ಮಂಡ್ಯ: ಉಪಹಾರ ತ್ಯಜಿಸಿದ ಕೊರೋನಾ ಸೋಂಕಿತರು

Suvarna News   | Asianet News
Published : Aug 19, 2020, 12:49 PM ISTUpdated : Aug 19, 2020, 02:11 PM IST
ಮಂಡ್ಯ: ಉಪಹಾರ ತ್ಯಜಿಸಿದ ಕೊರೋನಾ ಸೋಂಕಿತರು

ಸಾರಾಂಶ

ಕೋವಿಡ್ ಸೆಂಟರ್‌ನಲ್ಲಿರುವ ರೋಗಿಗಳು ಅನ್ನ ಆಹಾರವನ್ನು ತ್ಯಜಿಸಿ ಕುಳಿತಿದ್ದಾರೆ. ಇದಕ್ಕೆ ಕಾರಣ ಈ ಸೆಂಟರ್ ನ ಅವ್ಯವಸ್ಥೆಯಾಗಿದೆ.

ಪಾಂಡವಪುರ (ಆ.19):  ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯ ಕೋವಿಡ್‌ ಸೆಂಟರ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಕೊರೋನಾ ಸೋಂಕಿತರು ಬೆಳಗಿನ ಉಪಾಹಾರ ತ್ಯಜಿಸಿ   ಪ್ರತಿಭಟನೆ ನಡೆಸಿದರು.

ಕೋವಿಡ್‌ ಸೆಂಟರ್‌ನಲ್ಲಿ ರೋಗಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಮಧ್ಯಾಹ್ನದ ಸಾಂಬಾರನ್ನೇ ರಾತ್ರಿಗೂ ನೀಡುತ್ತಿದ್ದಾರೆ. ಆಹಾರದ ಗುಣಮಟ್ಟಉತ್ತಮವಾಗಿಲ್ಲ. ಬೆಳಗ್ಗೆ ನೀಡುವ ಕಾಫಿ ಕುಡಿಯುವುದಕ್ಕೇ ಆಗೋಲ್ಲ. ಕೈ ತೊಳೆಯಲು, ಸ್ನಾನ ಮಾಡಲು ಹಾಗೂ ಕುಡಿಯುವುದಕ್ಕೆ ಬಿಸಿನೀರು ನೀಡುತ್ತಿಲ್ಲ ಎಂದು ಕೊರೊನಾ ಸೋಂಕಿತರು ಅಳಲು ವ್ಯಕ್ತಪಡಿಸಿದರು.

ಆಯುರ್ವೇದಿಕ್‌ ನಂದಿನಿ ಹಾಲು: ಕೊರೋನಾ ವಿರುದ್ಧ 5 ರೀತಿಯ ಹಾಲಿನ ಉತ್ಪನ್ನ

ಕೋವಿಡ್‌ ಸೆಂಟರ್‌ನ ಯಾವೊಬ್ಬ ವೈದ್ಯರು ಕೂಡ ಸೋಂಕಿತರನ್ನು ಮುಟ್ಟಿಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳ ಹತ್ತಿರ ಬರುವುದಕ್ಕೂ ಭಯಪಡುತ್ತಿದ್ದಾರೆ. ಹೊರಗಡೆಯಿಂದ ಏನನ್ನೂ ತೆಗೆದುಕೊಂಡು ಬರಲು ಅವಕಾಶ ನೀಡುತ್ತಿಲ್ಲ. ಒಣಗಿದ ಚಪಾತಿ ಹಾಗೂ ಕೊಳೆತ ಬಾಳೆಹಣ್ಣು ನೀಡಲಾಗುತ್ತಿದೆ. ಹೀಗಾಗಿ ತಹಸೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್‌ ವಿಧಾನ

ಎಸಿ, ತಹಸೀಲ್ದಾರ್‌ ಭೇಟಿ:

ಕೊರೋನಾ ಸೋಂಕಿತರ ಪ್ರತಿಭಟನೆ ಬೆನ್ನಲ್ಲೇ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯ ಕೋವಿಡ್‌ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌ ಅವರು, ಕೊರೋನಾ ಸೋಂಕಿತರಿಗೆ ಗುಣಮಟ್ಟದ ಊಟ ನೀಡುವಂತೆ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

PREV
click me!

Recommended Stories

ಉಡುಪಿ ನೀರು ಸೇದುವಾಗ ಅಮ್ಮನ ಕೈತಪ್ಪಿ ಬಾವಿಗೆ ಬಿದ್ದ ಮಗು; ತಾಯಿ ಬಾವಿಗಿಳಿಯುವಷ್ಟರಲ್ಲಿ ಮಗು ಸಾವು!
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!