ಶೃಂಗೇರಿ ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರದ ಎಫೆಕ್ಟ್: ಎಲ್ಲೆಂದರಲ್ಲಿ ಕಸದ ರಾಶಿಯೋ... ರಾಶಿ...!

By Govindaraj S  |  First Published Dec 11, 2023, 10:43 PM IST

ಜಿಲ್ಲೆಯ ಶೃಂಗೇರಿ ಪಟ್ಟಣದಾದ್ಯಂತ ಎಲ್ಲಿ ನೋಡಿದ್ರು ಕಸ...ಕಸ... ಕಸ ತೆಗೆಯಬೇಕಾದ ಪೌರಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ತಕ್ತಪಡಿಸಿದ್ದಾರೆ. ಕಾರಣ ಇಷ್ಟೆ. ಶೃಂಗೇರಿ ಪಟ್ಟಣದಲ್ಲಿ 7-8 ಸಾವಿರ ಜನಸಂಖ್ಯೆ ಇದೆ. 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.11): ಜಿಲ್ಲೆಯ ಶೃಂಗೇರಿ ಪಟ್ಟಣದಾದ್ಯಂತ ಎಲ್ಲಿ ನೋಡಿದ್ರು ಕಸ...ಕಸ... ಕಸ ತೆಗೆಯಬೇಕಾದ ಪೌರಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ತಕ್ತಪಡಿಸಿದ್ದಾರೆ. ಕಾರಣ ಇಷ್ಟೆ. ಶೃಂಗೇರಿ ಪಟ್ಟಣದಲ್ಲಿ 7-8 ಸಾವಿರ ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಸುಮಾರು 11 ಜನ ಪೌರಕಾರ್ಮಿಕರು ಇದ್ದಾರೆ. ಅವರಲ್ಲಿ ಇಬ್ಬರು ಖಾಯಂ ಅಷ್ಟೆ. ಉಳಿದ 9 ಜನ ಹೊರಗುತ್ತಿಗೆ ನೌಕರರು. ಸಾಲದಕ್ಕೆ ಶೃಂಗೇರಿಗೆ ವಾರ್ಷಿಕ 70-80 ಲಕ್ಷ ಪ್ರವಾಸಿಗರು-ಭಕ್ತರು ಆಗಮಿಸುತ್ತಾರೆ. ದಿನಕ್ಕೆ ಕ್ವಿಂಟಾಲ್ಗಟ್ಟಲೇ ಕಸ ಸಂಗ್ರಹವಾಗುತ್ತೆ. 

Tap to resize

Latest Videos

undefined

ಇಷ್ಟು ಜನರಿಂದ ಶೃಂಗೇರಿ ಪಟ್ಟಣದ ಅಷ್ಟು ಕಸವನ್ನ ಕಸವನ್ನ ಕ್ಲೀನ್ ಆಡಲು ಆಗುತ್ತಿಲ್ಲ. ಆದರೂ, ನೌಕರರು ನಮ್ಮ ಊರು ಶುಚಿಯಾಗಿರಲಿ ಎಂದು ಕ್ಲೀನ್ ಮಾಡುತ್ತಿದ್ದಾರೆ. ಆದ್ರೀಗ, ನೌಕರರು ನಮ್ಮನ್ನ ಖಾಯಂ ಮಾಡಿಕೊಳ್ಳಿ ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಳೆದ 23-25 ವರ್ಷಗಳಿಂದ ನಾವು ಶೃಂಗೇರಿ ಪಟ್ಟಣವನ್ನ ಕ್ಲೀನ್ ಮಾಡುತ್ತಿದ್ದೇವೆ. ಎಂತಹಾ ಸಂದರ್ಭದಲ್ಲೂ ಕಸವನ್ನ ಬಿಟ್ಟಿಲ್ಲ. ನಮ್ಮನ್ನ ಖಾಯಂ ಮಾಡಿಕೊಳ್ಳಿ ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. 

