ಕಲಬುರಗಿ ಜಿಲ್ಲೆಯಿಂದ ಬಂದ ಪೊಲೀಸರು ವಾಪಸ್‌

By Kannadaprabha News  |  First Published Apr 18, 2020, 1:07 PM IST

ಕೊರೋನಾ ವೈರಸ್‌ಪೀಡಿತ ಕಲಬುರಗಿಯಿಂದ ಮೂಡಿಗೆರೆ ತಾಲೂಕಿನ ಕಳಸಕ್ಕೆ 15 ಮಂದಿ ಪೊಲೀಸರು ಬಂದಿದ್ದು, ಇದರಿಂದ ಜನರಲ್ಲಿ ಆತಂಕ ಎದುರಾಗಿದೆ.


ಚಿಕ್ಕಮಗಳೂರು(ಏ.18): ಕೊರೋನಾ ವೈರಸ್‌ಪೀಡಿತ ಕಲಬುರಗಿಯಿಂದ ಮೂಡಿಗೆರೆ ತಾಲೂಕಿನ ಕಳಸಕ್ಕೆ 15 ಮಂದಿ ಪೊಲೀಸರು ಬಂದಿದ್ದು, ಇದರಿಂದ ಜನರಲ್ಲಿ ಆತಂಕ ಎದುರಾಗಿತ್ತು.

ಕಳಸದ ಸುತ್ತಮುತ್ತ ನಕ್ಸಲ್‌ಪೀಡಿತ ಪ್ರದೇಶ. ಇಲ್ಲಿ ಹಾಸನದ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು. ಈ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ ಕಲಬುರಗಿಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.

Tap to resize

Latest Videos

15 ದಿನಗಳಲ್ಲಿ 11 ಕಾಡುಪ್ರಾಣಿಗಳ ಸಾವು: ಆತಂಕ

ಕಲಬುರಗಿ ಈಗ ಕೊರೋನಾ ವೈರಸ್‌ ಪೀಡಿತ ಜಿಲ್ಲೆ. ಇಂತಹ ಸಂದರ್ಭದಲ್ಲಿ ಪೊಲೀಸರನ್ನು ಇಲ್ಲಿಗೆ ನಿಯೋಜನೆ ಮಾಡಿರುವುದು ಸರಿಯಲ್ಲ. ಅವರನ್ನು ಕೂಡಲೇ ವಾಪಸ್‌ ಕಳುಹಿಸಿ ಹಾಸನದ ಸಿಬ್ಬಂದಿಯನ್ನು ಮುಂದುವರಿಸುವಂತೆ ಸ್ಥಳೀಯರು ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಕೋರಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಈಗಾಗಲೇ ಸಿಬ್ಬಂದಿಯನ್ನು ವಾಪಸ್‌ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.

click me!