ಕಳಪೆ ರಸ್ತೆ ಕಾಮಗಾರಿ: ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

By Ravi Janekal  |  First Published Feb 23, 2023, 2:42 PM IST

ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿದೆ ಎಂದು ಆರೋಪಿಸಿ ಸೊಂಡೇಹಾಳ ಗ್ರಾಮಸ್ಥರು ರಸ್ತೆ ಕಾಮಗಾರಿಯನ್ನು ಸ್ಥಗಿತ ಮಾಡಿರೋ ಘಟನೆ ನಡೆದಿದೆ 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.23) : ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿದೆ ಎಂದು ಆರೋಪಿಸಿ ಸೊಂಡೇಹಾಳ ಗ್ರಾಮಸ್ಥರು ರಸ್ತೆ ಕಾಮಗಾರಿಯನ್ನು ಸ್ಥಗಿತ ಮಾಡಿರೋ ಘಟನೆ ನಡೆದಿದೆ 

Latest Videos

undefined

ಕಾಂಟ್ರ್ಯಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರೋ ಗ್ರಾಮಸ್ಥರು ಗುಣಮಟ್ಟದ ರಸ್ತೆ ಕಾಮಗಾರಿ ನಡೆಸೋದಾದ್ರೆ ಮಾಡಿ ಇಲ್ಲದಿದ್ರೆ ಇಲ್ಲಿಗೇ ನಿಲ್ಲಿಸಿ ಎಂದು ಎಚ್ಚರಿಸಿದ್ದಾರೆ. 

ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ. ಕಳಪೆ ಗುಣಮಟ್ಟದ(Poor quality) ಆರೋಪ ಹಿನ್ನೆಲೆ ಪಿಕಾಸಿ, ಸಲಾಕೆ ಹಿಡಿದು ರಸ್ತೆ ಪರೀಕ್ಷೆ ಮಾಡುತ್ತಿರುವ ಗ್ರಾಮಸ್ಥರು. ರಸ್ತೆ ಕಾಮಗಾರಿ ಬಂದ್ ಮಾಡಿಸಿ ಆಕ್ರೋಶ ಹೊರಹಾಕುತ್ತಿರುವ ಜನತೆ. ಈ ದೃಶ್ಯಗಳು ಕಂಡುಬಂದಿದ್ದು, ಚಿತ್ರದುರ್ಗ ತಾಲೂಕಿನ ಗೊಡಬನಾಳ ಗ್ರಾಮ(Godabanal)ದಲ್ಲಿ.

 ಆಹಾ! ಎಂಥ ಅಭಿವೃದ್ಧಿನಪ್ಪ ಇದು! ನಿರ್ಮಾಣ ಮಾಡಿ ತಿಂಗಳೊಳಗೆ ಕಿತ್ತುಹೋದ ರಸ್ತೆ

ಗೊಡಬನಾಳ ಹಾಗೂ ಸೊಂಡೇಕೊಳ ಗ್ರಾಮಗಳ ಮಧ್ಯೆ ಸುಮಾರು 3 ಕೋಟಿ 17 ಲಕ್ಷ ರೂ ವೆಚ್ಚದಲ್ಲಿ ಪಿಎಂಜಿಎಸ್ ವೈ ಯೋಜನೆ(PMGSY Scheme)ಯಡಿ 8 ಕಿಮಿ ರಸ್ತೆ ಕಾಮಗಾರಿ ನಡೀತಿದೆ.  ರಶ್ಮೀ ಕನ್‌ಸ್ಟ್ರಕ್ಷನ್ ಕಂಪನಿ(Rashmi Construction Company)ಯಿಂದ  ರಸ್ತೆ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರರು ಕಳಪೆ ಕಾಮಗಾರಿ(Poor work) ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಖುದ್ದು ಗ್ರಾಮಸ್ಥರೇ ಮುಂದಾಗಿ ರಸ್ತೆ ಪರೀಕ್ಷೆ‌ ನಡೆಸಿದ್ದಾರೆ. ಈ ವೇಳೆ ಅಳತೆ ಪ್ರಕಾರ 35ಕೆಜಿಯಷ್ಟು ಬರಬೇಕಿದ್ದ ಜಲ್ಲಿ ಕಲ್ಲಿನ ತೂಕ 24 kg ಯಿಂದ 29 kg ವರೆಗೆ ಬಂದಿದೆ. 

ಈ ಕಾಮಗಾರಿ ಟೆಂಡರ್  ಪಡೆದ ಗುತ್ತಿಗೆದಾರರೇ ಬೇರೆ, ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರೇ ಬೇರೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಕಾಮಗಾರಿಯನ್ನು ಬಂದ್ ಮಾಡಿಸಿ, ಗುತ್ತಿಗೆದಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

 ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರು ಸೈಟ್ ಇಂಜನೀಯರ್ ಚನ್ನೇಗೌಡ, ಕಾಮಗಾರಿಯನ್ನು  ಗುಣಮಟ್ಟ ಕಾಪಾಡಿಕೊಂಡೇ ಮಾಡಲಾಗುತ್ತದೆ. ಇಲ್ಲಿನ ಜನರು ಸಹಕಾರ ನೀಡುತ್ತಿಲ್ಲ. ಇನ್ನು ತೂಕದ ವಿಚಾರದಲ್ಲಿ ಇನ್ನೂ ಸರಿಯಾಗಿ ರಸ್ತೆ ಅಗೆದು ಜಲ್ಲಿ ತೂಕ ಮಾಡ್ಬೇಕು. ಆದ್ರೆ ಇಲ್ಲಿನ ಜನ ಸಹಕರಿಸುತ್ತಿಲ್ಲ. ಹಾಗಾಗಿ ಜಲ್ಲಿಕಲ್ಲಿನ ತೂಕ ಸರಿಯಾಗಿ ಬರ್ತಿಲ್ಲ. ಗ್ರಾಮಸ್ಥರ ಮಾತು ಕೇಳಿ ಕಾಮಗಾರಿಯನ್ನು ಅರ್ಧಕ್ಕೆ  ನಿಲ್ಲಿಸಲಾಗಲ್ಲ. ಆದ್ರೆ ಪಿಡಬ್ಲುಡಿ ಇಲಾಖೆಯ ಅಧಿಕಾರಿಗಳೇ ಬಂದು ಇದನ್ನು ಪರೀಕ್ಷೆ ಮಾಡ್ಲಿ . ಈ ವ್ಯಾಜ್ಯ ಬಗೆಹರಿಸಲಿ ಅಂದಿದ್ದಾರೆ. 

BIG 3: ಸುವರ್ಣ ನ್ಯೂಸ್ ಫಲಶ್ರುತಿ: ಕೊಪ್ಪಳ ಜಿಲ್ಲೆಯಲ್ಲಿ ಹೊಸ ಗುಣಮಟ್ಟದ ರಸ್ತೆ ನಿರ್ಮಾಣ

 ಈ ರಸ್ತೆ, ಸುತ್ತಮುತ್ತಲಿನ ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಣ್ತೆರೆದು ನೋಡಬೇಕು. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಕೊಡಬೇಕು ಸ್ಥಳೀಯರು ಆಗ್ರಹಿಸಿದ್ದಾರೆ.

click me!