ಗಣರಾಜ್ಯೋತ್ಸವ ಹಿನ್ನಲೆ ಮಾಣಿಕ್ ಷಾ ಮೈದನಾದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಭದ್ರತೆ ಹಾಗೂ ಸುರಕ್ಷತೆಗಾಗಿ 100 ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ. ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನಿಯೋಜನೆ.
ಬೆಂಗಳೂರು(ಜ.24): ಜನವರಿ 26 ರ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ನಗರದ ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಪೋಲಿಸ್ ಕಮಿಷನರ್ ಪ್ರತಾಪ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಮಕ್ಕಳು ಹಾಗೂ ಪೋಲಿಸ್ ಸಿಬ್ಬಂದಿ, ಸ್ಕೌಟ್ಸ್, ಗೈಡ್, ಸೇವಾದಳ ಸೇರಿ ಹಲವು ತಂಡಗಳಿಂದ ಪೂರ್ವಭಾವಿ ತಯಾರಿ ನಡೆಸಲಾಗಿದೆ. ಗಣರಾಜ್ಯೋತ್ಸವ ಹಿನ್ನಲೆ ಮಾಣಿಕ್ ಷಾ ಮೈದನಾದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಭದ್ರತೆ ಹಾಗೂ ಸುರಕ್ಷತೆಗಾಗಿ 100 ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ. ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ಕೋವಿಡ್ ನಂತರ ಮಾಡುತ್ತಿರುವ ದೊಡ್ಡ ರಿಪಬ್ಲಿಕ್ ಡೇ ಕಾರ್ಯಕ್ರಮ ಇದಾಗಿದೆ. 26 ರಂದು ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದೆ. ಒಟ್ಟು 32 ತಂಡಗಳು ಕವಾಯತಿನಲ್ಲಿ ಭಾಗವಹಿಸಲಿದೆ. ತಮಿಳುನಾಡಿನ ಮಹಿಳಾ ಪೊಲೀಸ್ ತಂಡ ಕವಾಯತ್ತಿನಲ್ಲಿ ಭಾಗವಹಿಸಲಿದೆ. ಇದೇ ಮೊದಲ ಬಾರಿಗೆ ಬೇರೆ ರಾಜ್ಯದ ತಂಡವೊಂದು ಕವಾಯಿತ್ತಿನಲ್ಲಿ ಭಾಗವಹಿಸುತ್ತಿದೆ ಅಂತ ತಿಳಿಸಿದ್ದಾರೆ.
Republic Day : ಪಾಲಕರೇ…ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿಸಿ, ರಾಷ್ಟ್ರೀಯ ಹಬ್ಬದ ಮಹತ್ವ ತಿಳಿಸಿ
ಮೂರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನೀಡಲಿದ್ದಾರೆ. ಬಂದೋಬಸ್ತ್ ಹಾಗೂ ಕರ್ತವ್ಯಕ್ಕಾಗಿ ಬೆಂಗಳೂರು ನಗರದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನ ನಿಯೋಜನೆ ಮಾಡಲಾಗಿದೆ. ಒಟ್ಟು 12 ಡಿಸಿಪಿ, 12 ಎಸಿಪಿ, 65ಪಿಐ, 101 ಪಿಎಸ್ಐ ಹಾಗೂ 1005 ಪೊಲೀಸ್ ಪೇದೆಗಳು ನಿಯೋಜನೆ ಮಾಡಲಾಗಿದ್ದು 100 ಸಿಸಿಟಿವಿ ಕ್ಯಾಮರಾ ಹಾಗೂ 4 ಬ್ಯಾಗೇಜ್ ಸ್ಕ್ಯಾನರ್‌ಗಳನ್ನ ಅವಳಡಿಸಲಾಗಿದೆ ಅಂತ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.