ಪೊಲೀಸರ ರಕ್ಷಣೆಯೂ ನಾಗರಿಕ ಕರ್ತವ್ಯ: ನ್ಯಾ.ಮಲ್ಲಿಕಾರ್ಜುನಗೌಡ

By Kannadaprabha News  |  First Published Oct 22, 2022, 7:32 AM IST
  • ಪæäಲೀಸರ ರಕ್ಷಣೆಯೂ ನಾಗರಿಕ ಕರ್ತವ್ಯ: ನ್ಯಾ.ಮಲ್ಲಿಕಾರ್ಜುನಗೌಡ
  • ಡಿಎಆರ್‌ ಮೈದಾನದಲ್ಲಿ ಪೊಲೀಸ್‌ ಹುತಾತ್ಮರ ದಿನ ಕಾರ್ಯಕ್ರಮ

ಶಿವಮೊಗ್ಗ (ಅ.22) : ಎಲ್ಲಿಯವರೆಗೆ ಸಮಾಜದಲ್ಲಿ ಅಧರ್ಮ, ಅನೀತಿ ಇರುತ್ತದೆಯೋ ಅಲ್ಲಿಯವರೆಗೆ ಪೊಲೀಸ್‌ ಮತ್ತು ನ್ಯಾಯಾಲಯಗಳು ಇರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹೇಳಿದರು. ನಗರದ ಡಿಎಆರ್‌ ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆ- 2022 ಕಾರ್ಯಕ್ರಮದಲ್ಲಿ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.

ಗುಮ್ಮಟನಗರಿಯಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ, ವಿಜಯಪುರ ಪೊಲೀಸರನ್ನ ಹೊಗಳಿದ ಡಿಸಿ!

Tap to resize

Latest Videos

ಪೊಲೀಸರು ಮತ್ತು ಸೈನಿಕರು ತಮ್ಮ ಪ್ರಾಣ ಒತ್ತೆಯಿಟ್ಟು ದೇಶ ಕಾಪಾಡುತ್ತಿದ್ದಾರೆ. ಅವರ ತ್ಯಾಗ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇಂದು ನಮಗೆಲ್ಲರಿಗೂ ದುಃಖದ ದಿನ. ಎಲ್ಲವೂ ಪೊಲೀಸರ ಕೆಲಸ ಅಲ್ಲ. ನಮ್ಮನ್ನು ರಕ್ಷಣೆ ಮಾಡುತ್ತಿರುವ ಪೊಲೀಸರ ಹಿತಕಾಯುವುದು ಕೂಡ ನಾಗರಿಕರ ಕರ್ತವ್ಯವಾಗಿದೆ ಎಂದರು.

ಸಮಾಜದಲ್ಲಿ ಸಂಘರ್ಷವಾದಾಗ ಮೊದಲು ನೆನಪಿಗೆ ಬರುವುದೇ ಪೊಲೀಸರು. ಜನರ ಸಂದಿಗ್ಧ ಹಾಗೂ ಕಷ್ಟಕಾಲದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿವಹಿಸುತ್ತಾರೆ. ಪ್ರಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಪೊಲೀಸರ ಸ್ಮರಣೆ ಮಾಡಿದರು.

ಪೊಲೀಸರ ಕರ್ತವ್ಯ ನಿಷ್ಠಯಿಂದ ಪ್ರತಿಯೊಬ್ಬರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಹಬ್ಬ, ಹರಿದಿನಗಳಲ್ಲಿ ಅಹಿತರ ಘಟನೆ ಘಟಿಸದಂತೆ ಕಾನೂನು ಮತ್ತು ಅಪರಾಧ ಪತ್ತೆ ಹಚ್ಚುವ ಕೆಲಸ ಮಾಡಿ ಜನ ಸಾಮಾನ್ಯರ ಆಸ್ತಿ-ಪಾಸ್ತಿ, ಜೀವನ ರಕ್ಷಣೆಗೆ ಪೊಲೀಸ್‌ ಇಲಾಖೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಶ್ರೀನರದಲ್ಲಿ ಉಗ್ರರ ಗುಂಡಿನ ದಾಳಿಗೆ 29 ವರ್ಷದ ಪೊಲೀಸ್ ಹುತಾತ್ಮ!

ಅವರು ಕೂಡ ನಮ್ಮಂತೆ ಮನುಷ್ಯರೆ. ನಾವು ನೀತಿವಂತರಾಗಿ, ಧರ್ಮವಂತರಾಗಿ ಇದ್ದಾಗ ಪೊಲೀಸರ ಅಗತ್ಯತೆ ಇರುವುದಿಲ್ಲ. ನಡೆ-ನುಡಿ ಒಂದೇ ಇರಬೇಕು. ಆ ಮನುಷ್ಯನಿಗೆ ಬೆಲೆ ಇರುತ್ತದೆ. ಅವನ ನಡೆಯಿಂದ ಸಮಾಜ ಅವನಿಗೆ ಗೌರವಿಸಬೇಕು. ಹುತಾತ್ಮರಾದವರು ಸಮಾಜಕ್ಕಾಗಿ ಹಗಲು ರಾತ್ರಿ ದುಡಿದಿದ್ದಾರೆ. ಅವರನ್ನೆಲ್ಲ ಗೌರವಿಸುವುದು ಸಮಾಜದ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್‌ ಸಂತಾಪ ಸೂಚಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಮ್‌ ಆಮ್ಟೆ, ನಿವೃತ್ತ ಪೊಲೀಸ್‌ ಅಧಿಕಾರಿಗಳು, ಜಿಲ್ಲಾ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

click me!