18 ವಯಸ್ಸಾಗಿದ್ರೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಈ ಕೂಡಲೇ ತ್ವರೆ ಮಾಡಿ

By Suvarna NewsFirst Published Dec 18, 2019, 7:05 PM IST
Highlights

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 18 ವರ್ಷದವರಾಗಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಈ ಕೂಡಲೇ ಕಳಗೆ ತಿಳಿಸಿರುವ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ. 

ಬೆಂಗಳೂರು, [ಡಿ.18]: ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು. 18 ವಯಸ್ಸಾಗಿದ್ದರೇ ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಬೇಕು. 

ಮತದಾನವು ಜನತೆಯು ಯಾವುದಾದರೂ ವಿಷಯ, ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ. 18 ವಯಸ್ಸಾಗಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದರೇ ಮತದಾನಕ್ಕೆ ಅವಕಾಶವಿಲ್ಲ. 

ವೋಟರ್‌ ಐಡಿಗೂ ಇನ್ಮುಂದೆ ಆಧಾರ್‌ ಲಿಂಕ್‌?

ನೀವಾಗಲೇ 18 ವರ್ಷದವರಾಗಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ?
ಈ ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ!!

ಕೊನೆಯ ದಿನಾಂಕ 15-01-2020

Please visit:https://t.co/Kt1ePKgB4Yhttps://t.co/8D3SirOjVB
ERO Office
BBMP Office pic.twitter.com/QBkZGz6tNt

— Chief Electoral Officer, Karnataka (@ceo_karnataka)

ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಮತದಾನ ಮಾಡಲು ಭಾರತೀಯ ಪ್ರಜೆ ಕನಿಷ್ಠ 18 ವಯಸ್ಸಿಗಿರಬೇಕು. 

18 ವರ್ಷದವರಾಗಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಈ ಕೂಡಲೇ ಕಳಗೆ ತಿಳಿಸಿರುವ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ.

ಬೆಂಗಳೂರಿನ ಮತದಾರರ ಪಟ್ಟಿಗೆ ಅರ್ಹ ಮತದಾರರು ಹೆಸರು ನೊಂದಾಯಿಸಬಹುದು ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದ್ದು, ದಿನಾಂಕ  15-01-2020ರೊಳಗೆ ಮೂಲ ದಾಖಲಾತಿಗಳೊಂದಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ. 

ಬೇಕಾದ ದಾಖಲಾತಿಗಳು
1. ಹುಟ್ಟಿದ ದಿನಾಂಕ/ ವಯಸ್ಸಿನ ದೃಢೀಕರಣ
2. ವಿಳಾಸ ದೃಢೀಕರಣ
3. ಪಾಸ್ ಪೋರ್ಟ್ ಅಳತೆಯೆ 2 ಭಾವಚಿತ್ರಗಳು

ಮೇಲಿನ ದಾಖಲೆಗಳೊಂದಿಗೆ ಬಿಬಿಎಂಪಿ ಆಫೀಸ್ ಅಥವಾ ERO ಆಫೀಸ್ ಗೆ ಭೇಟಿ ನೀಡಿ.

click me!