ಕೋವಿಡ್-19 ವೈರಸ್ ಭೀತಿಯಿಂದ ಪಟ್ಟಣದಲ್ಲಿ ವಾರದ ಸಂತೆಯನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಸೋಮವಾರ ಎಂದಿನಂತೆ ಮಾರುಕಟ್ಟೆಗೆ ಆಗಮಿಸಿದ್ದ ಜನರನ್ನು ಪೊಲೀಸರು ಓಡಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಸೋಮವಾರಪೇಟೆ(ಜು.07): ಕೋವಿಡ್-19 ವೈರಸ್ ಭೀತಿಯಿಂದ ಪಟ್ಟಣದಲ್ಲಿ ವಾರದ ಸಂತೆಯನ್ನು ರದ್ದುಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಸೋಮವಾರ ಎಂದಿನಂತೆ ಮಾರುಕಟ್ಟೆಗೆ ಆಗಮಿಸಿದ್ದ ಜನರನ್ನು ಪೊಲೀಸರು ಓಡಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣ ಪಂಚಾಯಿತಿಯ ಸಂತೆ ಮಾರುಕಟ್ಟೆಗೆ ಬೆಳಗ್ಗಿನಿಂದಲೇ ತರಕಾರಿ ಹಾಗೂ ದಿನಸಿ ಮಾರಾಟಗಾರರು ಆಗಮಿಸಿ ಅಂಗಡಿಗಳನ್ನು ತೆರೆದಿದ್ದರು. ಗ್ರಾಮೀಣ ಭಾಗಗಳಿಂದಲೂ ಆಗಮಿಸಿದ್ದ ಜನರು ತರಕಾರಿ ಹಾಗೂ ದಿನಸಿ ಖರೀದಿಗೆ ಮುಗಿಬಿದ್ದರು.
ಹಂಪಿ ಸೇರಿ ಪ್ರಮುಖ ಐತಿಹಾಸಿಕ ತಾಣಗಳೀಗ ಪ್ರವಾಸಿಗರಿಗೆ ಮುಕ್ತ!
ಇಲ್ಲಿ ಜನರು ಯಾವುದೇ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸಿರುವುದು ಕಂಡುಬರಲಿಲ್ಲ. ಸ್ಥಳಕ್ಕಗಮಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ನಿಯಮ ಪಾಲಿಸುವಂತೆ ಮನವಿ ಮಾಡಿದರೂ ವ್ಯಾಪಾರಸ್ಥರು ಸ್ಥಳದಿಂದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಲಿಲ್ಲ.
ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಅಂಗಡಿಗಳನ್ನು ತೆರವುಗೊಳಿಸುವ ಕೆಲಸ ಮಾಡಿದರು. ಖಾಸಗಿ ಬಸ್ ನಿಲ್ದಾಣದ ತರಕಾರಿ ಅಂಗಡಿಗಳಲ್ಲಿ ಜನರು ಒಬ್ಬರ ಮೇಲೆ ಒಬ್ಬರು ಬಿದ್ದು ಖರೀದಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಓಡಿಸಿದ ಘಟನೆ ನಡೆಯಿತು. ಅಂಗಡಿಗಳಲ್ಲಿ ಹೆಚ್ಚಿನ ಬೆಲೆ ನಿಗದಿಗೊಳಿಸಿ ಮಾರುತ್ತಿದ್ದಾರೆ.
ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಮಾಡಿದ್ದ ನೇತ್ರಾವತಿ ಸೇತುವೆಗೆ ತಡೆಬೇಲಿ
ಮೊದಲೇ ಕೆಲಸ ಇಲ್ಲ. ದುಬಾರಿ ಬೆಲೆ ನೀಡಿ ದಿನಸಿ ಹಾಗೂ ತರಕಾರಿ ಖರೀದಿಸಲು ಕಷ್ಟವಾಗುತ್ತಿದೆ ಎಂದು ಜನರು ದೂರಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಹಾಗೂ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಮಿತಿ ಮೀರಿತ್ತು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ರಸ್ತೆಯಲ್ಲಿ ಸಂಚಾರವೂ ಕಷ್ಟವಾಗಿತ್ತು.