ಮುಂಬೈ ದುಡ್ಡು, ಕಾಂಗ್ರೆಸ್‌ಗೆ ವೋಟು: ಸಿದ್ದರಾಮಯ್ಯ

By Suvarna News  |  First Published Dec 3, 2019, 10:49 AM IST

ಮುಂಬೈ ದುಡ್ಡು, ಕಾಂಗ್ರೆಸ್‌ಗೆ ಓಟು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್‌.ಪಿ. ಮಂಜುನಾಥ್ ಪರ ಪ್ರಚಾರ ನಡೆಸಿ ಮಾತನಾಡಿದ್ದಾರೆ.


ಮೈಸೂರು(ಡಿ.03): ಮುಂಬೈ ದುಡ್ಡು, ಕಾಂಗ್ರೆಸ್‌ಗೆ ಓಟು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್‌.ಪಿ. ಮಂಜುನಾಥ್ ಪರ ಪ್ರಚಾರ ನಡೆಸಿ ಮಾತನಾಡಿದ್ದಾರೆ.

ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರು ಸಿಕ್ಕಾಪಟ್ಟೆ ದುಡ್ಡು ಕೊಟ್ಟಿದ್ದಾರೆ. ಇವರೆಲ್ಲ ಮತದಾರರಿಗೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಬೇಕಾದಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಆದರೆ ಜನ ದುಡ್ಡಿಗೆ ಕರಗುವುದಿಲ್ಲ. ಆದ್ದರಿಂದಲೇ ನಾನು ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ದುಡ್ಡು, ಕಾಂಗ್ರೆಸ್‌ಗೆ ವೋಟು ಅಂತ ಹೇಳಿದ್ದೇನೆ ಎಂದು ಹೇಳಿದ್ದಾರೆ.

Tap to resize

Latest Videos

‘ ಸಿದ್ದರಾಮಯ್ಯ ಒಬ್ಬ ಹುಚ್ಚ, ಮುಖ್ಯಮಂತ್ರಿ ಹುಚ್ಚಿನಿಂದ ಹೊರ ಬಂದಿಲ್ಲ’

ಪ್ರಚಾರದ ಕೊನೆಯ ದಿನಕ್ಕೆ ತಲುಪಿದ್ದೇವೆ. ಎಷ್ಟು ಕ್ಷೇತ್ರ ಗೆಲ್ಲುತ್ತೇವೆ ಎನ್ನುವುದು ಪ್ರಶ್ನೆಯೇ ಅಲ್ಲ. ಎಲ್ಲ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್‌ ವೈಟ್ ವಾಷ್ ಮಾಡುತ್ತಾರೆ ಎಂಬ ಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಸದ ವಿ. ಶ್ರೀನಿವಾಸ ಪ್ರಸಾದ್‌ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಶ್ರೀನಿವಾಸ್ ಪ್ರಸಾದ್‌ಗೆ ಇನ್ನೂ ಬುದ್ದಿ ಬಂದಿಲ್ಲ. ನಂಜನಗೂಡು ಉಪಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದು ಯಾರು..? ಬಿಜೆಪಿಯಿಂದ ಸ್ಪರ್ಧೆ ಮಾಡಿ ನಂಜನಗೂಡಿನಲ್ಲಿ ಸೋತರು. ಅವರ ಎಲ್ಲ ಹೇಳಿಕೆಗಳಿಗೂ ಉತ್ತರ ಕೊಡುವುದಕ್ಕೆ ಆಗಲ್ಲ ಎಂದಿದ್ದಾರೆ.

'ಸಿದ್ದು ಕಾಂಗ್ರೆಸ್‌ಗೆ ವೈಟ್‌ವಾಶ್ ಮಾಡಿ ಮನೆಗೆ ಹೋಗ್ತಾರೆ'..!

click me!