ಮೂರು ವರ್ಷದ ಹಿಂದೆ ಇಳಿ ವಯಸ್ಸಿನ ತಂದೆಯನ್ನು ಕೊಲೆಗೈದ ಮಗನಿಗೆ ಜೀವಿತಾವಧಿ ಶಿಕ್ಷೆ ಮತ್ತು 10,000 ರೂ ದಂಡ ಹಾಗು ತಾಯಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಮೂರು ತಿಂಗಳ ಸಾದ ಜೈಲು ಶಿಕ್ಷೆ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ.
ಉಡುಪಿ (ಫೆ.23) : ಮೂರು ವರ್ಷದ ಹಿಂದೆ ಇಳಿ ವಯಸ್ಸಿನ ತಂದೆಯನ್ನು ಕೊಲೆಗೈದ ಮಗನಿಗೆ ಜೀವಿತಾವಧಿ ಶಿಕ್ಷೆ ಮತ್ತು 10,000 ರೂ ದಂಡ ಹಾಗು ತಾಯಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಮೂರು ತಿಂಗಳ ಸಾದ ಜೈಲು ಶಿಕ್ಷೆ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ.
ಪೆರಂಪಳ್ಳಿ ಭಂಡಾರ(Perampalli Bhandar) ಮನೆಯ ಪ್ರಜೋತ್ ಶೆಟ್ಟಿ(Prajoth shetty) (50) ಜೀವಿತಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.
undefined
ಅಶ್ಲೀಲ ಗೋಡೆಬರಹ ಬರೆದು ಶಿಕ್ಷಕಿಗೆ ಚಾರಿತ್ರ್ಯವಧೆ ಮಾಡಿದ್ದ ಸಹಶಿಕ್ಷಕ ನಿಸ್ಸಾರ ಅಹ್ಮದ್‌ಗೆ ಜೈಲೂಟ
ಪ್ರಕರಣ ವಿವರ:
2020 ನವೆಂಬರ್ 13 ರಂದು ಪೆರಂಪಳ್ಳಿ ಭಂಡಾರ ಮನೆಯಲ್ಲಿ ಮಹಾಬಲ ಶೆಟ್ಟಿ ಯಾನೆ ಮಾಬು ಶೆಟ್ಟಿ(84), ಪತ್ನಿ ಆಶಾಲತಾ ಶೆಟ್ಟಿ(76) ವಾಸವಿದ್ದಾಗ ಮಧ್ಯಾಹ್ನ 3 ಗಂಟೆಗೆ ಮಗ ಪ್ರಜೋತ್ ಮನೆಗೆ ಆಗಮಿಸಿ, ಮದ್ಯಪಾನ ಸೇವನೆಗೆ ಹಣ ನೀಡುವಂತೆ ಪೀಡಿಸಿ, ಆಸ್ತಿಯನ್ನು ಪಾಲು ಮಾಡುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದ ತಂದೆಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿದಾಗ, ತಪ್ಪಿಸಲು ಬಂದ ತಾಯಿಗೆ ಹೊಡೆದು, ತಂದೆಗೆ ಕತ್ತಿಯಿಂದ ಕಡಿದು ಪರಾರಿಯಾಗಿದ್ದನು.
ಆಸ್ಪತ್ರೆಯಲ್ಲಿ ನಿಧನ
ಮಗ ಕತ್ತಿಯಿಂದ ಕಡಿದಾಗ ಕಿರುಚಿದ ತಂದೆ, ತಾಯಿಯ ಧ್ವನಿಯನ್ನು ಕೇಳಿ ಸ್ಥಳೀಯ ಮರಳಿನ ಕೆಲಸದವರು ಆಗಮಿಸಿ, ಮಣಿಪಾಲ ಆಸ್ಪತ್ರೆ(Manipal hospital)ಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಹಾಬಲ ಶೆಟ್ಟಿ(Mahabala shetty)ಯವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವೆಚ್ಚ ಭರಿಸಲು ಸಾಧ್ಯವಾಗದೇ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ವರ್ಗಾವಣೆ ಪಡೆದಿದ್ದರು. 2020 ರ ನವೆಂಬರ್ 23 ರಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.
ಆರಂಭದಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ನಂತರದಲ್ಲಿ ಕೊಲೆ ಪ್ರಕರಣವೆಂದು ಬದಲಾಯಿಸಿಕೊಂಡು ತನಿಖೆ ನಡೆಸಲಾಗಿದೆ. ಮಹಾಬಲ ಶೆಟ್ಟಿಯವರ ಮಗಳು ಪ್ರತಿಭಾ ಶೆಟ್ಟಿಯವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಮಣಿಪಾಲದ ಪೋಲಿಸ್ ನಿರೀಕ್ಷಕ ಮಂಜುನಾಥ್ ಎಮ್ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, 35 ಸಾಕ್ಷಿಗಳಲ್ಲಿ 25 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದ್ದಾರೆ.
ಕಣ್ಣ ಮುಂದೆಯೇ ಪತಿಯ ಸಾವು.. ನ್ಯಾಯಕ್ಕಾಗಿ ಮುಂದುವರೆದ ಹೋರಾಟ
ಬಾಂಬೆಯಲ್ಲಿ ವಾಸವಿದ್ದ ಪ್ರಜೋತ್ ಶೆಟ್ಟಿ ಕರೋನಾ ಸಮಯದಲ್ಲಿ ಊರಿಗೆ ಆಗಮಿಸಿ, ಪೆರಂಪಳ್ಳಿ ಮನೆಯಲ್ಲಿ ತಂದೆ ತಾಯಿಯೊಂದಿಗೆ ವಾಸವಿದ್ದರು. ಈ ಹಿಂದೆ ಕುಡಿತಕ್ಕೆ ತಂದೆಯೊಂದಿಗೆ ಹಣ ನೀಡುವಂತೆ ಪೀಡಿಸಿ, ಹಲ್ಲೆಗೈದಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತಲ್ಲದೇ, ತಹಶೀಲ್ದಾರ್ ಸಮ್ಮುಖದಲ್ಲಿ ಸೆಕ್ಷನ್ 107 ರ ಅಡಿಯಲ್ಲಿ ವಿಚಾರಣೆಯೂ ನಡೆದಿತ್ತು.