Postal Department ATM : ಚಿಕ್ಕಬಳ್ಳಾಪುರದ ಏಕೈಕ ಅಂಚೆ ಎಟಿಎಂ ಕೇಂದ್ರಕ್ಕೆ ಬೀಗ

By Kannadaprabha News  |  First Published Dec 21, 2021, 6:37 PM IST
  • ಚಿಕ್ಕಬಳ್ಳಾಪುರದ  ಏಕೈಕ ಅಂಚೆ ಎಟಿಎಂ ಕೇಂದ್ರಕ್ಕೆ ಬೀಗ
  •  ಅಂಚೆ ಅಧಿಕಾರಿಗಳ ನಿರ್ಲಕ್ಷ್ಯ - ನಿರ್ವಹಣೆ ಕೊರತೆಯಿಂದ ಗ್ರಾಹಕರಿಗೆ ತೊಂದರೆ

 ಚಿಕ್ಕಬಳ್ಳಾಪುರ (ಡಿ.21):   ನಗರದಲ್ಲಿದ್ದ ಏಕೈಕ ಭಾರತೀಯ ಅಂಚೆ ಇಲಾಖೆಯ (Postal Department) ಎಟಿಎಂ (ATM) ಕೇಂದ್ರ ಗ್ರಾಹಕರ ಪಾಲಿಗೆ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದ್ದು, ಎಟಿಎಂ ಕೇಂದ್ರ ಸೂಕ್ತ ನಿರ್ವಹಣೆ ಕೊರತೆಯಿಂದ ಬೀಗ ಜಡಿಯಲಾಗಿದೆ.  ನಗರದ ಬಿಬಿ ರಸ್ತೆಯ ಪ್ರಧಾನ ಅಂಚೆ ಕಚೇರಿ ಮುಂದೆಯೆ ಹಲವು ಸುಮಾರು ನಾಲ್ಕೈದು ವರ್ಷಗಳ ಹಿಂದೆಯೆ ಭಾರತೀಯ ಅಂಚೆ ಇಲಾಖೆ ತನ್ನ ಗ್ರಾಹಕರಿಗೆ ಬೆರಳ ತುದಿಯಲ್ಲಿ ಸೇವೆ ಸಲ್ಲಿಸಬೇಕೆಂಬ  ದೃಷ್ಟಿಯಿಂದ ಎಲ್ಲಾ ಸೇವೆಗಳನ್ನು ಆನ್‌ಲೈನ್‌ಗೊಳಿಸುತ್ತಾ (Online) ಮಹತ್ವದ ಹೆಜ್ಜೆ ಇಟ್ಟು ಇಡೀ ಜಿಲ್ಲೆಗೆ ಏಕೈಕ ಎಟಿಎಂ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿತ್ತು.

ನಿರ್ವಹಣೆಯ ಕೊರತೆ:

Tap to resize

Latest Videos

ಆದರೆ ಅಂಚೆ ಇಲಾಖೆ ಎಟಿಎಂ (ATM) ಕೇಂದ್ರ ಮಾತ್ರ ಸೂಕ್ತ ನಿರ್ವಹಣೆ ಕೊರತೆಯಿಂದ ಕಳೆದ ಎರಡು ವಾರಗಳಿಂದ ಬಾಗಿಲು ಮುಚ್ಚಿದ್ದು ಅಂಚೆ ಇಲಾಖೆ ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳಿದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಮಾದರಿಯಲ್ಲಿ ಅಂಚೆ ಇಲಾಖೆ ತನ್ನ ಗ್ರಾಹಕರಿಗೆ ಎಟಿಎಂ ಕೇಂದ್ರ ಸ್ಥಾಪಿಸಿದ್ದು ಜಿಲ್ಲೆಯ ಅಂಚೆ ಇಲಾಖೆಗೆ ಹೆಗ್ಗಳಿಕೆಯಾದರೂ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಲ್ಲಿ ಸ್ಥಳಿಯ ಅಂಚೆ ಇಲಾಖೆ ಅಧಿಕಾರಿಗಳು ವಿಫಲವಾಗಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅಂಚೆ ಇಲಾಖೆ ಇಂದಿಗೂ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಹೆಚ್ಚು ಮಹತ್ವ ಕೊಟ್ಟಿದೆ. ಆ ಕಾರಣಕ್ಕಾಗಿಯೆ ವಯೋವೃದ್ಧರು, ಹಿರಿಯ ನಾಗರಿಕರು, ಸರ್ಕಾರಿ ನೌಕರರು (Govt employees), ಮಹಿಳೆಯರು ಉಳಿತಾಯ ಠೇವಣಿ ಸೇರಿದಂತೆ ವಿವಿಧ ಖಾತೆಗಳನ್ನು ಅಂಚೆ ಇಲಾಖೆಯಲ್ಲಿ ಮಾಡಿಸಿ ತಮ್ಮ ವ್ಯವಹಾರ ಮುಂದುವರೆಸಿದ್ದಾರೆ. ಅಂಚೆ ಇಲಾಖೆ ಕೂಡ ತನ್ನ ಗ್ರಾಹಕರಿಗೆ  ಸದಾ ಹಣ (Money) ಒದಗಿಸುವಂತೆ ಮಹತ್ವಕಾಂಕ್ಷೆ ಹೊತ್ತು ಅಂಚೆ ಕಚೇರಿ ಮುಂದೆಯೆ ಎಟಿಎಂ ಕೇಂದ್ರ ಸ್ಥಾಪಿಸಿದೆ. ಆದರೆ ಅದು ಈಗ ಗ್ರಾಹಕರಿಗೆ ಸೂಕ್ತ ಸೇವೆ ನೀಡಲಾಗದೇ ಸದಾ ಬೀಗ ಹಾಕಲಾಗಿದೆ. ಎಟಿಎಂಯನ್ನ ನಂಬಿಯೆ ಕಾರ್ಡ್‌ ಪಡೆದಿರುವ ಗ್ರಾಹಕರು ಅನ್ಯ ಬ್ಯಾಂಕುಗಳ (Bank) ಎಟಿಎಂ ಕೇಂದ್ರಗಳಿಗೆ ಅಲೆದಾಡಬೇಕಿದ್ದು ಅನಿರ್ವಾಯವಾಗಿ ಪ್ರತಿ ಬಾರಿ ಹಣ ಡ್ರಾ ಮಾಡಲು ಸೇವಾ ಶುಲ್ಕ ಭರಿಸಬೇಕಾದ ಸ್ಥಿತಿ ನಿರ್ಮಾನವಾಗಿದೆ.

