Tumakur : ಮಾಂಸದ ಅಂಗಡಿಗಳಿಂದ ಸಾರ್ವಜನಿಕರಿಗೆ ಕಿರಿ ಕಿರಿ

By Kannadaprabha News  |  First Published Nov 20, 2023, 7:29 AM IST

ನಗರದ ಚಿಕ್ಕ ಮಾರುಕಟ್ಟೆ ಬಳಿಯ ಪ್ರಧಾನ ಅಂಚೆ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕುರಿ-ಕೋಳಿ ಮಾಂಸ ಮಾರಾಟ ಮಾಡುವ ಖಾಸಗಿ ಅಂಗಡಿಗಳಿದ್ದು, ಅಂಚೆ ಕಚೇರಿಗೆ ಹೋಗಬೇಕಾದರೆ. ಈ ಮೂಲಕವೆ ಹಾದು ಹೋಗಬೇಕಾಗಿರುವುದರಿಂದ ಸಾರ್ವಜನಿಕ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಅಂಗಡಿ ಮಾಲೀಕರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


 ತಿಪಟೂರು :  ನಗರದ ಚಿಕ್ಕ ಮಾರುಕಟ್ಟೆ ಬಳಿಯ ಪ್ರಧಾನ ಅಂಚೆ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕುರಿ-ಕೋಳಿ ಮಾಂಸ ಮಾರಾಟ ಮಾಡುವ ಖಾಸಗಿ ಅಂಗಡಿಗಳಿದ್ದು, ಅಂಚೆ ಕಚೇರಿಗೆ ಹೋಗಬೇಕಾದರೆ. ಈ ಮೂಲಕವೆ ಹಾದು ಹೋಗಬೇಕಾಗಿರುವುದರಿಂದ ಸಾರ್ವಜನಿಕ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಅಂಗಡಿ ಮಾಲೀಕರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರದ ಪ್ರಧಾನ ಕಚೇರಿ ಹಾಗೂ ದೂರವಾಣಿ ಕಚೇರಿಗಳಿಗೆ ದಿನನಿತ್ಯ ಸಾವಿರಾರು ಗ್ರಾಹಕರು ಬಂದು ಹೋಗುವುದಲ್ಲದೆ, ಇದೇ ರಸ್ತೆಯಲ್ಲಿ ತರಕಾರಿ ಮತ್ತಿತರೆ ಮಾರುಕಟ್ಟೆ ಸೇರಿದಂತೆ ಇತರೆಡೆಗೆ ಸಾರ್ವಜನಿಕರು ಓಡಾಡುತ್ತಾರೆ. ಕುರಿ-ಕೋಳಿ ಮಾರುವ ವ್ಯಾಪಾರಿಗಳು ಕಡಿದ ಮಾಂಸವನ್ನು ಬಹಿರಂಗವಾಗಿ ರಸ್ತೆ ಬದಿಗೆ ನೇತುಹಾಕಿಕೊಂಡು ರಸ್ತೆ, ಚರಂಡಿ ಬದಿಯನ್ನು ಗಲೀಜು ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ.

Tap to resize

Latest Videos

undefined

ಕೋಳಿ ಹಾಗೂ ಕುರಿ ಮಾಂಸ ತೊಳೆದ ತ್ಯಾಜ್ಯ ನೀರನ್ನು ರಸ್ತೆಗೆ ಎರಚುತ್ತಿದ್ದಾರೆ. ಇದರಿಂದ ಗಬ್ಬು ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಂಸದ ವಾಸನೆಗೆ ನಾಯಿಗಳ ಗುಂಪು ಬೀಡುಬಿಟ್ಟಿದ್ದು, ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಭೀತರಾಗಿದ್ದಾರೆ. ಈ ಬಗ್ಗೆ ಗ್ರಾಹಕರು, ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಅದ್ವಾನವಾಗಿರುವ ರಸ್ತೆ: ರಸ್ತೆಯು ಚಿಕ್ಕ ಮಾರುಕಟ್ಟೆ ವಿವಿಧ ಬಡವಾಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ, ಆದರೆ ರಸ್ತೆ ಸಂಪೂರ್ಣ ಗುಂಡಿಗೊಟರುಗಳಿಂದ ಕೂಡಿದ್ದು, ವಾಹನ ಸವಾರರು ಓಡಾಡಲು ತೀವ್ರ ಕಷ್ಟವಾಗಿದೆ. ಮಳೆ ಬಂದರೆ ಕೆಸರುಗದ್ದೆಯಾಗುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗಿದೆ. ರಸ್ತೆ ರಿಪೇರಿ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ಇಲ್ಲಿನ ನಿವಾಸಿಗಳು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.

ಈಗಲಾದರೂ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕವಾಗಿ ಬೀದಿಯ ಮಾಂಸ ಮಾರಾಟಗಾರರ ವಿರುದ್ದ ಕ್ರಮಕೈಗೊಂಡು ಅಂಚೆ ಹಾಗೂ ದೂರವಾಣಿ ಕಛೇರಿಗಳಿಗೆ ಬಂದು ಹೋಗುವ ಹಾಗೂ ಇಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಂಸದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಪಾಳು ಬಿದ್ದಿರುವ ಮಟನ್ ಮಾರುಕಟ್ಟೆ

ಮಾಂಸ ಮಾರಾಟ ಮಾಡುವುದಕ್ಕೆ ಚಿಕ್ಕ ಮಾರುಕಟ್ಟೆ ಬಳಿ ಲಕ್ಷಾಂತ ರು. ವೆಚ್ಚದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದರೂ, ಅವುಗಳನ್ನು ಸರಿಯಾಗಿ ನಿರ್ವಹಿಸದೆ ಪಾಳುಬಿದ್ದಿವೆ. ನಗರಸಭೆ ನಿರ್ಲಕ್ಷ್ಯದಿಂದ ಮಾಂಸ ಮಾರಾಟಕ್ಕೆ ಉಪಯೋಗವಾಗದೆ ಸರ್ಕಾರದ ಹಣ ಪೋಲಾಗುತ್ತಿದೆ. ಖಾಸಗಿ ಅಂಗಡಿ ನಡೆಸುವ ಮಾಂಸ ಮಾರಾಟಗಾರರು ಲಾಭದ ಆಸೆಗಾಗಿ ಮಟನ್ ಮಾರುಕಟ್ಟೆಯನ್ನು ಉಪಯೋಗಿಸಿಕೊಳ್ಳದೆ, ಈ ರಸ್ತೆಯಲ್ಲಿಯೆ ಅಂಗಡಿಗಳನ್ನು ನಡೆಸುತ್ತಿದ್ದು, ಸ್ವಚ್ಛತೆಗೆ ಆದ್ಯತೆ ನೀಡದೆ ನಿಯಮಗಳನ್ನು ಮೀರಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುವಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಜಾಣಕುರುಡು ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

click me!