ಖಾದರ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ: ಮುತಾಲಿಕ್‌

By Suvarna NewsFirst Published Dec 19, 2019, 7:18 AM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾಗತಾರ್ಹ| ಕಾಂಗ್ರೆಸ್‌ ಕುಮ್ಮಕ್ಕಿನಿಂದ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ| ಮಾಜಿ ಸಚಿವ ಯು.ಟಿ. ಖಾದರ್‌ ಅವರೇ ಮುಸ್ಲಿಮರನ್ನು ಪ್ರಚೋದನೆ ಮಾಡುತ್ತಿದ್ದು, ಅವರನ್ನು ಬಂಧಿಸಬೇಕು ಎಂದ ಪ್ರಮೋದ್‌ ಮುತಾಲಿಕ್‌|

ಹುಬ್ಬಳ್ಳಿ[ಡಿ.19]: ಪೌರತ್ವ ಕಾಯ್ದೆ ಜಾರಿಗೆ ತಂದರೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿರುವ ಯು.ಟಿ. ಖಾದರ್‌ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಕಿಡಿ ಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾಗತಾರ್ಹವಾಗಿದ್ದು, ಕಾಂಗ್ರೆಸ್‌ ಕುಮ್ಮಕ್ಕಿನಿಂದ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ಮಾಜಿ ಸಚಿವ ಯು.ಟಿ. ಖಾದರ್‌ ಅವರೇ ಮುಸ್ಲಿಮರನ್ನು ಪ್ರಚೋದನೆ ಮಾಡುತ್ತಿದ್ದು, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕಾಯ್ದೆಯಿಂದ ರಾಷ್ಟ್ರದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕಾಂಗ್ರೆಸ್‌ನವರು ಮುಸ್ಲಿಂರನ್ನು ಎತ್ತಿಕಟ್ಟಿಗಲಾಟೆ ಮಾಡಿಸುತ್ತಿದ್ದಾರೆ. 50 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ಮುಸ್ಲಿಮರ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಈಗ ಮತ್ತೆ ಮುಸ್ಲಿಮರನ್ನು ಬಲಿಪಶು ಮಾಡುತ್ತಿದ್ದು, ಅವರು ಎಚ್ಚೆತ್ತುಕೊಳ್ಳಲೆಬೇಕಾದ ಅಗತ್ಯವಿದೆ. ಇನ್ನು, ಡಿ. 21ರಂದು ಕೇಂದ್ರ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಎಲ್ಲ ರಾಜ್ಯಗಳಲ್ಲಿ ಕೂಡಲೇ ಬಿಲ್‌ ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ತಡವಾಗಿ ಆದರೂ ಗಲ್ಲು ಶಿಕ್ಷೆ ಕಾಯಂಗೊಳಿಸಿದ್ದು ಸ್ವಾಗತಾರ್ಹ. ಈಗಾಗಲೇ ಘಟನೆ ನಡೆದು, ಶಿಕ್ಷೆ ನೀಡುವಲ್ಲಿ ಏಳು ವರ್ಷ ಕಳೆದುಹೋಗಿದ್ದು, ಅದರ ನಡುವೆ ಸಾಕಷ್ಟು ಅತ್ಯಾಚಾರಗಳು ನಡೆದಿವೆ. ಇಂತಹವರನ್ನು ಎನ್‌ಕೌಂಟರ್‌ ಮಾಡುವುದೇ ಸರಿ ಎನಿಸುತ್ತಿದೆ. ಇನ್ನು ಮುಂದೆಯೂ ಕೂಡ ತಡ ಮಾಡದೆ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬಾಂಗ್ಲಾದೇಶದಿಂದ ಸಿಂಧನೂರಿಗೆ ಬಂದು ನಿರಾಶ್ರಿತ ಶಿಬಿರದಲ್ಲಿರುವ ಮೇಸ್ತ್ರಿ ಹಾಗೂ ಪ್ರದೀಪ ದಾಸ್‌ ಎನ್ನುವವರು ಈ ಮಸೂದೆ ನಮಗೆ ಖುಷಿಯಾಗಿದೆ. ಇದರಿಂದ ನಾವು ನಿರಾತಂಕವಾಗಿ ಜೀವನ ಸಾಗಿಸಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

click me!