ಕಾಳಿಕಾ ದೇವಿಗೆ ಅವಮಾನ: ಮುತಾಲಿಕ್‌ ಆಕ್ರೋಶ

By Kannadaprabha News  |  First Published Jul 5, 2022, 7:27 AM IST

*   ಹಿಂದೂ ಧರ್ಮ ಅವಮಾನ ಮಾಡುವ ಮನಸ್ಥಿತಿಯುಳ್ಳ ಕಮ್ಯುನಿಸ್ಟರ ವರ್ಗ ಇಲ್ಲಿದೆ
*  ತಮ್ಮ ಪಾಡಿಗೆ ಇರುವುದನ್ನು ಬಿಟ್ಟು ಬೇರೆಯವರ ನಂಬಿಕೆಗೆ ತೊಂದರೆ ಕೊಡಬಾರದು 
*  ಹಿಂದೂ ದೇವರಿಗೆ ಅವಮಾನ ಮಾಡಿದವರ ಮೇಲೆ ಇನ್ನೂ ಕ್ರಮವಾಗಿಲ್ಲ
 


ಧಾರವಾಡ(ಜು.05):  ತಮಿಳುನಾಡಿನಲ್ಲಿ ಕಾಳಿಕಾ ದೇವಿಗೆ ಅವಮಾನ ಮಾಡಿರುವ ಸಂಗತಿ ಅಸಭ್ಯವಾದುದು. ದೇವರಲ್ಲಿ ನಂಬಿಕೆ ಇಡುವುದು ಅವರವರ ನಂಬಿಕೆಗೆ ಬಿಟ್ಟಿದ್ದು. ಬೇರೆಯವರ ನಂಬಿಕೆಗಳಿಗೆ ತೊಂದರೆ ಕೊಡುವುದು ಸರಿಯಲ್ಲ. ಆದ್ದರಿಂದ ಈ ಘಟನೆಯನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಮೋದ್‌ ಮುತಾಲಿಕ್‌ಹೇಳಿದರು.
ಸೋಮವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಿಂದೂ ಧರ್ಮ ಅವಮಾನ ಮಾಡುವ ಮನಸ್ಥಿತಿಯುಳ್ಳ ಕಮ್ಯುನಿಸ್ಟರ ವರ್ಗ ಇಲ್ಲಿದೆ. ತಮ್ಮ ಪಾಡಿಗೆ ಇರುವುದನ್ನು ಬಿಟ್ಟು ಬೇರೆಯವರ ನಂಬಿಕೆಗೆ ತೊಂದರೆ ಕೊಡಬಾರದು ಎಂದು ಪ್ರಶ್ನಿಸಿದ್ದಾರೆ.  
ಹಿಂದೂ ದೇವರಿಗೆ ಅವಮಾನ ಮಾಡಿದವರ ಮೇಲೆ ಇನ್ನೂ ಕ್ರಮವಾಗಿಲ್ಲ. ನೂಪುರ್‌ ಶರ್ಮಾ ಮಾಡಿರುವ ಪೋಸ್ಟ್‌ಬಗ್ಗೆ ನ್ಯಾಯಾಲಯಗಳು ಸಹ ಟೀಕೆ ವ್ಯಕ್ತಪಡಿಸಿದವು. ಸ್ವಯಂ ಪ್ರೇರಣೆಯ ಪ್ರಕರಣ ಸಹ ದಾಖಲಾಯಿತು. ಇದೀಗ ತಮಿಳುನಾಡಿನಲ್ಲಾಗಿರುವ ಘಟನೆ ನೋಡಿ ಏತಕ್ಕೆ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲು ಮಾಡಿಕೊಳ್ಳೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

click me!