ಡ್ರಗ್ಸ್ ಮಾಫಿಯಾ ಜೊತೆ ಜಮೀರ್ ಅಹಮದ್ ಹೆಸರು ಕೇಳಿ ಬರುತ್ತಿದ್ದು, ಇದೀಗ ಪ್ರಮೋದ್ ಮುತಾಲಿಕ್ ಸ್ಫೋಟಕ ಸಂಗತಿಯೊಂದನ್ನು ಹೊರಹಾಕಿದ್ದಾರೆ.
ಮದ್ದೂರು (ಸೆ.13): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಾಂಗ್ಲಾದೇಶಿಯರೊಂದಿಗೆ ಶಾಸಕ ಜಮೀರ್ ಅಹಮ್ಮದ್‌ಗೆ ನಂಟಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶನಿವಾರ ಆರೋಪಿಸಿದರು.
ವಿಶ್ವಹಿಂದೂ ಪರಿಷತ್ ಮುಖಂಡ ಜಗನ್ನಾಥ್ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್ ಡ್ರಗ್ಸ್ ದಂಧೆಯಲ್ಲಿ ನೂರಕ್ಕೆ ನೂರಷ್ಟುಇರುವುದು ಸತ್ಯ. ಅವರನ್ನು ಬಂಧಿಸಿದರೆ ಸತ್ಯ ಹೊರ ಬರುತ್ತದೆ. ಜಮೀರ್ ತಮ್ಮ ಹುಟ್ಟುಹಬ್ಬಕ್ಕೆ ಮುಂಬೈನ ನಟ, ನಟಿಯರನ್ನು ಕರೆಸಿದ್ದರು. ಅವರನ್ನು ಇಲ್ಲಿಗೆ ಕರೆಸುವ ಅಗತ್ಯವೇನಿತ್ತು. ಅವರಲ್ಲಿ ಡ್ರಗ್ಸ್ ವ್ಯವಹಾರ ಇದ್ದುದ್ದರಿಂದಲೇ ಅವರನ್ನು ಇಲ್ಲಿಗೆ ಕರೆಸಿದ್ದರು ಎಂದು ದೂರಿದರು.
'ಸಂಜನಾ, ರಾಗಿಣಿ ಇವ್ರು ನಟಿಯರಾ? ರಾಗಿಣಿಯನ್ನು ಒದ್ದು ಓಳಗೆ ಹಾಕಿ'
ಜಮೀರ್ ಈ ರಾಜ್ಯಕ್ಕೆ ದೊಡ್ಡ ಕಂಟಕ ಪ್ರಾಯರಾಗಿದ್ದಾರೆ. ಈ ಹಿಂದೆ 200ಕ್ಕೂ ಹೆಚ್ಚು ಬಾಂಗ್ಲಾದೇಶಿಯರು ಬೆಂಗಳೂರಿಗೆ ಬಂದಿದ್ದರು. ಅವರನ್ನು ಜಮೀರ್ ಅಹಮ್ಮದ್ 8 ರಿಂದ 10 ಬಸ್‌ಗಳಲ್ಲಿ ಕರೆದೊಯ್ದಿದ್ದರು. ಅವರನ್ನು ಎಲ್ಲಿಗೆ ಕರೆದುಕೊಂಡು ಹೋದರು. ಇದರ ಹಿಂದಿನ ಉದ್ದೇಶವೇನು ಎಂಬುದು ತಿಳಿಯಬೇಕಾದರೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ವ್ಯವಹಾರದ ಹಿಂದೆ ಜಮೀರ್ ಇದ್ದು, ಇದರ ಹಿಂದೆ ದೊಡ್ಡ ಹಣದ ಹೊಳೆ ಹರಿದಾಡುತ್ತಿದೆ. ಹಣದಲ್ಲಿ ಎಲ್ಲರನ್ನು ಅವರು ಆಟವಾಡಿಸುತ್ತಿದ್ದಾರೆ. ಸಮಾಜ ಮತ್ತು ದೇಶದ ಅವರಿಗೆ ಕಿಂಚಿತ್ತು ಕಾಳಜಿ ಇಲ್ಲ ಎಂದ ಅವರು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ರಾಜಕಾರಣಿಗಳು ಹಾಗೂ ಮಕ್ಕಳು ಡ್ರಗ್ಸ್ ವ್ಯವಹಾರದಲ್ಲಿ ಇದ್ದಾರೆ ಎಂದು ಆರೋಪಿಸಿದರು.
ಕೊಲಂಬೋಗೆ ಹೋಗಿದ್ದು ನಿಜ, 6 ವರ್ಷಗಳ ಹಿಂದಿನ ಕಥೆ ಈಗ್ಯಾಕ್ರಿ?: ಎಚ್‌ಡಿಕೆ ...
ರಾಜ್ಯದಲ್ಲಿರುವ ಪಬ್, ಕ್ಲಬ್‌ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅವರಿಗೆ ಇಂಚಿಂಚು ಗೊತ್ತಿದೆ. ಪೊಲೀಸರು ಟೆæರರಿಸ್ಟ್ ಗಳನ್ನೇ ಹಿಡಿದಿದ್ದಾರೆ. ಆದರೆ, ರಾಜಕಾರಣಿಗಳು ಪೊಲೀಸರ ಕೈ ಕಟ್ಟಿಹಾಕಿದ್ದಾರೆ. ಅವರು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಮದ್ದೂರು ನಗರ ಘಟಕದ ಅಧ್ಯಕ್ಷ ಮಧುಕುಮಾರ್, ವಿಎಚ್‌ಪಿ ಮುಖಂಡರಾದ ಶಾಮಿಯಾನ ಗುರುಸ್ವಾಮಿ, ನೈದಿಲೆ ಚಂದ್ರು, ವಕೀಲ ಮಲ್ಲೇಶ್ , ಎಂ.ಸಿ.ಸಿದ್ದು, ಟೈರ್ ಗಿರೀಶ್, ರಘು ಚನ್ನಸಂದ್ರ, ವೀರಭದ್ರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೊನ್ನಲಗೆರೆ ಸ್ವಾಮಿ ಇದ್ದರು.