ ಸಿಕ್ಕ ಬಂಡೆಯಲ್ಲಿ ಬಯಲಾಯ್ತು 17ನೇ ಶತಮಾನದ ನಿಗೂಢ ರಹಸ್ಯ, 8 ಸಾಲಿನ ಅಪರೂಪದ ಶಾಸನ ಪತ್ತೆ!