ಸೂರ್ಯ ಗ್ರಹಣದ ಸಂದರ್ಭದಲ್ಲಿ ಅಂಗವಿಕಲ ಮಕ್ಕಳನ್ನು ಕುತ್ತಿಗೆ ವರೆಗೆ ಹೂಳುವ ಪೋಷಕರು| ಇದರಿಂದ ಅಂಗವೈಫಲ್ಯ ದೂರ ಆಗುತ್ತೆ ಎಂದು ನಂಬಿದ್ದ ಪೋಷಕರು| ಈ ಪದ್ಧತಿಯನ್ನ ನಿಷೇಧಿಸಿದ ಜಿಲ್ಲಾಡಳಿತ|
ಕಲಬುರಗಿ(ಜೂ.21): ಇಂದು ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ತಿಪ್ಪೆಗುಂಡಿಗಳಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅರೆ ಸೂರ್ಯಗ್ರಹಣಕ್ಕೂ ತಿಪ್ಪೆಗುಂಡಿಗೂ ಏನು ಸಂಬಂಧ ಅಂತ ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತರ.
ಪ್ರತಿ ಸೂರ್ಯಗ್ರಹಣದ ಸಂದರ್ಭದಲ್ಲಿ ಇಲ್ಲಿನ ಪೋಷಕರು ಅಂಗವಿಕಲ ಮಕ್ಕಳನ್ನು ಕುತ್ತಿಗೆವರೆಗೆ ತಿಪ್ಪೆಗುಂಡಿಯಲ್ಲಿ ಹೂಳುತ್ತಾರೆ. ಸೂರ್ಯಗ್ರಹಣದ ಸಂದರ್ಭದಲ್ಲಿ ಅಂಗವಿಕಲ ಮಕ್ಕಳನ್ನ ತಿಪ್ಪೆಗುಂಡಿಯಲ್ಲಿ ಹೂತು ತಗೆದರೆ ಅಂಗವೈಫಲ್ಯ ದೂರ ಆಗುತ್ತೆ ಎಂದು ಪೋಷಕರ ನಂಬಿಕೆಯಾಗಿದೆ.
ಸೂರ್ಯಗ್ರಹಣವನ್ನು ವೈಜ್ಞಾನಿಕವಾಗಿ, ವೈದಿಕವಾಗಿ ನೋಡುವುದು ಹೇಗೆ?
ಇದು ತೀವ್ರ ಟೀಕೆಗೊಳಗಾಗಿತ್ತು. ಹೀಗಾಗಿ ಈ ಪದ್ಧತಿಯನ್ನ ಜಿಲ್ಲಾಡಳಿತ ನಿಷೇಧಿಸಿದೆ. ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿಯ ಜೊತೆಗೆ ಈ ಬರಿ ತಿಪ್ಪೆಗಳ ಮೇಲೆ ಪೊಲೀಸ್ ಹದ್ದಿನ ಕಣ್ಣು ಇಟ್ಟಿದೆ. ಇಂದು ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ನಗರದ ತಾಜ್ ಸುಲ್ತಾನಪುರ್ ಬಳಿಯ ತಿಪ್ಪೆ ಗುಂಡಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.