ಚಿತ್ರದುರ್ಗ: ಪೇದೆಗೆ ಅಂಟಿದ ಮಹಾಮಾರಿ ಕೊರೋನಾ, ಪೊಲೀಸ್ ಠಾಣೆ ಸೀಲ್‌ಡೌನ್‌

Suvarna News   | Asianet News
Published : Jul 11, 2020, 12:11 PM IST
ಚಿತ್ರದುರ್ಗ: ಪೇದೆಗೆ ಅಂಟಿದ ಮಹಾಮಾರಿ ಕೊರೋನಾ, ಪೊಲೀಸ್ ಠಾಣೆ ಸೀಲ್‌ಡೌನ್‌

ಸಾರಾಂಶ

ಹೊಸದುರ್ಗ ಠಾಣೆಯ ಪಿಎಸ್‌ಐ, ಸಿಪಿಐ ಸೇರಿ 40 ಜನ ಪೊಲೀಸರು ಹೋಂ ಕ್ವಾರಂಟೈನ್‌| ಶ್ರೀರಾಂಪುರ ಗ್ರಾಮದಲ್ಲಿನ ಪೊಲೀಸ್‌ ಠಾಣೆ ಸೀಲ್‌ಡೌನ್| ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಗ್ರಾಮ|

ಚಿತ್ರದುರ್ಗ(ಜು.11): ಪೊಲೀಸ್‌ ಪೇದೆಗೊಬ್ಬರಿಗೆ ಮಹಾಮಾರಿ ಕೊರೋನಾ ವೈರಸ್‌ ವಕ್ಕರಿಸಿದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯನ್ನ ಸೀಲ್‌ಡೌನ್‌ ಮಾಡಿದ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 

ಮುಂಜಾಗ್ರತಾ ಕ್ರಮವಾಗಿ ಹೊಸದುರ್ಗ ಪಟ್ಟಣದ ಪೊಲೀಸ್ ಠಾಣೆಯನ್ನೂ ಕೂಡ ಸೀಲ್‌ಡೌನ್ ಮಾಡಲಾಗಿದೆ. ಇದರಿಂದ ಶ್ರೀರಾಂಪುರ ಗ್ರಾಮ ಹಾಗೂ ಹೊಸದುರ್ಗ ಪಟ್ಟಣದ ಜನರು ಭಯದಲ್ಲೇ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿತ್ರದುರ್ಗದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ಶ್ರೀರಾಂಪುರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಪಿಎಸ್ಐ ಸೇರಿ 40 ಜನ ಪೊಲೀಸ್ ಸಿಬ್ಬಂದಿಯನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲರ ಗಂಟಲು ಮಾದರಿ ದ್ರವ ತೆಗೆದು ಲ್ಯಾಬ್‌ಗೆ ಕಳುಹಿಸಲಾಗಿದೆ. 
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!