ಕಾರವಾರ: ಖಾಸಗಿ ಬಸ್‌ಗೆ ಸಿಲುಕಿದ ವಿದ್ಯುತ್‌ ತಂತಿ, ತಪ್ಪಿದ ಭಾರೀ ದುರಂತ

Suvarna News   | Asianet News
Published : Nov 25, 2020, 10:22 AM IST
ಕಾರವಾರ: ಖಾಸಗಿ ಬಸ್‌ಗೆ ಸಿಲುಕಿದ ವಿದ್ಯುತ್‌ ತಂತಿ, ತಪ್ಪಿದ ಭಾರೀ ದುರಂತ

ಸಾರಾಂಶ

ವಿದ್ಯುತ್‌ ತಂತಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತಂಕಗೊಂಡಿದ್ದ ಜನತೆ| ಕಾರವಾರ ನಗರದಲ್ಲಿ ನಡೆದ ಘಟನೆ| ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ| 

ಕಾರವಾರ(ನ.25): ನಗರದ ಸೇಂಟ್‌ ಮೈಕಲ್‌ ಕಾನ್ವೆಂಟ್‌ ಬಳಿ ಮಂಗಳವಾರ ಬೆಳಗ್ಗೆ ಖಾಸಗಿ ಬಸ್‌ನ ಕ್ಯಾರಿಯರ್‌ಗೆ ಕೇಬಲ್‌ ಸಿಲುಕಿ ಎರಡು ವಿದ್ಯುತ್‌ ಕಂಬಗಳು ಉರುಳಿದ್ದು, ವಿದ್ಯುತ್‌ ತಂತಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಜನತೆ ಆತಂಕಗೊಂಡರು.

ಬಸ್‌ನ ಟಾಪ್‌ನಲ್ಲಿ ಅಳವಡಿಸಲಾದ ಕ್ಯಾರಿಯರ್‌ಗೆ ವಿದ್ಯುತ್‌ ಕಂಬಗಳ ನಡುವೆ ಜೋಡಿಸಿದ ಕೇಬಲ್‌ ಸಿಲುಕಿತು. ಬಸ್‌ ಚಲಿಸಿದಾಗ ಎರಡು ವಿದ್ಯುತ್‌ ಕಂಬಗಳು ಹಾಗೂ ತಂತಿ ರಸ್ತೆಯ ಮೇಲೆ ಉರುಳಿತು. 

ಯಲ್ಲಾಪುರ: ಕಾಣೆಯಾದ ಮೂವರು ನದಿಯಲ್ಲಿ ಶವವಾಗಿ ಪತ್ತೆ

ಸುಮಾರು 50 ಮೀಟರ್‌ಗಳಷ್ಟು ದೂರ ಬಸ್‌ ಚಲಿಸಿತು. ಅದೃಷ್ಟವಶಾತ್‌ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಯಾರಿಗೂ ಅಪಾಯ ಉಂಟಾಗಲಿಲ್ಲ. 
 

PREV
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