ಸರ್ಕಾರದ ಜೊತೆ ಇದ್ದು ಹೋರಾಟ ಮಾಡ್ತೀನಿ : ಪ್ರಜ್ವಲ್ ರೇವಣ್ಣ

By Kannadaprabha NewsFirst Published Nov 20, 2020, 2:43 PM IST
Highlights

ನಾನು ಸರ್ಕಾರದ ಜೊತೆಗಿದ್ದು ಹೋರಾಟ ಮಾಡ್ತೀನಿ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. 

 ಹಾಸನ (ನ.20):  ಮುಂದೆ ನಡೆಯಲಿರುವ ಬಸವ ಕಲ್ಯಾಣದ ಉಪಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಹಣ ಮೀಸಲಿಡದೆ ವೀರಶೈವ ಅಭಿವೃದ್ಧಿ ನಿಗಮ ರಚನೆ ಮಾಡಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಗಂಭೀರ ಆರೋಪ ಮಾಡಿದರು.

ನಗರದ ಜಿಲ್ಲಾ ಪಂಚಾಯತಿ ದಿಶಾ ಸಭೆ ಮುಗಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಸವ ಕಲ್ಯಾಣದ ಉಪಚುನಾವಣೆ ಮುಂದಿಟ್ಟುಕೊಂಡು ಈ ನಿಗಮ ಮಾಡಿದ್ದಾರೆ. ಹಣವಿಲ್ಲದ ಕೇವಲ ನಾಮಕಾವಸ್ತೆ ನಿಗಮವಾಗಿದೆ. ಈ ಹಿಂದೆ ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ನಿಗಮ ಮಾಡಿದ್ದರು. ಈವರೆಗೂ ಈ ನಿಗಮಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಸರ್ಕಾರದ ನಡೆಗೆ ಕಿಡಿಕಾರಿದರು.

ಜೆಡಿಎಸ್ ವಲಯದಿಂದ ಮಹತ್ವದ ಸುದ್ದಿ : ಬಿಜೆಪಿಗೆ ಕೈ ಜೋಡಿಸಲು ಮುಂದಾದ್ರ ಗೌಡ್ರು ...

ಇದರ ಜೊತೆಗೆ ಕಾರವಾರ ಬೆಳಗಾವಿ ಸೇರಿ ಕೆಲ ಭಾಗಗಳು ಮಹಾರಾಷ್ಟ್ರಕ್ಕೆ ಸೇರಿದ್ದು, ಎಂದು ಮಹಾರಾಷ್ಟ್ರ ಸರ್ಕಾರದ ಕ್ಯಾತೆ ತೆಗೆದಿರುವ ವಿಚಾರವಾಗಿ ಮಾತನಾಡಿ, ಕೇಂದ್ರದಲ್ಲಿ ನಮ್ಮ ಸಂಸದರು ಸರಿಯಾಗಿ ಮಾತನಾಡಿ ಉತ್ತರ ಕೊಡಬೇಕು. ಪಕ್ಷಾತೀತವಾಗಿ ಕನ್ನಡದ ನಾಡುನುಡಿ ಉಳಿಸಲು ನಾನು ಬದ್ಧವಾಗಿದ್ದೇನೆ. ನಮ್ಮ ನಾಡು ಭಾಷೆ ವಿಚಾರದಲ್ಲಿ ನಾನು ಯಾವಾಗಲೂ ಹೋರಾಡಲು ಸಿದ್ಧ. ಸರ್ಕಾರದ ಜೊತೆಯಿದ್ದು, ನಾನು ಹೋರಾಟ ಮಾಡುತ್ತೇನೆ ಎಂದರು.

ಇದೇ ವೇಳೆ ಜಿಲ್ಲೆಯಲ್ಲಿ ನಡೆದ ದಿಶಾ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒಗೆ ಸೂಚನೆ ನೀಡಿರುವುದಾಗಿ ಹೇಳಿದ್ದರು.

click me!