ಪೌರತ್ವ ಕಾಯ್ದೆ: 'ಬೆಂಗಳೂರಿನಲ್ಲಿ ನೋ ಪರ್ಮಿಷನ್..ನೋ ಪ್ರೊಟೆಸ್ಟ್'

By Suvarna NewsFirst Published Dec 18, 2019, 5:09 PM IST
Highlights

ಪೌರತ್ವ ಕಾಯ್ದೆ (ಸಿಎಎ) - 2019 ’ ದೇಶದಲ್ಲಿ ಪ್ರತಿಭಟನೆಯ ಕಿಚ್ಚು ಹಚ್ಚಿದೆ. ಅದರಲ್ಲೂ ಈಶಾನ್ಯ ಭಾರತದಲ್ಲಿ ಹುಟ್ಟಿಕೊಂಡ ಪ್ರತಿರೋಧದ ಕಿಡಿ ಜ್ವಾಲೆಯಾಗಿ ಮಾರ್ಪಟ್ಟಿದೆ. ರಾಜ್ಯದಲ್ಲೂ ಸಹ ಕೊಂಚ ಮಟ್ಟಿಗೆ ವಿರೋಧಗಳ ವ್ಯಕ್ತವಾಗುತ್ತಿವೆ. ಇನ್ನು ಬೆಂಗಳೂರಿನಲ್ಲಿ ನೋ ಪರ್ಮಿಷನ್..ನೋ ಪ್ರೊಟೆಸ್ಟ್ ಎಂದು ನಗರ ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, (ಡಿ.18): ಪೌರತ್ವ ಕಾಯ್ದೆ ಕುರಿತು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದರೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಪೌರತ್ವ ಕಾಯ್ದೆ ಕುರಿತು ಪ್ರತಿಭಟನೆಗೆ ಅನುಮತಿ ನೀಡುವಂತೆ ಸಾಕಷ್ಟು ಅರ್ಜಿಗಳು ಬಂದಿವೆ. ಆದ್ರೆ, ಪ್ರತಿಭಟನೆಗೆ ಅವಕಾಶ ನೀಡದೇ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಪೌರತ್ವ ಕಾಯ್ದೆ ರಾಜ್ಯದಲ್ಲಿ ಜಾರಿ ನಿಶ್ಚಿತ: ಬೊಮ್ಮಾಯಿ

ಪ್ರತಿಭಟನೆ ನಡೆಸುವುದಾದರೇ ಉತ್ತರ ಭಾರತದಲ್ಲಿಯೇ ಹೋಗಿ ಭಾಗವಹಿಸಿ. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚೋದನಕಾರಿ ಪೋಸ್ಟ್ ಹಾಕುವವರ ಮೇಲೆ ಐಟಿ ಸೆಲ್ ನಿಂದ ನಿಗಾವಹಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಎರಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.  ಅವರ ವಿರುದ್ಧ ಕ್ರಮ ಹಾಗೂ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ನೀಡಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು. 

ಪ್ರತಿಭಟನೆ ಮಾಡುವ ಪ್ರತಿಯೊಬ್ಬರ ವಿಡಿಯೋ ಚಿತ್ರೀಕರಣಕ್ಕೆ ಸೂಚನೆ ನೀಡಲಾಗಿದ್ದು, ಕಾನೂನು-ಸುವ್ಯವಸ್ಥೆಗೆ ಭಂಗವಾದರೇ ಸುಮ್ಮನಿರಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

ಇದನ್ನೂ ಮೀರಿ ಪೌರತ್ವ ಕಾಯ್ದೆ ಕುರಿತು ಬೀದಿಗಿಳಿದರೇ ಜೈಲೂಟ ಫಿಕ್ಸ್. ಕೋಲ್ಕತ್ತಾ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಈ ಪೌರತ್ವ ಕಾಯ್ದೆಯನ್ನು ರಾಜ್ಯದಲ್ಲಿ ಜನವರಿಯಿಂದ ಜಾರಿಗೆ ತರಲು ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಬಗ್ಗೆ ಈಗಾಗಲೇ ಮೋದಿ ಅವರು ಸಹ ಯಡಿಯೂರಪ್ಪ ಜತೆ ದೂರವಾಣಿ ಮಾತುಕತೆ ನಡೆಸಿದ್ದು, ಬೇಗ ಪೌರತ್ವ ಕಾಯ್ದೆ ಜಾರಿಗೆ ತನ್ನಿ ಎಂದು ಬಿಎಸ್‌ವೈಗೆ ಮೋದಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

click me!