Latest Videos

ಬೆಂಗಳೂರು: ಸಿದ್ದು ಪದಗ್ರಹಣಕ್ಕೆ ಪೊಲೀಸ್‌ ಸರ್ಪಗಾವಲು..!

By Kannadaprabha NewsFirst Published May 20, 2023, 5:21 AM IST
Highlights

ಭದ್ರತೆಗೆ ಸುಮಾರು 2 ಸಾವಿರ ಪೊಲೀಸರ ನಿಯೋಜನೆ, ಸುಗಮ ಸಂಚಾರಕ್ಕಾಗಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಾರ್ವಜನಿಕರಿಗೆ ಹಾಗೂ ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಸೂಚನೆಗಳು

ಬೆಂಗಳೂರು(ಮೇ.20): ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನೂತನ ನಡೆಯಲಿರುವ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮದಲ್ಲಿ ಅತಿಗಣ್ಯರು, ಗಣ್ಯರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣ ಸೇರಿದಂತೆ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ನಗರ ಪೊಲೀಸ್‌ ಆಯುಕ್ತರು, ಸಂಚಾರ ವಿಭಾಗದ ವಿಶೇಷ ಆಯುಕ್ತ, ಇಬ್ಬರು ಜಂಟಿ ಪೊಲೀಸ್‌ ಆಯುಕ್ತರು, ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಎಂಟು ಮಂದಿ ಡಿಸಿಪಿಗಳು, 15 ಮಂದಿ ಎಸಿಪಿಗಳು, 45ಕ್ಕೂ ಅಧಿಕ ಎನ್ಸ್‌ಪೆಕ್ಟರ್‌ಗಳು, 100ಕ್ಕೂ ಅಧಿಕ ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು ಎರಡು ಸಾವಿರ ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

Karnataka Government Formation: ಮಂಕಾಳ ವೈದ್ಯಗೆ ಸಚಿವ ಸ್ಥಾನ ನೀಡಲು ಆಗ್ರಹ

ಪದಗ್ರಹಣ ಕಾರ್ಯಕ್ರಮದ ಮುನ್ನಾ ದಿನವಾದ ಶುಕ್ರವಾರ ಬಾಂಬ್‌ ನಿಷ್ಕ್ರೀಯ ದಳ, ಶ್ವಾನದಳ ಸೇರಿದಂತೆ ಸಿಆರ್‌ಪಿಎಫ್‌ ತಂಡಗಳು ಕಂಠೀರವ ಕ್ರೀಡಾಂಗಣವನ್ನು ಇಂಚಿಚೂ ಪರಿಶೀಲಿಸಿವೆ. ಕ್ರೀಡಾಂಗಣದ ಬಳಿ ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕ್ರೀಡಾಂಗಣದ ಒಂದು ಗೇಟ್‌ ತಲಾ ಒಬ್ಬ ಎಸಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಪ್ರತಿ ಗೇಟ್‌ಗಳ ಬಳಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ವಿವಿಐಪಿಗಳಿಗೆ ಕ್ರೀಡಾಂಗಣದ ಎರಡು ಪ್ರತ್ಯೇಕ ಗೇಟ್‌ಗಳಲ್ಲಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಗೇಟ್‌ಗಳ ಬಳಿ ಹೆಚ್ಚಿನ ಪೊಲೀಸ್‌ ಬಂದೋ ಬಸ್ತ್‌ ಏರ್ಪಡಿಸಲಾಗಿದೆ. ಅದರಂತೆ ಕ್ರೀಡಾಂಗಣದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸಿ ನಿಗಾವಹಿಸಲಾಗಿದೆ. ಇಡೀ ಕಾರ್ಯಕ್ರಮ ಪೊಲೀಸ್‌ ಸರ್ಪಗಾವಲಿನಲ್ಲಿ ಜರುಗಲಿದೆ.

* ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾಂಭ ಇರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲ ತಾತ್ಕಾಲಿಕ ಬದಲಾವಣೆ ತಂದಿದ್ದಾರೆ.

* ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ಕ್ವೀನ್ಸ್‌ ವೃತ್ತದ ಕಡೆಯಿಂದ ಸಿದ್ದಲಿಂಗಯ್ಯ ವತ್ತದ ಕಡೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ರಸ್ತೆ ಬಳಕೆದಾರರು ಕ್ವೀನ್ಸ್‌ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು ಲ್ಯಾವೆಲ್ಲೆ ರಸ್ತೆ ಅಥವಾ ಕ್ವೀನ್ಸ್‌ ರಸ್ತೆ ಮೂಲಕ ಸಂಚರಿಸಬಹುದು

*ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್‌ ವೃತ್ತದ ಕಡೆಗೆ ತೆರಳುವ ವಾಹನಗಳು ಪಟ್ಟಾಜಂಕ್ಷನ್‌ನಲ್ಲಿ ಪೊಲೀಸ್‌ ತಿಮ್ಮಯ್ಯ ವೃತ್ತದ ಕಡೆಗೆ ಡೈವರ್ಷನ್‌ ತೆಗೆದುಕೊಳ್ಳಬೇಕು. ಬಿಎಂಟಿಸಿ ಹಾಗೂ ಇತರೆ ವಾಹನಗಳು ಪೊಲೀಸ್‌ ತಿಮ್ಮಯ್ಯ ವೃತ್ತದಲ್ಲಿ ಎಡ ತಿರುವು ಪಡೆದು ಕೆ.ಆರ್‌.ಸರ್ಕಲ್‌ ಮುಖೇನ ಸಂಚರಿಸಬಹುದು

*ಸಿಟಿಓ ವೃತ್ತದಿಂದ ಕ್ವೀನ್ಸ್‌ ವೃತ್ತದ ಕಡೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ರಸ್ತೆ ಬಳೆಕೆದಾರರು ಕಬ್ಬನ್‌ ರಸ್ತೆಯ ಮುಖೇನ ಅನೀಲ್‌ ಕುಂಬ್ಳೆ ವೃತ್ತದ ಕಡೆಗೆ ಅಥವಾ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಬಹುದು

*ಹಲಸೂರು ಗೇಟ್‌ ಕಡೆಯಿಂದ ಸಿದ್ದಲಿಂಗಯ್ಯ ಸರ್ಕಲ್‌ ಕಡೆಗೆ ಹೋಗುವ ವಾಹನಗಳು ದೇವಾಂಗ ಜಂಕ್ಷನ್‌ ಹಾಗೂ ಮಿಷನ್‌ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ

ಎಲ್ಲೆಲ್ಲಿ ಪಾರ್ಕಿಂಗ್‌?

*ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳ ವಾಹನಗಳನ್ನು ಸೇಂಟ್‌ ಜೋಸೆಫ್‌ ಕಾಲೇಜು ಮೈದಾನ
*ಇತರೆ ವಾಹನಗಳಿಗೆ ಬಿಬಿಎಂಪಿ ಮುಖ್ಯ ಕಚೇರಿ ಆವರಣ, ಬದಾಮಿ ಹೌಸ್‌, ಕೆ.ಜಿ, ರಸ್ತೆಯ ಎಡ ಬದಿಯಲ್ಲಿ ಹಾಗೂ ಯುನೈಟೆಡ್‌ ಮಿಷನ್‌ ಕಾಲೇಜ್‌ ಮೈದಾನ
*ರಾಜಾರಾಮ ಮೋಹನ್‌ ರಾಯ್‌ ರಸ್ತೆ ಹಾಗೂ ಕಸ್ತೂರಾಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಬಂರ್‍ಧ
* ಕಾರ್ಯಕ್ರಮಕ್ಕೆ ಆಗಮಿಸಿರುವ ಆಹ್ವಾನಿತರು ತಮ್ಮ ವಾಹನಗಳಿಂದ ಇಳಿದು ಕೆ.ಬಿ.ರಸ್ತೆ, ರಾಜಾರಾಮ ಮೋಹನ್‌ ರಾಯ್‌ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಗಳ ಗೇಟ್‌ಗಳ ಮೂಲಕ ನಡೆದು ಕಂಠೀರವ ಕ್ರೀಡಾಂಗಣ ಪ್ರವೇಶಿಸಬೇಕು
*ಸಾರ್ವಜನಿಕರು ಕೆ.ಜಿ.ರಸ್ತೆಯ ಎಸ್‌ಬಿಎಂ ಜಂಕ್ಷನ್‌, ರಿಚ್ಮಂಡ್‌ ಸರ್ಕಲ್‌, ಕ್ವೀನ್ಸ್‌ ಸರ್ಕಲ್‌ ಬಳಿ ತಮ್ಮ ವಾಹನ ಇಳಿದು ತಮ್ಮ ವಾಹನಗಳನ್ನು ಅರಮನೆ ಮೈದಾನದಲ್ಲಿ ನಿಲುಗಡೆ ಮಾಡಬೇಕು

