ಪ್ರಜ್ವಲ್‌ ರೇವಣ್ಣ29ನೇ ಹುಟ್ಟುಹಬ್ಬಕ್ಕೆ 29 ಗಿಡ

By Kannadaprabha NewsFirst Published Aug 6, 2019, 1:34 PM IST
Highlights

ಸಂಸದ ಪ್ರಜ್ವಲ್ ರೇವಣ್ಣ ಅವರ 29ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು 29ಗಿಡಗಳನ್ನು ನೆಟ್ಟಿದ್ದಾರೆ. ಬೇಲೂರು ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಮಾಡಿ, ನಂತರ ಗಿಡಗಳನ್ನು ನೆಡುವ ಮೂಲಕ ಅಭಿಮಾನಿಗಳು ಪ್ರಜ್ವಲ್ ರೇವಣ್ಣ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಹಾಸನ(ಆ.06): ಬೇಲೂರು ಪಟ್ಟಣದ ಚನ್ನಕೇಶವ ನಗರದಲ್ಲಿ ಪ್ರಜ್ವಲ್‌ ರೇವಣ್ಣ ಅವರ ಹುಟ್ಟುಹಬ್ಬವನ್ನು 29 ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಕೆಎಸ್‌ ಲಿಂಗೇಶ್‌, ಜಾತ್ಯತೀತ ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಚನ್ನಕೇಶವ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡುವ ಮೂಲಕ ಅವರ 29ನೇ ವರ್ಷವನ್ನು 29 ಗಿಡಗಳನ್ನು ನೆಡುವ ಮೂಲಕ ಆಚರಣೆ ಮಾಡುತ್ತಿದ್ದೇವೆ ಎಂದರು.

ನಾವೂ ನಮ್ಮ ಪರಿಸರವನ್ನು ರಕ್ಷಿಸುವ ಜೊತೆಗೆ ಪ್ರಜ್ವಲ್‌ ರೇವಣ್ಣನವರು ಸಂಸದರಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರಪ್ರಥಮವಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿ ಆಯ್ಕೆ ಆದ ತಕ್ಷಣ ಅವರು ಮೊದಲು ಮಾಡಿದ ಕೆಲಸ ಅಂದರೆ, ರಾಜ್ಯದ ಸಮಸ್ಯೆಗಳ ಬಗ್ಗೆ ಸ್ವ-ವಿವರವಾಗಿ ಕೇಂದ್ರ ಸರ್ಕಾರಕ್ಕೆ ಮನದಟ್ಡು ಮಾಡಿಕೊಟ್ಟರು. ಅವರ ಮುಂದಿನ ಎಲ್ಲ ಅಧಿಕಾರಗಳು ಸುಗಮವಾಗಿ ಸಾಗಲಿ ಎಂದು ಹಾರೈಸಿದರು.

ಸರ್ಕಾರ ಪತನಕ್ಕೆ ಕಾಂಗ್ರೆಸ್‌ ನಾಯಕರು ಕಾರಣ: ಪ್ರಜ್ವಲ್‌ ರೇವಣ್ಣ

ಅದಕ್ಕೂ ಮೊದಲು ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಪ್ರಜ್ವಲ್‌ ರೇವಣ್ಣ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿ ಪೂಜೆ ಸಲ್ಲಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾವ್‌, ಬಿ.ಡಿ.ಚಂದ್ರೇಗೌಡ, ಎಂ.ಎ.ನಾಗರಾಜ್‌, ಜಗದೀಶ್‌, ರವಿಕುಮಾರ್‌, ಜಿ.ಟಿ. ಇಂದಿರಾ ದರ್ಮಪ್ಪ, ಮಲ್ಲೇಗೌಡ್ರು, ರವಿ, ಜಮನಾ ಅಣ್ಣಪ್ಪ, ಕಮಲಾಚಿಕ್ಕಣ್ಣ, ತೀರ್ಥಮ್ಮ, ಮಹದೇವ್‌, ಪರಿಸರ ಅಭ್ಯಂತರ ಮಧುಸುಧನ್‌ ಇನ್ನಿತರ ಕಾರ್ಯಕರ್ತರು ಇದ್ದರು.

click me!