ತಾಳಿ ಕಟ್ಟೋ ಶಾಸ್ತ್ರ ಮುಗಿದ ಮೇಲೆ ಮೇಲೆ ಅಪ್ರಾಪ್ತೆ ಮದುವೆಗೆ ತಡೆದ್ರು

By Suvarna News  |  First Published Dec 9, 2019, 10:06 AM IST

ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ತಂತರ ಪೊಲೀಸರು ತೆರಳಿ ಮದುವೆ ನಿಲ್ಲಿಸಿದ ಘಟನೆ ನಡೆದಿದೆ.


ಹಾಸನ[ಡಿ.09]:  ಅಪ್ರಾಪ್ತೆ ಬಾಲಕಿಗೆ ತಾಳಿ ಕಟ್ಟಿದ ಮೇಲೆ ಮಹಿಳಾ ಕಲ್ಯಾಣ ಇಲಾಖೆಯವರು ಪೊಲೀಸ್‌ ಸಹಕಾರದಲ್ಲಿ ಆಗಮಿಸಿ ಮದುವೆ ನಿಲ್ಲಿಸಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.

ನಗರದ ಸಾಲಗಾಮೆ ರಸ್ತೆ, ರಿಂಗ್‌ ರಸ್ತೆಯ ನಾಗೇಶ್‌ ವೃತ್ತದ ಬಳಿ ಇರುವ ಪುಟ್ಟಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯು ಅಪ್ರಾಪ್ತ ಬಾಲಕಿ ಎಂಬ ದೂರವಾಣಿ ಕರೆಯ ದೂರಿನ ಅನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪಾಪಾಭೋವಿ ನೇತೃತ್ವದಲ್ಲಿ ಪೊಲೀಸ್‌ ಸಹಕಾರದಲ್ಲಿ ಸ್ಥಳಕ್ಕೆ ಬಂದರು.

Latest Videos

undefined

ಆಗ ಅಷ್ಟುಹೊತ್ತಿಗೆ ಹೆಣ್ಣಿಗೆ ಹುಡುಗ ತಾಳಿ ಕಟ್ಟಿದ್ದ. ನಂತರ ಇದನ್ನು ಪ್ರಶ್ನಿಸಿದ ಅಧಿಕಾರಿಗಳು ಹುಡುಗಿ ಕುತ್ತಿಗೆಯಲ್ಲಿದ್ದ ತಾಳಿಯನ್ನು ತೆಗೆಯಲು ಸೂಚಿಸಿದರು. ನಂತರ ನಗರದ ಪೆನ್‌ಷನ್‌ ಮೊಹಾಲ್ಲಾ ಪೊಲೀಸ್‌ ಠಾಣೆಗೆ ಹುಡುಗನ ಮತ್ತು ಹುಡುಗಿಯ ಕಡೆ ಪೋಷಕರನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ವಾಪಸ್‌ ಕಳುಹಿಸಲಾಗಿದೆ.

ಅಪ್ರಾಪ್ತ ಬಾಲಕಿ ಊರು ಬನವಾಸೆಯಾದರೇ, ಹುಡುಗ ಹಾಸನದವನು. ಪೋಷಕರು ಮಗಳಿಗೆ 18 ವರ್ಷ ತುಂಬಿದೆ ಎಂದು ಆಧಾರ್‌ ಕಾರ್ಡ್‌ ಅನ್ನು ಅಧಿಕಾರಿಗಳಿಗೆ ಪ್ರದರ್ಶಿಸಿದರು. ಇದಕ್ಕೆ ಒಪ್ಪದ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ಮಾಕ್ಸ್‌ ಕಾರ್ಡ್‌ನಲ್ಲಿರುವ ಹುಟ್ಟಿದ ದಿನಾಂಕ ಹಾಜರು ಪಡಿಸಲು ಸೂಚಿಸಿದರು.

ಮದ್ಯಪಾನ ಮಾಡಿ ಜೀವ ಉಳಿಸಿ; ಹಾಸನ ಪೊಲೀಸ್ರಿಗೆ ತಪ್ಪು ಬ್ಯಾರಿಕೇಡ್ ಸಂಕಷ್ಠ!.

ಸಾಕ್ಷಿ ಕೊಡಲು ಹುಡುಗಿ ತಂದೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆಯನ್ನು ಅಲ್ಲಿಗೆ ಸ್ಥಗಿತಗೊಳಿಸಿ ಮುಂದುವರಿಯದಂತೆ ಎಚ್ಚರಿಕೆ ಕೊಡಲಾಯಿತು. ಮದುವೆಗೆಂದು ಬಂದಿದ್ದವರು ಏನು ಸುಮ್ಮನೆ ಹೋಗಲಿಲ್ಲ. ತಯಾರಿಸಿದ್ದ ರುಚಿಕರವಾದ ಅಡುಗೆಯನ್ನು ಸೇವಿಸಿ ಹೊರ ನಡೆದಿದ್ದಾರೆ.

ರಾತ್ರಿಯಲ್ಲ ಶಾಸ್ತ್ರ ನಡೆದು ಬೆಳಗ್ಗೆ ಸಂಭ್ರಮದಲ್ಲಿದ್ದ ಮದುವೆ ಮನೆ ಮಧ್ಯಾಹ್ನದ ವೇಳೆಗೆ ನಿಶ್ಯಬ್ದವಾಗದಿತ್ತು. ಮದುವೆಯಾದ ಮೇಲೆ ಮದುವೆ ನಿಲ್ಲಿಸಲಾಗಿದೆ ಎಂದು ಹೇಳಲಾಗಿದ್ದು, ಮದುವೆ ಮುಗಿಯಿತಲ್ಲ ಎಂದು ಹುಡುಗ ಮತ್ತು ಹುಡುಗಿಯ ಮನೆಯವರು ನಿಟ್ಟುಸಿರು ಬಿಟ್ಟಂತಾಗಿದೆ.

click me!