ಕೇಂದ್ರ ಸರ್ಕಾರದಿಂದ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌

ಸೇವೆಯನ್ನ ಖಾಯಂ ಮಾಡುವಂತೆ ಒತ್ತಾಯ: ಸೇವೆಯನ್ನ ಖಾಯಂ ಮಾಡಿ ಎಂದು ಪ್ರತಿಭಟನೆಗೆ ಮುಂದಾಗಿರುವ ಪೌರ ಕಾರ್ಮಿಕರು ಕಳೆದೊಂದು ವಾರದಿಂದ ಶೃಂಗೇರಿಯಲ್ಲಿ ಕಸ ತೆಗೆದಿಲ್ಲ. ಇದರಿಂದ ಶೃಂಗೇರಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯೇ ತುಂಬಿದೆ. ಭಕ್ತರು, ಪ್ರವಾಸಿಗರು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವಂತಿಲ್ಲ. ರಸ್ತೆ ತುಂಬಾ ದುರ್ನಾತ. ದುರ್ವಾಸನೆ ಬೀರುತ್ತಿದೆ. ಜನಸಂಖ್ಯೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿನ ಜನಸಂಖ್ಯೆ ಆಧಾರದ ಮೇಲೆ ಪೌರಕಾರ್ಮಿಕರನ್ನ ನೇಮಕ ಮಾಡಿಕೊಳ್ಳೋದು ಕಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವಾರ್ಷಿಕ ೭೦-೮೦ ಲಕ್ಷ ಜನ ಹಾಗೂ ಗಣ್ಯಾತಿಗಣ್ಯರು ಬರುವ ಯಾತ್ರಾ ಸ್ಥಳವನ್ನ ವಿಶೇಷ ಪ್ರಕರಣವೆಂದು ಪರಿಗಣಿಸಿ ಖಾಯಂ ಮಾಡಿಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಜಾತಿ ಗಣತಿ ವರದಿ ತಿಳಿಯದೇ ಕೆಲವರ ವಿರೋಧ: ಸಚಿವ ಶಿವರಾಜ ತಂಗಡಗಿ

ದುರ್ನಾತ, ದುರ್ವಾಸನೆ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಬೀರೂರು, ಮೂಡಿಗೆರೆಯಲ್ಲಿ ಗುತ್ತಿಗೆನೌಕರರನ್ನ ಖಾಯಂ ಮಾಡಿದ್ದಾರೆ. ಆದ್ರೆ, ಶೃಂಗೇರಿ ಪಂಚಾಯಿತಿಯ ನೌಕರರನ್ನ ಖಾಯಂಗೊಳಿಸಿಲ್ಲ ಎಂದು ಪೌರಕಾರ್ಮಿಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಒಟ್ಟಾರೆ, ಸರ್ಕಾರ ಹಾಗೂ ಪೌರಕಾರ್ಮಿಕರ ಮುಸುಕಿನ ಗುದ್ದಾಟದಿಂದ ಪ್ರವಾಸಿಗರು ಹಾಗೂ ಸ್ಥಳಿಯರು ಹೈರಾಣಾಗಿದ್ದಾರೆ. ಒಂದು ವಾರದಿಂದ ಕಸ ಇಡೀ ನಗರದಾದ್ಯಂತ ಒಂದೇ ಕಡೆ ಬಿದ್ದಿದೆ ಅಂದ್ರೆ ಕೊಳೆತು ದುರ್ನಾತ, ದುರ್ವಾಸನೆ ಬೀರುತ್ತಿದೆ. ಆದ್ರೆ, ಪೌರಕಾರ್ಮಿಕರು ಕಸ ತೆಗೆಯಲು ಮುಂದಾಗುತ್ತಿಲ್ಲ. ಸರ್ಕಾರ ಕೂಡ ಖಾಯಂ ಬಗ್ಗೆ ಮಾತನಾಡುತ್ತಿಲ್ಲ. ದಿನದಿಂದ ದಿನಕ್ಕೆ ಕಸದ ರಾಶಿ ಹೆಚ್ಚುತ್ತಲೇ ಇದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಶೃಂಗೇರಿ ಪಟ್ಟಣದಲ್ಲಿ ಸಾಂಕ್ರಾಮಿಕ ರೋಡ ಹರಡುದ್ರು ಆಶ್ಚರ್ಯಪಡಬೇಕಿಲ್ಲ. ಅಷ್ಟರಲ್ಲಿ ಸರ್ಕಾರ ಒಂದು ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ.

click me!