ಸಾರ್ವಜನಿಕರಿಗೆ ಸೂಚನೆಗಳು:

*ಸಮಾರಂಭದ ಸ್ಥಳದಲ್ಲಿ ಯಾವುದೇ ರೀತಿಯ ಸ್ಫೋಟಕ, ಚೂಪಾದ ವಸ್ತುಗಳು, ಬೆಂಕಿಪೊಟ್ಟಣ, ಲೈಟರ್‌ ಇತ್ಯಾದಿಗಳನ್ನು ಕೊಂಡೊಯ್ಯುವುದಕ್ಕೆ ನಿರ್ಬಂಧ
*ರಸ್ತೆ ಬಳಕೆದಾರರು ಸಂಚಾರ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಬೇಕು
*ನಗರದ ಯಾವುದಾದರೂ ರಸ್ತೆಯಲ್ಲಿ ವಾಹನ ಕೆಟ್ಟು ನಿಂತಲ್ಲಿ ಅಥವಾ ಅಪಘಾತ ಸಂಭವಿಸಿದ್ದಲ್ಲಿ ಕೂಡಲೇ ಸಂಚಾರ ನಿಯಂತ್ರಣ ಕೊಠಡಿ- ದೂರವಾಣಿ ಸಂಖ್ಯೆ- 080 22943131 ಅಥವಾ 080 22943030 ಕರೆ ಮಾಡಬೇಕು
* ಮುಖ್ಯ ಕೆಲಸಗಳಿಗೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ತೆರಳಿಗೆ ತೆರಳಲು ಇಚ್ಛಿಸುವವರು ಬೆಳಗ್ಗೆ ಬೇಗ ಪ್ರಯಾಣ ಆರಂಭಿಸಿ

ಸಿದ್ದರಾಮಯ್ಯ ಅವರೇ ಶಾಸಕಿಯರಿಗೆ ಪ್ರಮುಖ ಖಾತೆ ನೀಡಿ: ಪೂಜಾ ಗಾಂಧಿ

ಸಿಇಟಿ ವಿದ್ಯಾರ್ಥಿಗಳಿಗೆ ಸೂಚನೆಗಳು

*ಶನಿವಾರ ಸಿಇಟಿ ಪರೀಕ್ಷೆಗೆ ಕಂಠೀರವ ಕ್ರೀಡಾಂಗಣ ಸಮೀಪದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಬೆಳಗ್ಗೆ 8.30ರ ಒಳಗೆ ಪರೀಕ್ಷಾ ಕೇಂದ್ರ ತಲುಪಬೇಕು
*ವಿದ್ಯಾರ್ಥಿಗೆ ಸಂಚಾರ ಸಂಬಂಧ ಸಹಾಯ ಬೇಕಿದ್ದಲ್ಲಿ ರಸ್ತೆಯಲ್ಲಿ ಕರ್ತವ್ಯ ನಿರತ ಸಂಚಾರ ಪೊಲೀಸರನ್ನು ಸಂಪರ್ಕಿಸಬಹುದು
*ಮಧ್ಯಾಹ್ನ ಸಿಇಟಿ ಪರೀಕ್ಷೆಗೆ ಸೇಂಟ್‌ ಜೋಸೆಫ್‌ ಪಿಯು ಇಂಡಿಯನ್‌ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸೇಂಟ್‌ ಮಾರ್ಕ್ಸ್ ರಸ್ತೆ, ವಿಠಲ್‌ ಮಲ್ಯ ರಸ್ತೆ ಮೂಲಕ ಬಂದು ಯುಬಿ ಸಿಟಿಯ ಮುಂಭಾಗದ ಗೇಟ್‌ನಿಂದ ಕಾಲೇಜು ಪ್ರವೇಶಿಸಬೇಕು
*ಸೇಂಟ್‌ ಜೋಸೆಫ್‌ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಊಟೋಪಾಚಾರ ಏರ್ಪಡಿಸಿದೆ
*ಸೇಂಟ್‌ ಜೋಸೆಫ್‌ ಕಾಲೇಜಿಗೆ ಪರೀಕ್ಷೆಗಾಗಿ ಬರುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು ಸಂಚಾರ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಎಸಿಪಿ ಸಂಚಾರ ಯೋಜನೆ- ಮೊಬೈಲ್‌ ಸಂಖ್ಯೆ 9480801809ಗೆ ಸಂಪಕಿಸಬಹುದು.

click me!