'ರಾಜಕಾರಣಿ ಭವಿಷ್ಯದ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ'

By Kannadaprabha News  |  First Published Nov 3, 2023, 8:10 AM IST

ರಾಜಕಾರಣ ಬರೀ ಚುನಾವಣೆಗೆ ಸೀಮಿತವಾಗಬಾರದು, ರಾಜಕಾರಣಿಯಾದವರು ಕಲೆ, ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜ ಪಟೇಲ ಅಭಿಪ್ರಾಯಪಟ್ಟರು.


  ತುಮಕೂರು : ರಾಜಕಾರಣ ಬರೀ ಚುನಾವಣೆಗೆ ಸೀಮಿತವಾಗಬಾರದು, ರಾಜಕಾರಣಿಯಾದವರು ಕಲೆ, ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜ ಪಟೇಲ ಅಭಿಪ್ರಾಯಪಟ್ಟರು.

ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ನೀನಾಸಂ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.

Tap to resize

Latest Videos

undefined

ಈಗಿನ ಚುನಾವಣೆಯನ್ನು ಕೇಂದ್ರೀಕರಿಸಿದೆ ಎಂದ ಅವರು ನಮ್ಮ ತಂದೆ ಜೆ.ಎಚ್. ಪಟೇಲ್ ಹಾಗೂ ರಾಮಕೃಷ್ಣ ಹೆಗಡೆ ಅವರು ೨೪ ಗಂಟೆ ಚುನಾವಣೆ ಬಗ್ಗೆ ಯೋಚಿಸುತ್ತಿರಲಿಲ್ಲ. ಬದಲಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಒಲವುಳ್ಳವರಾಗಿದ್ದರು ಎಂದ ಅವರು ರಾಜಕಾರಣಿಯಾದವನು ಸಾಮಾಜಿಕ ಕಳಕಳಿಯುಳ್ಳವನಾಗಿರಬೇಕು ಎಂದರು.

ನಮ್ಮ ತಂದೆ ಸಿಎಂ ಆಗಿದ್ದಾಗ ೨೦ ವರ್ಷ ಸಿನಿಮಾ ಬ್ಯಾನ್ ಮಾಡಬೇಕು. ಆಗ ಮಾತ್ರ ನಾಟಕ ಕಲೆ ಜೀವಂತವಾಗಿರುತ್ತದೆ ಎಂದಿದ್ದರು. ಆದರೆ ನಾಟಕ ಕಲೆ ಯಾವತ್ತೂ ಸಾಯುವುದಿಲ್ಲ. ಸಾವಿರಾರು ವರ್ಷಗಳಿಂದ ನಾಟಕ ಕಲೆ ಇದೆ. ಮುಂದೆ ಸಾವಿರಾರು ವರ್ಷ ನಾಟಕ ಕಲೆ ಜೀವಂತವಾಗಿರುತ್ತದೆ ಎಂದರು.

ತಾವು ಕೂಡ ತಮ್ಮೂರಿನಲ್ಲಿ ಬೆಪ್ಪು ತಕ್ಕಡಿ ಬೋಳೆಶಂಕರ ನಾಟಕ ಮಾಡಿಸಿದ್ದನ್ನು ಸ್ಮರಿಸಿದ ಅವರು ನಾಟಕ ಕಲೆಯನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸಬೇಕು ಎಂದರು.

ತುಮಕೂರಿನ ಝೆನ್ ಟೀಮ್ ನ ಉಗಮ ಶ್ರೀನಿವಾಸ್ ಕಳೆದ 20 ವರ್ಷಗಳಿಂದ ನಾಟಕ ಪ್ರದರ್ಶನಗಳನ್ನು ಆಯೋಜಿಸಿ ಮುಂದೆ ಸಮಾಜವನ್ನು ಹೇಗೆ ಕಟ್ಟಬೇಕು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ ಎಂದರು. ತುಮಕೂರು ಯಾವತ್ತೂ ನನ್ನೂರು ಎಂಬ ಭಾವನೆ ಬರುತ್ತದೆ. ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ನಾನು ಇಂಜಿನಿಯರ್ ಓದಿದ್ದು. ಆಗೆಲ್ಲಾ ನಾಟಕಗಳನ್ನು ನೋಡುತ್ತಿದೆ ಎಂದರು.

ನಾಟಕಗಳ ಮೂಲಕ ಜನರಿಗೆ ಅರಿವು ಮೂಡಿಸಬೇಕು, ಪ್ರೇರೇಪಿಸಬೇಕು, ಯಾವುದು ಒಳ್ಳೆಯ ಮಾರ್ಗ ಎಂಬುದನ್ನು ತೋರಿಸುವಂತಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಟೂಡಾ ಮಾಜಿ ಅಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಚಂದ್ರಶೇಖರ ಮಾತನಾಡಿ ಹೆಗ್ಗೋಡಿನ ನೀನಾಸಂ ಪ್ರತಿ ವರ್ಷ ಪರಿಣಾಮಕಾರಿ ನಾಟಕಗಳನ್ನು ಆಡಿಸುತ್ತಾ ಬಂದಿದೆ ಎಂದರು. ಸೀರಿಯಲ್ ಗಳ ಹಾವಳಿ ನಡುವೆಯೂ ಇಷ್ಟೊಂದು ಜನರು ನಾಟಕ ನೋಡಲು ಬಂದಿರುವುದು ಖುಷಿಯ ಸಂಗತಿ ಎಂದರು. ನೀನಾಸಂ ನಿಂದ ಕಲಿತು ಬಂದವರು ದೊಡ್ಡ ದೊಡ್ಡ ನಾಟಕ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆಯೇ ಸೀರಿಯಲ್, ಸಿನಿಮಾಗಳಲ್ಲೂ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಂ.ಆರ್. ಹುಲಿನಾಯ್ಕರ್ ಮಾತನಾಡಿ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳ ನಡುವೆ ವಿಭಿನ್ನ ನಾಟಕಗಳನ್ನು ತುಮಕೂರಿನ ಝೆನ್ ಟೀಮ್ ತೋರಿಸುತ್ತಿದೆ ಎಂದರು. ನೀನಾಸಂ, ರಂಗಾಯಣ, ರಾಷ್ಟ್ರೀಯ ನಾಟಕ ಶಾಲೆಗಳ ನಾಟಕಗಳನ್ನು ತುಮಕೂರಿನಲ್ಲಿ ಝೆನ್ ಟೀಮ್ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

೭೦ ರ ದಶಕದಲ್ಲಿ ಹೊಸ ಅಲೆಯ ಸಿನಿಮಾಗಳು ಬಂದ ಹಾಗೆ ಹೊಸ ಅಲೆಯ ನಾಟಕಗಳು, ನಾಟಕಕಾರರು ಪರಿವರ್ತನೆಯ ಸಮಾಜವನ್ನು ಕಟ್ಟಿದರು. ಈಗ ಅಂತದ್ದೇ ಒಂದು ಚಳವಳಿ ಸದ್ದಿಲ್ಲದೆ ಆರಂಭವಾಗುತ್ತಿದೆ ಎಂದರು. ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಹಾಗೂ ಝೆನ್ ಟೀಮ್ ನ ಉಗಮ ಶ್ರೀನಿವಾಸ್ ಇದ್ದರು. ಪಲ್ಲವಿ ನಾಗ ದ್ರ ನಿರೂಪಿಸಿದರು. ಬಳಿಕ ಆ ಲಯ ಈ ಲಯ ನಾಟಕ ಪ್ರದರ್ಶನಗೊಂಡಿತು.

click me!