ಬಹಿರಂಗ ಪ್ರಚಾರ ಕೊನೆ ದಿನ: ಕೆ.ಆರ್‌. ಪೇಟೆಯಲ್ಲಿ ಕಾಂಗ್ರೆಸ್ ಸಭೆ

By Suvarna News  |  First Published Dec 3, 2019, 11:08 AM IST

ಉಪಚುನಾವಣೆ ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು, ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತಬೇಟೆ ನಡೆಸಲು ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಜೆಡಿಎಸ್ ಪರವಾಗಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದು, ಕಾಂಗ್ರೆಸ್ ಬಹಿರಂಗ ಸಭೆಯನ್ನು ಆಯೋಜಿಸಿದೆ.


ಮಂಡ್ಯ(ಡಿ.03): ಉಪಚುನಾವಣೆ ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು, ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತಬೇಟೆ ನಡೆಸಲು ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಜೆಡಿಎಸ್ ಪರವಾಗಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದು, ಕಾಂಗ್ರೆಸ್ ಬಹಿರಂಗ ಸಭೆಯನ್ನು ಆಯೋಜಿಸಿದೆ.

ಕೆ. ಆರ್. ಪೇಟೆ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನವಾಗಿದ್ದು, ಮೂರು ಪಕ್ಷಗಳಿಂದ ಕಡೇ ಹಂತದ ಬಹಿರಂಗ ಪ್ರಚಾರ ನಡೆಯಲಿದೆ. ತಮ್ಮ-ತಮ್ಮ ಅಭ್ಯರ್ಥಿಗಳ ಪರ ಮೂರು ಪಕ್ಷದ ನಾಯಕರಿಂದ ಅಂತಿಮ ಹಂತದ ಮತಬೇಟೆ ನಡೆಯಲಿದ್ದು, ಜೆಡಿಎಸ್‌ ಅಭ್ಯರ್ಥಿ ಬಿ. ಎಲ್. ದೇವರಾಜು ಪರ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ.

Tap to resize

Latest Videos

ಮುಂಬೈ ದುಡ್ಡು, ಕಾಂಗ್ರೆಸ್‌ಗೆ ವೋಟು: ಸಿದ್ದರಾಮಯ್ಯ

ಮಧ್ಯಾಹ್ನ 12ಗಂಟೆಯಿಂದ ಬೂಕನಕೆರೆ-ಶೀಳನೆರೆ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ನಿಖಿಲ್ ರೋಡ್ ನಡೆಸಲಿದ್ದು, ಮಡುವಿನಕೋಡಿ,ವಿಠಲಾಪುರ,ಗಂಜಿಗೆರೆ,ಬಿಲ್ಲೆನಹಳ್ಳಿ,
ಬೂಕನಕೆರೆ,ಬಳ್ಳೇಕೆರೆ, ಮುರುಕನಹಳ್ಳಿ, ರಾಯಸಮುದ್ರ ಹಳ್ಳಿಯಲ್ಲೂ ಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಲಿದ್ದು, ಎರಡನೇ ಬಾರಿಗೆ ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಮತಪ್ರಚಾರ ಮಾಡಲಿದ್ದಾರೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ಕೆ. ಆರ್. ಪೇಟೆಯಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಆಯೋಜನೆ ಮಾಡಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರವಾಗಿ ವಿಜಯೇಂದ್ರ, ಡಿಸಿಎಂ ಅಶ್ವಥ್ ನಾರಾಯಣ, ಸಂಸದ ಶ್ರೀನಿವಾಸ್ ಪ್ರಸಾದ್ ಪ್ರಚಾರ ನಡೆಸಲಿದ್ದು, ಕೆ. ಆರ್. ಪೇಟೆ ಕ್ಷೇತ್ರದ ವಿವಿಧ ಕಡೆ ಬಿಎಸ್‌ವೈ ಪುತ್ರ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ. ವಿಜಯೇಂದ್ರಗೆ ಡಿಸಿಎಂ ಅಶ್ವಥ್ ನಾರಾಯಣ ಸಾಥ್ ಕೊಡಲಿದ್ದು, ಬೆಳಗ್ಗೆ 11ಗಂಟೆಗೆ ಕೆಆರ್ ಪೇಟೆಯಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ವಿದ್ಯಾರ್ಥಿ ವೇತನ: ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ

click me!