ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಜನ್ಮದಿನ ಆಚರಿಸಿದ ಮುಖಂಡರು, ದೇಶಕ್ಕೆ ಇಂದಿರಾಗಾಂಧಿಯವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ತುಮಕೂರು : ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಜನ್ಮದಿನ ಆಚರಿಸಿದ ಮುಖಂಡರು, ದೇಶಕ್ಕೆ ಇಂದಿರಾಗಾಂಧಿಯವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಇದರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಯರನ್ನು ಜಿಲ್ಲಾ ಮಹಿಳಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಘಟಕಗಳ ಮುಖಂಡರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
undefined
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಡತನ ಹೆಚ್ಚಾಗಿದ್ದ ಸಂದರ್ಭದಲ್ಲಿ ಗರೀಬಿ ಹಠವೋ ಘೋಷಣೆಯೊಂದಿಗೆ 20 ಅಂಶಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಬಡವರ ಬದುಕಿಗೆ ನೆರವಾದರು. ಶಿಕ್ಷಣ, ಕೃಷಿ, ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿ ದೇಶದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾದರು ಎಂದರು.
ಬೇರೆ ದೇಶಗಳೇದುರು ಭಾರತ ಸಮವಾಗಿ, ಸಮರ್ಥವಾಗಿ ಬೆಳೆಯಲು ಇಂದಿರಾಜಿಯವರು ಅನುಷ್ಠಾನಕ್ಕೆ ತಂದ ಕಾರ್ಯಕ್ರಮಗಳು, ದಿಟ್ಟ ನಿರ್ಧಾರಗಳು ಕಾರಣ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನೆರವಾಗಿ, ಅಗತ್ಯ ಸೌಕರ್ಯ ಕಲ್ಪಿಸುವ ಮಹತ್ತರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಮಹಿಳೆಯರು ದುರ್ಬಲವರ್ಗದವರ ಧ್ವನಿಯಾಗಿ ಶಕ್ತಿ ತುಂಬಿದರು ಎಂದು ಹೇಳಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ, ದೇಶವು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿ ಇಂದಿರಾ ಗಾಂಧಿಯವರು ತೆಗೆದುಕೊಂಡ ಕಠಿಣ ನಿರ್ಧಾರ, ಜನಪರ ಯೋಜನೆಗಳು ಮಾದರಿಯಾಗಿವೆ. ಬ್ಯಾಂಕುಗಳ ರಾಷ್ಟ್ರೀಕರಣ, ನೀರಾವರಿ, ಕೃಷಿ ಯೋಜನೆಗೆಳಿಗೆ ಆದ್ಯತೆ ನೀಡಿ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಬಡತನ ನಿರ್ಮೂಲನೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶದ ಬೆಳವಣಿಗೆಗೆ ಸಹಕಾರಿಯಾದರು ಎಂದು ಹೇಳಿದರು.
ಚಿಕ್ಕ ವಯಸ್ಸಿನಿಂದಲೇ ತಂದೆ ನೆಹರೂ ಅವರೊಂದಿಗೆ ಬೆರೆತು ರಾಜಕಾರಣ ಪ್ರವೇಶಿಸಿದ ಇಂದಿರಾಗಾಂಧಿಯವರು ದೇಶದ ಪ್ರಧಾನಿಯಾಗಿ ಸಮರ್ಥ ಆಡಳಿದ ನೀಡಿ ಜಗತ್ತು ಮೆಚ್ಚುವಂತಹ ನಾಯಕಿಯಾದರು. ಇವರ ಆಡಳಿತ, ತೆಗೆದುಕೊಂಡ ದಿಟ್ಟ ನಿರ್ಧಾರಗಳ ದೇಶದ ಬೆಳವಣಿಗೆಗೆ ಸಹಕಾರಿಯಾದವು. ಇಂದಿರಾ ಅವರು ಯಾವತ್ತೂ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಆದರ್ಶ, ಆಡಳಿತ ವೈಖರಿ, ದೃಢ ನಿರ್ಧಾರಗಳು ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ, ಇಂದಿರಾ ನಮನ ಕಾರ್ಯಕ್ರಮದ ಮೂಲಕ ಅವರ ಸೇವೆಯ ಸ್ಮರಣೆ ಜೊತೆಗೆ ಈಗಿನವರಿಗೆ ಅವರ ಆದರ್ಶಗಳು ಪ್ರೇರಣೆಯಾಗಬೇಕು. ಇಂದಿರಾಗಾಂಧಿಯವರು ಜಗತ್ತು ಕಂಡ ಧೀಮಂತ ನಾಯಕಿಎಂದು ಹೇಳಿದರು.
ನಗರಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ, ಆರ್.ರಾಮಕೃಷ್ಣ, ಮರಿಚೆನ್ನಮ್ಮ, ಮಂಜುನಾಥ್ ಮತ್ತಿತರರು ಮಾತನಾಡಿ ಇಂದಿರಾ ಅವರ ಸೇವೆ ಸ್ಮರಿಸಿದರು.
ಈ ವೇಳೆ ನಗರಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಕೃಷಿ ಪ್ರೋತ್ಸಾಹಕಿ ಶೈಲಜಾ ವಿಠ್ಠಲ್, ಜಿಲ್ಲಾ ಆಸ್ಪತ್ರೆ ನರ್ಸ್ ನಾಗರತ್ನ ಶೃಂಗೇರಿ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಷಣ್ಮುಖಪ್ಪ, ವೈ.ಎನ್.ನಾಗರಾಜು, ಸುಜಾತ, ಜಿಯಾಉಲ್ಲಾ, ವಾಲೆಚಂದ್ರಯ್ಯ, ತರುಣೇಶ್, ಎನ್.ಜೆ.ದೀಪಕ್ ಸೇರಿ ಹಲವರು ಮುಖಂಡರು ಭಾಗವಹಿಸಿದ್ದರು.