ಸಿಬ್ಬಂದಿಗೆ ಗೊತ್ತಿಲ್ಲವಂತೆ!

ವಿಪರ್ಯಾಸ ಅಂದರೆ ನಗರದಲ್ಲಿರುವ ಭಾರತೀಯ ಅಂಚೆ ಎಟಿಎಂ (Postal ATM) ಕೇಂದ್ರ ಹಲವು ದಿನಗಳಿಂದ ಬೀಗ ಹಾಕಿರುವ ಬಗ್ಗೆ ಕನ್ನಡಪ್ರಭ ಅಂಚೆ ಕಚೇರಿಯ ಅಧಿಕಾರಿ, ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಹೌದಾ ಬೀಗ ಹಾಕಲಾಗಿದೆಯಾ ಎಂದು ಮರು ಪ್ರಶ್ನಿಸಿದರು. ಅಂದಹಾಗೆ ಎಟಿಎಂ ಕೇಂದ್ರಕ್ಕೆ ಬೀಗ ಹಾಕಿರುವುದು ಅಂಚೆ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲವಂತೆ, ಇನ್ನೂ ಎಟಿಎಂ ಕೇಂದ್ರವನ್ನು ನಿರ್ವಹಿಸುತ್ತಿರುವವರು ಯ್ಯಾರು, ಏಕೆ ಬೀಗ ಹಾಕಲಾಗಿದೆ, ಇರುವ ಏಕೈಕ ಅಂಚೆ ಎಟಿಎಂ  ಕೇಂದ್ರ ಶಾಶ್ವತವಾಗಿ ಬಾಗಿಲು ಮುಚ್ಚುತ್ತಾರಾ ಅಥವ ಏನಾದರೂ ತಾಂತ್ರಿಕ ದೋಷದಿಂದ (Technical Issue ) ಬಾಗಿಲು ಮುಚ್ಚಿದ್ದರಾ, ದುರಸ್ತಿ ನಡೆಯುತ್ತಾ ಇಲ್ಲ ಎಂಬ ಪ್ರಶ್ನೆಗಳಿಗೆ ಸಿಬ್ಬಂದಿ ಬಳಿ ಉತ್ತರವಿಲ್ಲ.

  • ಏಕೈಕ ಅಂಚೆ ಎಟಿಎಂ ಕೇಂದ್ರಕ್ಕೆ ಬೀಗ
  •  ಅಂಚೆ ಅಧಿಕಾರಿಗಳ ನಿರ್ಲಕ್ಷ್ಯ - ನಿರ್ವಹಣೆ ಕೊರತೆಯಿಂದ ಗ್ರಾಹಕರಿಗೆ ತೊಂದರೆ
  •  ಸೂಕ್ತ ನಿರ್ವಹಣೆ ಕೊರತೆಯಿಂದ ಕಳೆದ ಎರಡು ವಾರಗಳಿಂದ ಬಾಗಿಲು ಮುಚ್ಚಿದ ಕೇಂದ್ರ
  •   ಸೂಕ್ತ ರೀತಿಯಲ್ಲಿ ನಿರ್ವಹಿಸುವಲ್ಲಿ ಸ್ಥಳಿಯ ಅಂಚೆ ಇಲಾಖೆ ಅಧಿಕಾರಿಗಳು ವಿಫಲ
  • ಅಧಿಕಾರಿಗಳು ವಿಫಲವಾಗಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣ
  • ಈಗ ಗ್ರಾಹಕರಿಗೆ ಸೂಕ್ತ ಸೇವೆ ನೀಡಲಾಗದೇ ಸದಾ ಬೀಗ ಹಾಕಲಾಗಿದ ಎಟಿಎಂ
click me!