ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಪಟೂರು ತಾಲೂಕು ರಂಗನಹಳ್ಳಿ ಶಿವಸತ್ಯ ಶನೇಶ್ವರ ಸ್ವಾಮಿ ಸನ್ನಿದಾನದ ಯಶವಂತ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ತುಮಕೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಪಟೂರು ತಾಲೂಕು ರಂಗನಹಳ್ಳಿ ಶಿವಸತ್ಯ ಶನೇಶ್ವರ ಸ್ವಾಮಿ ಸನ್ನಿದಾನದ ಯಶವಂತ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ರಂಗನಹಳ್ಳಿಯಲ್ಲಿ ನಡೆದ ಶಿವ ಸತ್ಯ ಶನೇಶ್ವರ ಸ್ವಾಮಿಯ 19 ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಭವಿಷ್ಯ ನುಡಿದಿದ್ದಾರೆ. 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳು ಪ್ರಬಲ ಪæೖಪæäೕಟಿ ನಡೆಸಿದರೂ ಈ ಬಾರಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದೇ ಕಾಂಗ್ರೆಸ್ ಪಕ್ಷ ಎಂದು ಗುರೂಜಿ ತಿಳಿಸಿದ್ದಾರೆ. ಕಾಲ ಜ್ಞಾನದ ಭವಿಷ್ಯ ವಾಣಿಯ ಪ್ರಕಾರ ಪುರಾತನ ತಾಳೆ ಗರಿಯಲ್ಲಿ ಭವಿಷ್ಯ ಇದೆ ಎಂದ ಗುರೂಜಿ ಯುಗಾದಿ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಮತ್ತೆ ಕೆಲವು ರಾಜಕಾರಣಿಗಳಿಗೆ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಸ್ತ್ರೀ ಯಿಂದ ಕಂಟಕಗಳು ಎದುರಾಗುತ್ತದೆ. ಮೂರು ಪಕ್ಷಗಳು ಕಿತ್ತಾಡಿ ಕಾಂಗ್ರೆಸ್ ಪಕ್ಷ ಈ ಬಾರಿ ರಾಜ್ಯ ಗದ್ದುಗೆ ಹಿಡಿಯಲಿದೆ ಎಂದರು.
undefined
ಯೋಗ ಇರುವ ರಾಜ ಈ ರಾಜ್ಯವನ್ನು ಆಳುತ್ತಾನೆ ಎಂದಿರುವ ಆ ರಾಜ ವಿಶೇಷವಾಗಿ ರಾಜ್ಯವನ್ನು ಉನ್ನತ ಸ್ಥಾನಗಳಿಗೆ ಏರಿಸುತ್ತಾನೆ. ಆ ರಾಜ ಯಾರು ಅಂತಾ ಜಾತಕಗಳನ್ನು ನೋಡಬೇಕಾಗುತ್ತದೆ ಎಂದರು.
ವಿಶೇಷವಾಗಿ ಕಾಂಗ್ರೆಸ್ ಪಕ್ಷ ನೂರಕ್ಕೆ 200% ಅಧಿಕಾರಕ್ಕೆ ಬರುತ್ತದೆ ಎಂದಿರುವ ಅವರು ಕಾಂಗ್ರೆಸ್‌ನಲ್ಲಿ ಏನೇ ಕಿತ್ತಾಟ ಆದರೂ ಕೂಡ ಒಬ್ಬ ವ್ಯಕ್ತಿಯನ್ನು ಗದ್ದುಗೆಗೆ ಏರಿಸುತ್ತಾರೆ. ನಾವು ಹೇಳಿರುವ ಭವಿಷ್ಯ ಯಾವತ್ತು ಕೂಡ ಸುಳ್ಳಾಗಿಲ್ಲ ಎಂದಿದ್ದಾರೆ
ಜೆಡಿಎಸ್ ಅಧಿಕಾರಕ್ಕೆ ಬರೋದು ಕನಸು
ಮದ್ದೂರು : ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಅದು ಕೇವಲ ಕನಸು. ಭ್ರಷ್ಟಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿದ್ದಾರೆ. ರಾಜ್ಯ, ರಾಷ್ಟ್ರದ ಹಿತ ಕಾಪಾಡಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಜನ ಸಾಮಾನ್ಯರು ಹಾಗೂ ರೈತರ ಬದುಕಿಗೆ ಬದಲಾವಣೆ ತರುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಸಮುದ್ರ ಪಾಲಾಗುವ ಕಾವೇರಿ ನೀರನ್ನು ಉಳಿಸಲು ಮೇಕೆದಾಟು ಯೋಜನೆ ಜಾರಿಗೊಳಿಸುವ ಅವಶ್ಯಕತೆ ಇದೆ. ಈ ಬಗ್ಗೆ ತಾಂತ್ರಿಕವಾಗಿ ಚರ್ಚೆ ಮಾಡಿದ್ದೇನೆ. ಈ ಯೋಜನೆ ಪೂರ್ಣ ಮಾಡುವ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಮೇಲಿದೆ ಎಂದರು.